ETV Bharat / bharat

ಸಿರಿಧಾನ್ಯಗಳ ಮೂಲಕ ಭಾರತಕ್ಕೆ ಪೌಷ್ಠಿಕಾಂಶ ಭದ್ರತೆಯ ಅಗತ್ಯವಿದೆ: ಡಾ.ಸೌಮ್ಯ ಸ್ವಾಮಿನಾಥನ್​

ಭಾರತ ಆಹಾರ ಭದ್ರತೆಯನ್ನು ಸಾಧಿಸುತ್ತಿದೆ. ಆದರೆ ಪೌಷ್ಠಿಕಾಂಶ ಭದ್ರತೆಯ ಕೊರತೆ ಇನ್ನೂ ಇದೆ ಎಂದು ಡಾ.ಸೌಮ್ಯ ಸ್ವಾಮಿನಾಥನ್​ ಆತಂಕ ವ್ಯಕ್ತಪಡಿಸಿದ್ದಾರೆ.

Dr. Soumya Swaminathan with representative of ETV Bharat
'ಈಟಿವಿ ಭಾರತ್'​ ಪ್ರತಿನಿಧಿಯೊಂದಿಗೆ ಡಾ.ಸೌಮ್ಯ ಸ್ವಾಮಿನಾಥನ್​ ಮಾತು (ETV Bharat)
author img

By ETV Bharat Karnataka Team

Published : Nov 12, 2024, 8:31 AM IST

ಭವನೇಶ್ವರ: ಒಡಿಶಾ ಸರ್ಕಾರದ ವತಿಯಿಂದ ಭುವನೇಶ್ವರದಲ್ಲಿ ಭಾನುವಾರ ಹಾಗೂ ಸೋಮವಾರ ಸಿರಿಧಾನ್ಯ ದಿನ ಕಾರ್ಯಕ್ರಮ ನಡೆಯಿತು. ಎರಡು ದಿನಗಳ ಕಾರ್ಯಕ್ರಮದಲ್ಲಿ ಖ್ಯಾತ ವಿಜ್ಞಾನಿ ಹಾಗೂ ಜಾಗತಿಕ ಆರೋಗ್ಯ ನಾಯಕಿ ಡಾ.ಸೌಮ್ಯ ಸ್ವಾಮಿನಾಥನ್​ ಭಾಗವಹಿಸಿದ್ದರು. ಸಿರಿಧಾನ್ಯ ಸಮ್ಮೇಳನದಲ್ಲಿ ಶ್ರೀ ಅನ್ನ ಅಭಿಯಾನ ಹಾಗೂ ಮರೆತುಹೋದ ಆಹಾರಗಳ ಕುರಿತು ಸಮ್ಮೇಳನವೂ ನಡೆಯಿತು.

ಈ ವೇಳೆ ಡಾ.ಸೌಮ್ಯ ಸ್ವಾಮಿನಾಥನ್​ ಅವರನ್ನು ಈಟಿವಿ ಭಾರತ್​ ಪ್ರತಿನಿಧಿ ಮಾತಿಗೆಳೆದಿದ್ದು, ಭಾರತದ ವಿಕಸನಗೊಳ್ಳುತ್ತಿರುವ ಆಹಾರ ಪದ್ಧತಿಯ ಪರಿಸ್ಥಿತಿ, ಸೀಮಿತ ಬೆಳೆ, ವೈವಿಧ್ಯತೆಯ ಆರೋಗ್ಯ ಪರಿಣಾಮಗಳು, ಪೌಷ್ಟಿಕಾಂಶ ಮತ್ತು ಪರಿಸರದ ಸವಾಲುಗಳನ್ನು ಎದುರಿಸುವಲ್ಲಿ ಸಿರಿಧಾನ್ಯಗಳು ನಿರ್ಣಾಯಕ ಪಾತ್ರವನ್ನು ವಹಿಸುವ ಬಗ್ಗೆ ಅವರು ಅಭಿಪ್ರಾಯ ಹಂಚಿಕೊಂಡರು. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಈಟಿವಿ ಭಾರತ ಪ್ರತಿನಿಧಿ: ಇತ್ತೀಚಿನ ವರ್ಷಗಳಲ್ಲಿ ಜನರ ಆಹಾರ ಪದ್ಧತಿ ಹೇಗೆ ಬದಲಾಗಿದೆ?. ಪೌಷ್ಠಿಕಾಂಶ ಮತ್ತು ಹವಾಮಾನ ಸಂಬಂಧಿತ ಸವಾಲುಗಳನ್ನು ಸಿರಿಧಾನ್ಯ ಹೇಗೆ ಪರಿಹರಿಸಬಲ್ಲದು?

