ETV Bharat / bharat

2030ರ ವೇಳೆಗೆ ಬಹು ರಾಷ್ಟ್ರಗಳಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಳ: ಅಧ್ಯಯನ ವರದಿ

ಜಗತ್ತಿನ ಜನಸಂಖ್ಯಾ ಬದಲಾವಣೆ ಕುರಿತು ಜಾಗತಿಕ ವ್ಯವಹಾರ ಪ್ರಕಾಶನವಾದ CEOWORLD ಎಂಬ ಸಂಸ್ಥೆಯು ಮುಸ್ಲಿಂ ಜನಸಂಖ್ಯೆಯಲ್ಲಿ ಗಣನೀಯವಾದ ಹೆಚ್ಚಳದ ಬಗ್ಗೆ ಅಧ್ಯಯನ ವರದಿ ಮಾಡಿದೆ.

india-set-to-surpass-indonesia-as-worlds-largest-muslim-majority-country-by-2050-study
2030ರ ವೇಳೆಗೆ ಬಹು ರಾಷ್ಟ್ರಗಳಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚ
author img

By ETV Bharat Karnataka Team

Published : Feb 17, 2024, 8:34 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): 2030ರ ವೇಳೆಗೆ ಬಹು ರಾಷ್ಟ್ರಗಳಲ್ಲಿ ಮುಸ್ಲಿಂ ಜನಸಂಖ್ಯೆಯಲ್ಲಿ ಗಣನೀಯವಾದ ಹೆಚ್ಚಳ ಕಾಣಲಿದೆಯಂತೆ. ಈ ಜಗತ್ತಿನ ಜನಸಂಖ್ಯೆ ಬದಲಾವಣೆ ಕುರಿತು ಜಾಗತಿಕ ವ್ಯವಹಾರ ಪ್ರಕಾಶನವಾದ CEOWORLD ಎಂಬ ಸಂಸ್ಥೆಯ ಇತ್ತೀಚಿನ ಅಧ್ಯಯನ ಹೇಳಿದೆ. ಈ ಅಧ್ಯಯನವು ಗಮನಾರ್ಹ ಬದಲಾವಣೆಗಳಿಗೆ ಸಿದ್ಧವಾಗಿರುವ ದೇಶಗಳ ಬಗ್ಗೆಯೂ ಬೆಳಕು ಚೆಲ್ಲಿದೆ.

ಅಧ್ಯಯನದ ಪ್ರಕಾರ, ಭಾರತದ ಮುಸ್ಲಿಂ ಜನಸಂಖ್ಯೆಯು 2020 ಮತ್ತು 2030ರ ನಡುವೆ 35.62 ಮಿಲಿಯನ್​ನಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. 2050ರ ವೇಳೆಗೆ ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾದ ಇಂಡೋನೇಷ್ಯಾವನ್ನು ಮೀರಿಸುವ ಹಾದಿಯಲ್ಲಿದೆ. ಈಗ ಭಾರತವು ಜಾಗತಿಕ ಮುಸ್ಲಿಂ ಜನಸಂಖ್ಯೆಯಲ್ಲಿ ಪ್ರಸ್ತುತ ಮೂರನೇ ಸ್ಥಾನದಲ್ಲಿದೆ. ಮುಂಬರುವ ದಶಕಗಳಲ್ಲಿ ಭೌಗೋಳಿಕ ರಾಜಕೀಯ ಭೂದೃಶ್ಯವನ್ನು ಮರುರೂಪಿಸಬಹುದಾದ ಜನಸಂಖ್ಯಾ ಬದಲಾವಣೆಯನ್ನು ಕಾಣಲಿದೆಯಂತೆ. ಆದರೆ, ಭಾರತವು ಇಸ್ಲಾಮಿಕ್ ಸಹಕಾರ ಸಂಘಟನೆಯ (Organisation of Islamic Cooperation - OIC) ಸದಸ್ಯ ರಾಷ್ಟ್ರವಾಗಿಲ್ಲ ಎಂಬುದು ಗಮನಾರ್ಹ.

