ನವದೆಹಲಿ: ಇಸ್ರೇಲ್ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿ ನಡೆಸುವ ಮೂಲಕ ಇಸ್ರೇಲ್ ಹಾಗೂ ಇರಾನ್ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ ಎಂದು ಮಧ್ಯ ಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಜೈಶಂಕರ್ ಕಳವಳ ವ್ಯಕ್ತಪಡಿಸಿದ್ದಾರೆ.
ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸುವ ಕೆಲವೇ ಗಂಟೆಗಳ ಮೊದಲು ವಾಷಿಂಗ್ಟನ್ನಲ್ಲಿ ಥಿಂಕ್ ಟ್ಯಾಂಟ್ ಜೊತೆ ಸಂವಾದದಲ್ಲಿ, "ಲೆಬನಾನ್ನಲ್ಲಿ ಏನಾಯಿತು ಎಂಬುದರ ಬಗ್ಗೆ ಮಾತ್ರವಲ್ಲ, ಕೆಂಪು ಸಮುದ್ರದಲ್ಲಿ ಹಡಗಿನ ಮೇಲೆ ಹೌತಿಗಳ ದಾಳಿ ಸೇರಿದಂತೆ ಇರಾನ್ ಹಾಗೂ ಇಸ್ರೇಲ್ ನಡುವಿನ ಸಂಘರ್ಷದ ವಿಸ್ತರಣೆಯ ಸಾಧ್ಯತೆಯ ಬಗ್ಗೆ ಭಾರತ ಚಿಂತಿಸುತ್ತಿದೆ" ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತವು ಅಕ್ಟೋಬರ್ 7 ಅನ್ನು ಭಯೋತ್ಪಾದಕರ ದಾಳಿ ಎಂದು ಪರಿಗಣಿಸಿದೆ. ಇಸ್ರೇಲ್ ಪ್ರತಿಕ್ರಿಸುವ ಅಗತ್ಯ ಇದೆ ಎನ್ನವುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಆದರೆ, ಯಾವುದೇ ದೇಶದ ಯಾವುದೇ ರೀತಿಯ ಪ್ರತಿಕ್ರಿಯೆ ಆಗಿರಲಿ, ಅವುಗಳು ಅಂತಾರಾಷ್ಟ್ರೀಯ ಮಾನವೀಯ ಕಾನೂನನ್ನು ಪರಿಗಣನೆಗೆ ತೆಗೆದುಕೊಂಡಿರಬೇಕು. ಮತ್ತು ಸಾಮಾನ್ಯ ಜನರ ಜೀವಹಾನಿ ಹಾಗೂ ಅವರ ಮೇಲಿನ ಯಾವುದೇ ಪರಿಣಾಮಗಳ ಬಗ್ಗೆ ಜಾಗರೂಕರಾಗಿರಬೇಕು ಎಂಬುದನ್ನು ನಾವು ನಂಬುತ್ತೇವೆ" ಎಂದರು.
#WATCH | EAM Dr S Jaishankar says, " ... we regard october 7 as a terrorist attack. we understand that israel needed to respond, but we also believe that any response by any country has to take into account international humanitarian law and that it must be careful about any… pic.twitter.com/inGpavn01Y
— ANI (@ANI) October 2, 2024
ಈ ಸಂದರ್ಭದಲ್ಲಿ ಭಾರತದ ಸಂಭಾವ್ಯ ಪಾತ್ರದ ಬಗ್ಗೆ ಪ್ರತಿಕ್ರಿಯಿಸಿದ ಜೈಶಂಕರ್, ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಸಂವಹನಕ್ಕಿರುವ ಮಹತ್ವ ಅಲ್ಲಗಳೆಯಬೇಡಿ ಎಂದು ಹೇಳಿದರು. "ಹೇಳಲು, ರವಾನಿಸಲು ಹಾಗೂ ಹಿಂತಿರುಗಿಸಲು ವಿಷಯಗಳಿವೆ ಎಂದಾದರೆ ಅವೆಲ್ಲವೂ ನಾವು ಮಾಡಬಹುದಾದ ಅಂಶಗಳು ಹಾಗೂ ನಾವು ಅದನ್ನು ಮಾಡುತ್ತೇವೆ" ಎಂದು ಹೇಳಿದರು.
ಯುಎಸ್ಎ ಕಾರ್ಯದರ್ಶಿ ಬ್ಲಿಂಕೆನ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಸ್ಟ್ನಲ್ಲಿ ಕೀವ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಉಕ್ರೇನ್ನಲ್ಲಿ ಶಾಂತಿ ಸ್ಥಾಪಿಸುವ ಬಗ್ಗೆ ಪ್ರಾಮುಖ್ಯತೆ ನೀಡಿದ್ದನ್ನು ಪುನರುಚ್ಚರಿಸಿದರು. ಹಾಗೂ ಬ್ಲಿಂಕೆನ್ ಹಾಗೂ ಜೈಶಂಕರ್ ಇಬ್ಬರೂ, ಜಾಗತಿಕ ಹವಾಮಾನ ಬಿಕ್ಕಟ್ಟನ್ನು ಪರಿಹರಿಸಲು ಕ್ಲೀನ್ ಎನರ್ಜಿ ಉಪಕ್ರಮಗಳ ಸಹಯೋಗವನ್ನು ವಿಸ್ತರಿಸುವ ಬಗ್ಗೆ ಚರ್ಚಿಸಿದರು.
ಇದನ್ನೂ ಓದಿ: ಇಸ್ರೇಲ್ ಮೇಲೆ ಇರಾನ್ನಿಂದ 200ಕ್ಕೂ ಅಧಿಕ ಕ್ಷಿಪಣಿ ದಾಳಿ - Iran Missile Attack On Israel