ಡಾ.ಸ್ವಾಮಿನಾಥನ್: ನಾವು ಸಾಂಪ್ರದಾಯಿಕ ಭಾರತೀಯ ಆಹಾರ ಪದ್ಧತಿಯತ್ತ ಒಮ್ಮೆ ಹಿಂತಿರುಗಿ ನೋಡಿದರೆ, ದೇಹಕ್ಕೆ ಬೇಕಾದ ಸಮತೋಲಿತ ಪೋಷಣೆ ಒದಗಿಸುವಂತಹ ಸಮೃದ್ಧ, ವೈವಿಧ್ಯಮಯವಾದ ಆಹಾರಗಳು ಅದರಲ್ಲಿದ್ದವು. ಆದರೆ ನಂತರದ ವರ್ಷಗಳಲ್ಲಿ ಅಕ್ಕಿ, ಗೋಧಿ ಮತ್ತು ಜೋಳದಂತಹ ಕೆಲವು ಪ್ರಮುಖ ಬೆಳೆಗಳು ಮಾತ್ರ ನಮ್ಮ ಆಹಾರಗಳಲ್ಲಿ ಪ್ರಾಬಲ್ಯ ಸಾಧಿಸಿದವು. ಹೆಚ್ಚಿನ ಇಳುವರಿ ನೀಡುವ ತಳಿಗಳು ಮತ್ತು ಸರ್ಕಾರದ ಬೆಂಬಲದಿಂದಾಗಿ ಈ ಬೆಳೆಗಳೇ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿವೆ. ನಮ್ಮ ಆಹಾರ ಸೇವನೆಯಲ್ಲಿನ ಬದಲಾವಣೆ ಮತ್ತು ಆಹಾರದಲ್ಲಿನ ವೈವಿಧ್ಯತೆ ಕಡಿಮೆಯಾಗಲು ಇದು ಕಾರಣ. ಮಾತ್ರವಲ್ಲ ಬೊಜ್ಜು, ಮಧುಮೇಹ, ಅಪೌಷ್ಟಿಕತೆ, ರಕ್ತಹೀನತೆ ಮತ್ತು ಕ್ಯಾಲ್ಸಿಯಂ ಮತ್ತು ಅಗತ್ಯವಾದ ಜೀವಸತ್ವಗಳ ಕೊರತೆ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಿದೆ. ನಾವು ಆಹಾರ ಭದ್ರತೆಯನ್ನು ಸಾಧಿಸಿದ್ದೇವೆ, ಆದರೆ ಇನ್ನೂ ಅನೇಕ ಜನರು ಸೂಕ್ಷ್ಮ ಪೋಷಕಾಂಶಗಳು ಮತ್ತು ಪ್ರೋಟಿನ್‌ಗಳ ಕೊರತೆಯನ್ನು ಹೊಂದಿದ್ದು, ಪೌಷ್ಟಿಕಾಂಶದ ಭದ್ರತೆಯ ಕೊರತೆ ಇನ್ನೂ ಇದೆ.

