ETV Bharat / bharat

ಕೇವಲ 99 ರೂಗೆ ಅನ್​ಲಿಮಿಟೆಡ್​ ಬಿರಿಯಾನಿ, ಈ ಕಡೆ ಮಾಲೀಕ - ಆ ಕಡೆ ಗ್ರಾಹಕ ಫುಲ್​ ಖುಷ್​! - Unlimited Biryani Rs 99 - UNLIMITED BIRYANI RS 99

Rs 99 Biryani Centres in Hyderabad : ಹೈದರಾಬಾದ್ ಎಂದಾಕ್ಷಣ ಎಲ್ಲರಿಗೂ ಮೊದಲು ನೆನಪಾಗುವುದು ಬಿರಿಯಾನಿ. ಆ ಮಾತು ಕೇಳಿದರೆ ಎಲ್ಲರ ಬಾಯಲ್ಲಿ ನೀರೂರುತ್ತದೆ. ಯಾವುದೇ ಋತುವಿನಲ್ಲಿ ಇಲ್ಲಿ ಬಿರಿಯಾನಿ ಫೇಮಸ್​. ಅದೇ ಮಟ್ಟದಲ್ಲಿ ನಗರದಲ್ಲಿ ಬಿರಿಯಾನಿ ಕೇಂದ್ರಗಳು ತಲೆ ಎತ್ತಿವೆ. ಇದು ಸ್ವಲ್ಪ ದುಬಾರಿ. ಹಬ್ಬ ಹರಿ ದಿನಗಳಲ್ಲಿ ಮತ್ತು ವಿಶೇಷ ಆಚರಣೆಗಳಲ್ಲಿ ಬಂಧು ಮಿತ್ರರು ಒಟ್ಟಾಗಿ ಬಿರಿಯಾನಿ ಸವಿಯಲು ಇಷ್ಟಪಡುತ್ತಾರೆ. ಆದ್ರೆ ಇಲ್ಲೊಂದು ಶಾಪ್​ನಲ್ಲಿ 99 ರೂಪಾಯಿಗೆ ಚಿಕನ್ ಅಥವಾ ಮಟನ್ ಬಿರಿಯಾನಿ ದೊರೆಯುತ್ತಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸುತ್ತಿದೆ.

RS 99 BIRYANI CENTRES IN HYDERABAD  BIRYANI AT RS 99  BIRYANI CRAZY OFFER
ಕೇವಲ 99 ರೂಗೆ ಅನ್​ಲಿಮಿಟೆಡ್​ ಬಿರಿಯಾನಿ
author img

By ETV Bharat Karnataka Team

Published : Apr 13, 2024, 1:45 PM IST

ಹೈದರಾಬಾದ್​, ತೆಲಂಗಾಣ: ಯಾವುದೇ ಹಬ್ಬ ಹರಿದಿನಗಳಿರಲಿ ಬಿರಿಯಾನಿಯನ್ನು ಸವಿಯಬೇಕು ಅಂತಾರೆ ಕೆಲ ಜನ. ಇಲ್ಲಿ ಎಷ್ಟೇ ರೆಸಿಪಿಗಳು ಬಂದರೂ ಬಿರಿಯಾನಿ ಇಂದಿಗೂ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿಲ್ಲ. ಆದರೆ ಬಿರಿಯಾನಿ ತಿನ್ನಲು ನೀವು ರೆಸ್ಟೋರೆಂಟ್‌ಗೆ ಹೋಗಿ ರೂ. 200 ರಿಂದ 300 ಖರ್ಚು ಮಾಡಬೇಕಾಗುತ್ತದೆ. ವ್ಯಾಸಂಗಕ್ಕೆ ನಗರಕ್ಕೆ ಬರುವ ವಿದ್ಯಾರ್ಥಿಗಳು ಹಾಗೂ ದಿನಗೂಲಿ ನೌಕರರು ಹೊಟ್ಟೆಪಾಡಿಗಾಗಿ ದುಡ್ಡು ಖರ್ಚು ಮಾಡಿ ಬಿರಿಯಾನಿ ತಿನ್ನಬೇಕು ಎನ್ನುವುದು ಕಷ್ಟವೇ..

ಅವರನ್ನು ಗಮನದಲ್ಲಿಟ್ಟುಕೊಂಡು ನೂರು ರೂಪಾಯಿಗೆ ಬಿರಿಯಾನಿ ಹೆಸರಿನಲ್ಲಿ ಆಫರ್​ಗಳನ್ನು ನೀಡಿ ಜನರನ್ನು ಸೆಳೆಯುತ್ತಿದ್ದಾರೆ. ಈ ಬಿರಿಯಾನಿ ಪಾಯಿಂಟ್‌ಗಳು ಹೆಚ್ಚಾಗಿ ಸಿಕಂದರಾಬಾದ್, ಅಮೀರ್‌ಪೇಟ್ ಮತ್ತು ದಿಲ್‌ಸುಖ್ ನಗರ ಪ್ರದೇಶಗಳಲ್ಲಿವೆ. ಆತ್ಮೀಯ ಖಾದ್ಯ ಎಂದೇ ಹೆಸರಾಗಿರುವ ಬಿರಿಯಾನಿ ಎಲ್ಲರಿಗೂ ಸಿಗಬೇಕು ಎಂಬ ಉದ್ದೇಶದಿಂದ ಕೈಗೆಟಕುವ ದರದಲ್ಲಿ ಬಿರಿಯಾನಿ ಮಾರಾಟ ಮಾಡುತ್ತಿದ್ದೇವೆ ಎನ್ನುತ್ತಾರೆ ಮಾರುಕಟ್ಟೆದಾರರು.