ನೆರೆಯ ಪಾಕಿಸ್ತಾನದಲ್ಲಿ ಒಟ್ಟು ಜನಸಂಖ್ಯೆಯ ಶೇ.96.5ರಷ್ಟು ಜನರು ಮುಸ್ಲಿಮರಿದ್ದಾರೆ. ಹಿಂದೂಗಳು ಮತ್ತು ಕ್ರಿಶ್ಚಿಯನ್ನರ ಅನುಪಾತವು ಕ್ರಮವಾಗಿ ಶೇ.1.9 ಮತ್ತು ಶೇ.1.6ರಷ್ಟಿದೆ. ಭಾರತದಲ್ಲಿ 2030ರ ವೇಳೆಗೆ ಸುಮಾರು 30 ಮಿಲಿಯನ್​ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುವ ನಿರೀಕ್ಷೆಯ ಹೊರತಾಗಿಯೂ, ದೇಶದೊಳಗಿನ ಧಾರ್ಮಿಕ ವೈವಿಧ್ಯತೆಯು ಸುಭದ್ರವಾಗಿ ಉಳಿಯುತ್ತದೆ ಎಂದು ಅಧ್ಯಯನವು ತಿಳಿಸಿದೆ.

ನೈಜೀರಿಯಾ ಪ್ರಸ್ತುತ ಮುಸ್ಲಿಂ ಜನಸಂಖ್ಯೆಯ ವಿಷಯದಲ್ಲಿ ಜಾಗತಿಕವಾಗಿ ಐದನೇ ಸ್ಥಾನ ಹೊಂದಿದೆ. ಇಲ್ಲಿ 2020 ಮತ್ತು 2030ರ ನಡುವೆ ಸುಮಾರು 35 ಮಿಲಿಯನ್​ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇದು ಮುಸ್ಲಿಂ ಜನಸಂಖ್ಯೆ ಬೆಳೆಯುತ್ತಿರುವ ಮಹತ್ವವನ್ನು ಒತ್ತಿಹೇಳುತ್ತದೆ. ಮತ್ತೊಂದೆಡೆ, 229 ಮಿಲಿಯನ್ ಮುಸ್ಲಿಮರನ್ನು ಹೊಂದಿರುವ ಇಂಡೋನೇಷ್ಯಾ, ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾಗಿದೆ. ಅದಲ್ಲದೇ, 2030ರ ವೇಳೆಗೆ ಈ ದೇಶದ ಮುಸ್ಲಿಂ ಜನಸಂಖ್ಯೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆ ಇದೆ.

ಮುಸ್ಲಿಂ ಜನಸಂಖ್ಯೆಯಲ್ಲಿ ಜಾಗತಿಕವಾಗಿ ನಾಲ್ಕನೇ ಸ್ಥಾನದಲ್ಲಿರುವ ಬಾಂಗ್ಲಾದೇಶದಲ್ಲಿ ಜನನ ಪ್ರಮಾಣವನ್ನು ನಿಯಂತ್ರಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೂ, ಗಮನಾರ್ಹ ಮುಸ್ಲಿಮರ ಜನಸಂಖ್ಯೆಯ ಹೆಚ್ಚಳದ ಜೊತೆಗೆ ಗಣನೀಯವಾದ ಹಿಂದೂ ಅಲ್ಪಸಂಖ್ಯಾತರನ್ನು (ಒಟ್ಟು ಜನಸಂಖ್ಯೆಯ ಶೇ.8.1ರಷ್ಟಿದ್ದಾರೆ) ಕಾಪಾಡಿಕೊಳ್ಳುವ ಸವಾಲನ್ನು ಎದುರಿಸುತ್ತಿದೆ. ಜನಸಂಖ್ಯೆಯ ಈ ಬದಲಾವಣೆಗಳು ಶಿಕ್ಷಣ, ಆರೋಗ್ಯ ರಕ್ಷಣೆ, ಆರ್ಥಿಕ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಮೇಲೆ ಪರಿಣಾಮ ಬೀರಬಹುದು ಎಂದೂ ಅಧ್ಯಯನವು ಎಚ್ಚರಿಸಿದೆ.

ಇದನ್ನೂ ಓದಿ: ಸತತ ಎರಡನೇ ವರ್ಷ ಚೀನಾ ಜನಸಂಖ್ಯೆ ಕುಸಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.