ಸಿರಿಧಾನ್ಯ ಬೆಳೆಗಳಿಗೆ ಅಕ್ಕಿಗಿಂತ ಕಡಿಮೆ ನೀರು ಹಾಗೂ ಗೊಬ್ಬರ ಸಾಕಾಗುವುದರಿಂದ, ಇವು ಭಾರತಕ್ಕೆ ಬಹಳ ಸೂಕ್ತವಾಗಿದೆ. ಭವಿಷ್ಯದಲ್ಲಿ ನೀರಿನ ಕೊರತೆಯ ಸಮಯದಲ್ಲಿ ಸಿರಿಧಾನ್ಯ ಹೆಚ್ಚು ಸಮರ್ಥನೀಯವಾಗಿರುತ್ತದೆ. ಪೌಷ್ಠಿಕವಾಗಿ ನೋಡುವುದಾದರೂ ಸಿರಿಧಾನ್ಯಗಳಲ್ಲಿ ಫೈಬರ್, ಪ್ರೋಟಿನ್, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಇತರ ಅಗತ್ಯ ಸೂಕ್ಷ್ಮ ಪೋಷಕಾಂಶಗಳು ಸಮೃದ್ಧವಾಗಿವೆ. ಇದು ಪೌಷ್ಟಿಕಾಂಶದ ಕೊರತೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ನಾವು ಅಕ್ಕಿಯನ್ನು ಸಂಪೂರ್ಣವಾಗಿ ತ್ಯಜಿಸುವ ಅಗತ್ಯವಿಲ್ಲದಿದ್ದರೂ, ಆರೋಗ್ಯ ಮತ್ತು ಪರಿಸರ ಸುಸ್ಥಿರತೆ ಎರಡನ್ನೂ ಬೆಂಬಲಿಸುವ ಸಿರಿಧಾನ್ಯಗಳಂತಹ ಪೋಷಕಾಂಶ-ದಟ್ಟವಾದ ಆಹಾರಗಳನ್ನು ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸುವ ಮೂಲಕ ನಮ್ಮ ಆಹಾರಕ್ರಮವನ್ನು ವೈವಿಧ್ಯಗೊಳಿಸಿಕೊಳ್ಳಬಹುದು.

Millets day program in Odisha
ಒಡಿಶಾದಲ್ಲಿ ಸಿರಿಧಾನ್ಯ ದಿನ ಕಾರ್ಯಕ್ರಮ (ETV Bharat)

ಈಟಿವಿ ಭಾರತ ಪ್ರತಿನಿಧಿ: ವಿಶೇಷವಾಗಿ, ಒಡಿಶಾದಂತಹ ರಾಜ್ಯಗಳಲ್ಲಿ ರಾಗಿಯ ನಿರ್ದಿಷ್ಟ ಆರೋಗ್ಯ ಪ್ರಯೋಜನಗಳ ಬಗ್ಗೆ ಹೇಳಬಹುದೇ? ಅಪೌಷ್ಠಿಕತೆ ನಿವಾರಿಸಲು ಇದು ಸಹಾಯ ಮಾಡುತ್ತದೆಯೇ?

ಡಾ.ಸ್ವಾಮಿನಾಥನ್: ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್‌ ಅಧಿಕವಾಗಿದೆ. ಆದರೆ ರಾಗಿ 7-9% ಪ್ರೋಟಿನ್ ಒಳಗೊಂಡಿರುವ ಉತ್ತಮ ಪೌಷ್ಟಿಕಾಂಶ ಆಹಾರವಾಗಿದೆ. ಅದಲ್ಲದೇ, ಪಾಲಿಶ್ ಮಾಡಿದ ಅಕ್ಕಿ ಸಂಸ್ಕರಣೆಯ ಸಮಯದಲ್ಲಿ ಅದರ ಖನಿಜಗಳು ಮತ್ತು ವಿಟಮಿನ್‌ಗಳನ್ನು ಕಳೆದುಕೊಳ್ಳುತ್ತದೆ. ಆದರೆ ರಾಗಿ, ಹಿಮೋಗ್ಲೋಬಿನ್ ಉತ್ಪಾದನೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಾಗಲು ಅಗತ್ಯವಿರುವ ಕಬ್ಬಿಣಾಂಶ, ಕ್ಯಾಲ್ಸಿಯಂ ಮತ್ತು ಸತು ಸೇರಿದಂತೆ ಪೋಷಕಾಂಶಗಳ ಸಂಪತ್ತನ್ನು ಹೊಂದಿದೆ.