ತಿನ್ನುವವರಿಗೆ 99 ರೂಪಾಯಿಗೆ ಚಿಕನ್ ಮತ್ತು ಮಟನ್ ನೀಡಲಾಗುತ್ತದೆ. ಜನರು ನಮ್ಮ ಬಿರಿಯಾನಿ ಇಷ್ಟಪಡುತ್ತಿದ್ದಾರೆ. ಬೇಡಿಕೆ ಹೆಚ್ಚಿರುವುದರಿಂದ ಪ್ರತಿ ತಟ್ಟೆಯ ಲಾಭ ಕಡಿಮೆ. ಆದರೂ ದಿನವಿಡೀ ಮಾರಾಟ ಮಾಡಿದ ಬಿರಿಯಾನಿಯಿಂದ ಸ್ವಲ್ಪ ಲಾಭವಾಗುತ್ತದೆ. ಯಾವುದೇ ಕೆಲಸ ಸಿಗದವರಿಗೆ ಇದು ಜೀವನೋಪಾಯದ ಮಾರ್ಗವಾಗಿ ಪರಿಣಮಿಸಿದೆ ಎನ್ನುತ್ತಾರೆ ಮಾಲೀಕರು.

"ನಾನು ಆರು ತಿಂಗಳಿಂದ ಈ ದಂಧೆಯನ್ನು ಮಾಡುತ್ತಿದ್ದೇನೆ. ಹಲವೆಡೆ ಅನ್​ಲಿಮಿಟೆಡ್​ ಬಿರಿಯಾನಿ ಪಾಯಿಂಟ್‌ಗಳಿವೆ. ಅದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಸ್ಪರ್ಧೆ ಇದೆ. ಆದರೆ, ನಾವು ಅಡುಗೆ ಮಾಡುವ ಗುಣಮಟ್ಟ ಮತ್ತು ರುಚಿ ಗ್ರಾಹಕರ ಆಗಮನದ ಮೇಲೆ ಅವಲಂಬಿತವಾಗಿರುತ್ತದೆ. ಗ್ರಾಹಕರು ನಮ್ಮ ಬಿರಿಯಾನಿಯನ್ನು ಇಷ್ಟ ಪಡುತ್ತಿದ್ದಾರೆ. ನಮ್ಮ ಬಿರಿಯಾನಿ ಜೊತೆ ಇನ್ನಷ್ಟು ಐಟಂಗಳು ದೊರೆಯುತ್ತಿದ್ದು, ಅವುಗಳನ್ನು ತಿನ್ನಲು ಸಹ ಗ್ರಾಹಕರು ಮತ್ತೆ ಮತ್ತೆ ಬರುತ್ತಿರುತ್ತಾರೆ ಎಂದು ಬಿರಿಯಾನಿ ಮಾರಾಟಗಾರ ಅಂಕಮಾರಾವ್ ಹೇಳಿದರು.

ಬಡವರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಅಂಗಡಿಕಾರರು ಕೈಗೆಟಕುವ ದರದಲ್ಲಿ ಬಿರಿಯಾನಿ ಮಾರಾಟ ಮಾಡುತ್ತಿದ್ದಾರೆ. ಫುಟ್ ಪಾತ್​ಗಳಲ್ಲಿ ಚಿಕ್ಕ ಬಂಡಿಗಳನ್ನು ಹಾಕುವುದರಿಂದ ಬಾಡಿಗೆ, ವಿದ್ಯುತ್ , ಎಸಿ ಮುಂತಾದ ಖರ್ಚು ವೆಚ್ಚಗಳ ಜತೆಗೆ ಪೀಠೋಪಕರಣಗಳನ್ನು ಹಾಕಿಕೊಳ್ಳುವ ಅಗತ್ಯವೂ ಇರುವುದಿಲ್ಲ. ಅದಕ್ಕಾಗಿಯೇ ಕಡಿಮೆ ಬೆಲೆಗೆ ಬಿರಿಯಾನಿ ಮಾರಾಟ ಮಾಡುತ್ತಿದ್ದೇವೆ. ಕೇವಲ 99 ರೂಪಾಯಿಗೆ ಬಿರಿಯಾನಿ ತಿನ್ನಬಹುದು, ಅದು ವೆಜ್, ಚಿಕನ್ ಅಥವಾ ಮಟನ್ ಆಗಿರಬಹುದು. ಒಮ್ಮೆ ತಿಂದವರು ಮತ್ತೆ ಬರುತ್ತಿದ್ದಾರೆ ಎಂದು ಅಂಗಡಿ ಮಾಲೀಕರು ಹೇಳುತ್ತಾರೆ. ಅಷ್ಟೇ ಅಲ್ಲ ಸಾಮಾಜಿಕ ಜಾಲತಾಣಗಳ ಮೂಲಕ ