ETV Bharat / bharat

ಜಾಗತಿಕ ಭ್ರಷ್ಟಾಚಾರ ಸೂಚ್ಯಂಕ: ಭಾರತದ ಸ್ಥಾನ ಎಷ್ಟು?

author img

By ETV Bharat Karnataka Team

Published : Jan 30, 2024, 9:36 PM IST

ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ ಬಿಡುಗಡೆ ಮಾಡಿರುವ ಜಾಗತಿಕ ಭ್ರಷ್ಟಾಚಾರ ಸೂಚ್ಯಂಕದಲ್ಲಿ ಭಾರತ ಈ ವರ್ಷ ಕೆಳ ಕ್ರಮಾಂಕಕ್ಕೆ ಕುಸಿದಿದೆ.

ಜಾಗತಿಕ ಭ್ರಷ್ಟಾಚಾರ ಸೂಚ್ಯಂಕ
ಜಾಗತಿಕ ಭ್ರಷ್ಟಾಚಾರ ಸೂಚ್ಯಂಕ

ನವದೆಹಲಿ: ವಿಶ್ವದ 5ನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿರುವ ಭಾರತದಲ್ಲಿ ಭ್ರಷ್ಟಾಚಾರ ಪ್ರಮಾಣ ಇಳಿಕೆಯಾಗಿಲ್ಲ. ಭ್ರಷ್ಟಾಚಾರವನ್ನು ಮೌಲ್ಯಮಾಪನ ಮಾಡುವ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ ಬಿಡುಗಡೆ ಮಾಡಿರುವ 2023ನೇ ಸಾಲಿನ ಜಾಗತಿಕ ಭ್ರಷ್ಟಾಚಾರ ಸೂಚ್ಯಂಕದಲ್ಲಿ 180 ರಾಷ್ಟ್ರಗಳ ಪೈಕಿ ಭಾರತ 93ನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕಿಂತಲೂ ಅತಿ ಕಳಪೆ ಮಟ್ಟಕ್ಕೆ ತಲುಪಿದೆ.

2022 ರಲ್ಲಿ ಭಾರತವು 85 ನೇ ಕ್ರಮಾಂಕದಲ್ಲಿತ್ತು. ಈ ವರ್ಷ 93 ರಲ್ಲಿದ್ದು, 8 ಸ್ಥಾನ ಇಳಿಕೆ ಕಂಡಿದೆ. ಚುನಾವಣೆ ಕಾಲವಾದ ಕಾರಣ ಭಾರತದಲ್ಲಿನ ವ್ಯವಸ್ಥೆಯ ಬಗ್ಗೆ ನಿಖರವಾಗಿ ನಿರ್ಧರಿಸುವುದು ಸಂಸ್ಥೆಗೆ ಸವಾಲಾಗಿತ್ತು. ಚುನಾವಣೆ ಮತ್ತು ದೂರಸಂಪರ್ಕ ಮಸೂದೆಯು ಮೂಲ ಹಕ್ಕುಗಳಿಗೆ ಸಂಭಾವ್ಯ ಅಪಾಯವನ್ನುಂಟು ಮಾಡುತ್ತದೆ ಎಂದು ತನ್ನ ವರದಿಯಲ್ಲಿ ಹೇಳಿದೆ.

ಸೂಚ್ಯಂಕವು 0 ರಿಂದ 100 ರ ಪ್ರಮಾಣದಲ್ಲಿ ಸಾರ್ವಜನಿಕ ವಲಯದಲ್ಲಿನ ಭ್ರಷ್ಟಾಚಾರದ ಮಟ್ಟವನ್ನು ಮೌಲ್ಯಮಾಪನ ಮಾಡುತ್ತದೆ. ಸೊನ್ನೆಯಲ್ಲಿರುವ ದೇಶವು ಹೆಚ್ಚಿನ ಭ್ರಷ್ಟಾಚಾರದಿಂದ ಕೂಡಿದ್ದರೆ, 100 ಅಂಕ ಪಡೆದ ರಾಷ್ಟ್ರವು ಅತ್ಯಂತ ಶುದ್ಧ ವ್ಯವಸ್ಥೆ ಹೊಂದಿರುವುದನ್ನು ಸೂಚಿಸುತ್ತದೆ. ಇದರಲ್ಲಿ ಭಾರತ 39 ಅಂಕಗಳನ್ನು ಹೊಂದಿದೆ.