ತಾಜಾ ಹಣ್ಣುಗಳು, ತರಕಾರಿಗಳು, ಪ್ರಾಣಿ ಪ್ರೋಟಿನ್​ಗಳು ಮತ್ತು ಆರೋಗ್ಯಕರ ಕೊಬ್ಬಿನ ಆಹಾರಗಳನ್ನು ಸಮತೋಲನದಿಂದ ಸೇವಿಸುವುದರಿಂದ ಕಾರ್ಬೋಹೈಡ್ರೇಟ್​ಯುಕ್ತ ಆಹಾರ ಪದ್ಧತಿಯನ್ನು ಕಾಪಾಡಿಕೊಳ್ಳಬಹುದು. ಸಂಸ್ಕರಿಸಿದ ಆಹಾರ ಸೇವನೆಯೂ ಹೆಚ್ಚುತ್ತಿದ್ದು, ಕುಟುಂಬಗಳು ತಮ್ಮ ಆದಾಯದ ಸುಮಾರು 10%ರಷ್ಟು ಸಂಸ್ಕರಿಸಿದ ಆಹಾರಕ್ಕಾಗಿಯೇ ಖರ್ಚು ಮಾಡುತ್ತಿವೆ. ಇದು ಆರೋಗ್ಯಕರ ಜೀವನಶೈಲಿಗೆ ಒಳ್ಳೆಯದಲ್ಲ. ಇಂತಹ ಸಂದರ್ಭದಲ್ಲಿ ಆಹಾರದಲ್ಲಿ ರಾಗಿ ಸೇರಿದಂತೆ ಸಿರಿಧಾನ್ಯ ತುಂಬಾ ಒಳ್ಳೆಯದು.

ಈಟಿವಿ ಭಾರತ ಪ್ರತಿನಿಧಿ: ರಾಗಿಯಂತಹ ಸಿರಿಧಾನ್ಯಗಳನ್ನು ಪ್ರಮುಖವಾಗಿ ಅಕ್ಕಿಗೆ ಪರ್ಯಾಯವಾಗಿ ಬದಲಿಸುವುದು ಸಾಧ್ಯವೇ?

ಡಾ.ಸ್ವಾಮಿನಾಥನ್: ಖಂಡಿತಾ ಸಾಧ್ಯ. ಸಿರಿಧಾನ್ಯಗಳು ಅಕ್ಕಿಗೆ ಅಮೂಲ್ಯವಾದ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತವೆ. ಈ ಸಮ್ಮೇಳನದಲ್ಲಿ, ಪದಾರ್ಥ(Curries), ಪಾಯಸ ಮತ್ತು ಅನೇಕ ಸಾಂಪ್ರದಾಯಿಕ ಪಾಕವಿಧಾನಗಳು ಸೇರಿದಂತೆ ಬಹುತೇಕ ಎಲ್ಲಾ ಭಕ್ಷ್ಯಗಳಲ್ಲಿ ರಾಗಿಯನ್ನು ಬಡಿಸಲಾಗಿದೆ. ರಾಗಿ ಸೇರಿದಂತೆ ಸಿರಿಧಾನ್ಯಗಳು ಗ್ಲುಟನ್ ಮುಕ್ತವಾಗಿದ್ದು ಹೆಚ್ಚಿನ ಫೈಬರ್, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸತುವನ್ನು ಹೊಂದಿರುತ್ತವೆ. ಹಾಗಾಗಿ ಇವುಗಳು ಕರುಳಿನ ಆರೋಗ್ಯಕ್ಕೆ ಉತ್ತಮ. ಭತ್ತ ಬೆಳೆಯದ ಪ್ರದೇಶಗಳಲ್ಲಿ ಅವುಗಳನ್ನು ಬೆಳೆಸಬಹುದು. ಆದಾಗ್ಯೂ ಅವುಗಳಿಗೆ ಸಂಸ್ಕರಣೆ ಅತ್ಯಗತ್ಯ. ಆದರೆ ಅವುಗಳ ಹೊರಗಿನ ಕೋಟ್ ಅನ್ನು ಹಾಗೇ ಇರಿಸಿದರೆ ಮತ್ತು ಅದನ್ನು ಇತರ ಆಹಾರಗಳೊಂದಿಗೆ ಸೇವಿಸಿದರೆ, ಅದು ಇನ್ನೂ ಹೆಚ್ಚು ಪೌಷ್ಟಿಕಾಂಶಯುಕ್ತವಾಗಿರುತ್ತದೆ. ಕೆಲವು ಸಿರಿಧಾನ್ಯಗಳು ಪೌಷ್ಟಿಕಾಂಶ-ವಿರೋಧಿ ಅಂಶಗಳನ್ನು ಹೊಂದಿರಬಹುದು. ಆದರೆ ಸರಿಯಾದ ಸಂಸ್ಕರಣೆ ಮತ್ತು ಇತರ ಆಹಾರಗಳೊಂದಿಗೆ ಸೇರಿಸಿ ಸೇವಿಸುವುದರಿಂದ ಅವುಗಳು ಉತ್ತಮ ಹಾಗೂ ಪ್ರಯೋಜನಕಾರಿ ಆಹಾರ ಪದ್ಧತಿಯ ಭಾಗವಾಗುತ್ತದೆ.

ಈಟಿವಿ ಭಾರತ ಪ್ರತಿನಿಧಿ: ಒಡಿಶಾ ತನ್ನ ಸಿರಿಧಾನ್ಯ ಮಿಷನ್​ನಲ್ಲಿ ಎಷ್ಟು ಮಹತ್ವ ಪಡೆದುಕೊಂಡಿದೆ?

ಡಾ.ಸ್ವಾಮಿನಾಥನ್: ಭಾರತದಲ್ಲಿನ ಕೆಲವು ಪ್ರದೇಶಗಳು, ಕೇರಳದ ಕುಟ್ಟನಾಡ್ ಮತ್ತು ಒಡಿಶಾದ ಕೊರಾಪುಟ್ ತಮ್ಮ ಕೃಷಿ ಪರಂಪರೆ ಮತ್ತು ಜೀವವೈವಿಧ್ಯಕ್ಕಾಗಿ ವಿಶೇಷವಾಗಿ ಅಕ್ಕಿ ಮತ್ತು ಸಿರಿಧಾನ್ಯ ಪ್ರಭೇದಗಳಿಗೆ ಜಾಗತಿಕವಾಗಿ ಗುರುತಿಸಲ್ಪಟ್ಟಿವೆ. ಕಾಶ್ಮೀರ ಕೂಡ ಕೇಸರಿಗಾಗಿ ಜಾಗತಿಕವಾಗಿ ಗುರುತಿಸಲ್ಪಟ್ಟಿದೆ. ಒಡಿಶಾ ಸರ್ಕಾರವು ಈಗ ಸಿರಿಧಾನ್ಯಗಳ ಕೃಷಿಯನ್ನು ಮರುಸ್ಥಾಪಿಸಲು, ಸಂರಕ್ಷಿಸಲು ಮತ್ತು ಪ್ರೋತ್ಸಾಹಿಸುವ ಬಗ್ಗೆ ಮತ್ತು ಒಡಿಶಾದ ಜನರ ಆಹಾರಕ್ರಮವನ್ನು ವೈವಿಧ್ಯಮಯವಾಗಿ ಪೌಷ್ಟಿಕಾಂಶಯುಕ್ತವಾಗಿಸುವ ಹಣ್ಣುಗಳು, ದ್ವಿದಳ ಧಾನ್ಯಗಳು, ತರಕಾರಿಗಳು, ಗೆಡ್ಡೆಗಳಂತಹ ಪೌಷ್ಟಿಕಾಂಶ-ಭರಿತ ಆಹಾರಗಳನ್ನು ಗಂಭೀರ ನಡೆಯನ್ನು ತೆಗೆದುಕೊಂಡಿದೆ. ಒಡಿಶಾವನ್ನು ಆಹಾರದ ವೈವಿಧ್ಯತೆ ಮತ್ತು ಕೃಷಿ ಸುಸ್ಥಿರತೆಗೆ ಅನುಕರಣೀಯ ಮಾದರಿಯನ್ನಾಗಿ ಮಾಡಬಹುದಾದ ಸಿರಿಧಾನ್ಯ ಕೃಷಿಯನ್ನು ಉತ್ತೇಜಿಸಲು ಮತ್ತು ಇತರ ಸಾಂಪ್ರದಾಯಿಕ ಆಹಾರಗಳನ್ನು ಸಂರಕ್ಷಿಸಲು ಸರ್ಕಾರವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

ಈಟಿವಿ ಭಾರತ ಪ್ರತಿನಿಧಿ: ಕೃಷಿ ಕ್ಷೇತ್ರದಲ್ಲಿ ಇಂದು ನೀವು ಒಡಿಶಾವನ್ನು ಎಲ್ಲಿ ನೋಡುತ್ತೀರಿ?