ನೆರೆ ರಾಷ್ಟ್ರಗಳ ಪರಿಸ್ಥಿತಿ ಹೇಗಿದೆ?: ಭಾರತ ಹೊರತಾಗಿ ನೆರೆ ರಾಷ್ಟ್ರಗಳಾದ ಪಾಕಿಸ್ತಾನ (133) ಮತ್ತು ಶ್ರೀಲಂಕಾ (115), ಬಾಂಗ್ಲಾದೇಶ (149), ಅಫ್ಘಾನಿಸ್ತಾನ (162), ಚೀನಾ(76), ಜಪಾನ್ (16) ನೇ ಸ್ಥಾನ ಪಡೆದಿವೆ. ಇದರಲ್ಲಿ ಆಫ್ಘಾನಿಸ್ತಾನ ಅತಿ ಕಡಿಮೆ ಕ್ರಮಾಂಕ ಪಡೆಯುವ ಮೂಲಕ ಏಷ್ಯಾ ಖಂಡದಲ್ಲಿಯೇ ಅತಿ ಭ್ರಷ್ಟ ದೇಶ ಎಂಬ ಕುಖ್ಯಾತಿ ಪಡೆದಿದೆ.

ಬಾಂಗ್ಲಾದೇಶ 149 ನೇ ಸ್ಥಾನ ಪಡೆಯುವ ಮೂಲಕ ಅತಿ ಕಡಿಮೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಿದೆ. ಅಲ್ಲಿನ ಆರ್ಥಿಕ ಬೆಳವಣಿಗೆಯು ಕುಂಠಿತವಾಗಿದ್ದು, ಬಡತನ ಪ್ರಮಾಣ ಇಳಿಕೆಯಾಗುತ್ತಿರುವುದು ಆಶಾಭಾವ ಮೂಡಿಸಿದೆ. ಭಾರತದ ಪ್ರಬಲ ಸ್ಪರ್ಧಿಯಾದ ಚೀನಾ ಸೂಚ್ಯಂಕದಲ್ಲಿ 76 ನೇ ಸ್ಥಾನದಲ್ಲಿದೆ. ಆಕ್ರಮಣಕಾರಿ ಭ್ರಷ್ಟಾಚಾರ ವಿರೋಧಿ ಕ್ರಮಗಳಿಗಾಗಿ ಉತ್ತಮ ಪ್ರಗತಿಯಲ್ಲಿದೆ. ಹಲವು ಒಂದು ದಶಕದಲ್ಲಿ ಹಲವು ಭ್ರಷ್ಟ ಅಧಿಕಾರಿಗಳನ್ನು ಕಠಿಣವಾಗಿ ಶಿಕ್ಷಿಸಿದೆ. ಸತತ ಐದು ವರ್ಷಗಳಿಂದ ಭ್ರಷ್ಟಾಚಾರ ತಗ್ಗಿಸುವ ಪಟ್ಟಿಯಲ್ಲಿ 45 ಅಂಕ ಪಡೆದುಕೊಂಡಿದೆ.

ಇತ್ತ ಡೆನ್ಮಾರ್ಕ್​ ಪ್ರತಿವರ್ಷದಂತೆ ಭ್ರಷ್ಟಾಚಾರ ರಹಿತ ದೇಶವಾಗಿ ಮುಂದುವರೆದಿದೆ. ನ್ಯೂಜಿಲೆಂಡ್ (3) ಮತ್ತು ಸಿಂಗಾಪುರ (5), ಆಸ್ಟ್ರೇಲಿಯಾ, ಹಾಂಕಾಂಗ್​ ಜಂಟಿ 14 ನೇ ಸ್ಥಾನ, ಜಪಾನ್ (16), ಭೂತಾನ್ (26), ತೈವಾನ್ (28) ಮತ್ತು ದಕ್ಷಿಣ ಕೊರಿಯಾ (32) ನೇ ಸ್ಥಾನದಲ್ಲಿವೆ.

ಇದನ್ನೂ ಓದಿ: ₹3 ಕೋಟಿ ಮೌಲ್ಯದ ಇ-ಸಿಗರೇಟುಗಳನ್ನ ಸಂಗ್ರಹಿಸಿಟ್ಟಿದ್ದ ಕೇರಳ ಮೂಲದ ಆರೋಪಿ ಅರೆಸ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.