ಡಾ.ಸ್ವಾಮಿನಾಥನ್: ಒಡಿಶಾ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಉದಾಹರಣೆಗೆ, ನಾವು ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ಬೆಳವಣಿಗೆಯನ್ನು ಉತ್ತೇಜಿಸುವ ಸಮಗ್ರ ಭತ್ತದ ಹಿಂಗಾರು ನಿರ್ವಹಣೆ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ಇದು ಮಣ್ಣನ್ನು ಪುನರುಜ್ಜೀವನಗೊಳಿಸುತ್ತದೆ ಮತ್ತು ರೈತರ ಆದಾಯವನ್ನು ಹೆಚ್ಚಿಸುತ್ತದೆ. ಅಡುಗೆಮನೆ ಅಥವಾ ಪೌಷ್ಟಿಕಾಂಶ ಉದ್ಯಾನಗಳು ವಿಶೇಷವಾಗಿ ಕೊರಾಪುಟ್‌ನಲ್ಲಿ ವಿಸ್ತರಿಸುತ್ತಿವೆ. ಅಲ್ಲಿನ ಜನರು ಹಸಿರು ಎಲೆಗಳ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಮತ್ತು ಪ್ರಾಣಿಗಳ ಪ್ರೋಟಿನ್ ಮೂಲಗಳನ್ನು ತಮ್ಮ ಆಹಾರದಲ್ಲಿ ಸೇರಿಸುತ್ತಿದ್ದಾರೆ. ಇದು ಅಪೌಷ್ಟಿಕತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಸಮಗ್ರ ವಿಧಾನವು ಎಲ್ಲಾ 30 ಜಿಲ್ಲೆಗಳಲ್ಲಿ ಪೌಷ್ಟಿಕಾಂಶ ಮತ್ತು ಕೃಷಿ ಪದ್ಧತಿಗಳನ್ನು ಪರಿವರ್ತಿಸುತ್ತಿದೆ.

ಈಟಿವಿ ಭಾರತ ಪ್ರತಿನಿಧಿ: ಅಂತಿಮವಾಗಿ, ಸಿರಿಧಾನ್ಯ ಕೃಷಿಯನ್ನು ಪ್ರೋತ್ಸಾಹಿಸುವಲ್ಲಿ ಕನಿಷ್ಠ ಬೆಂಬಲ ಬೆಲೆ (MSP) ಎಷ್ಟು ಮುಖ್ಯ?

ಡಾ.ಸ್ವಾಮಿನಾಥನ್: ಕನಿಷ್ಠ ಬೆಂಬಲ ಬೆಲೆ ನಿರ್ಣಾಯಕವಾಗಿದೆ. 'ಶ್ರೀ ಅನ್ನ ಅಭಿಯಾನ'ದಂತಹ ಉಪಕ್ರಮಗಳ ಅಡಿಯಲ್ಲಿ ಒಡಿಶಾ ರಾಗಿಗೆ 4,000 ರೂ.ಗಿಂತ ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ ನೀಡುವ ಮೂಲಕ ಮುನ್ನಡೆ ಸಾಧಿಸಿದೆ. ಇದು ರೈತರಿಗೆ ಗಮನಾರ್ಹ ಪ್ರೋತ್ಸಾಹವನ್ನು ನೀಡುತ್ತದೆ. ಜೊತೆಗೆ ಇತರ ರಾಜ್ಯಗಳು ಸಹ ಇದನ್ನು ಅಳವಡಿಸಿಕೊಳ್ಳಬೇಕು. ಕನಿಷ್ಠ ಬೆಂಬಲ ಬೆಲೆ ಜಾರಿಯಲ್ಲಿರುವಾಗ, ಮಾರುಕಟ್ಟೆ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಅದು ಈ ಪೌಷ್ಟಿಕ ಧಾನ್ಯಗಳಿಗೆ ಸಮರ್ಥನೀಯ ಬೇಡಿಕೆಯನ್ನು ಸೃಷ್ಟಿಸುತ್ತದೆ.

ಇದನ್ನೂ ಓದಿ: ಉತ್ತರಾಖಂಡದಲ್ಲಿ ಕುಸಿಯುತ್ತಿದೆ ಪೌಷ್ಟಿಕಾಂಶದ ಕಣಜ 'ಕೌನಿ' ಸಿರಿಧಾನ್ಯದ ಉತ್ಪಾದನೆ! - uttarakhands kauni millet

ETV Bharat Logo

Copyright © 2024 Ushodaya Enterprises Pvt. Ltd., All Rights Reserved.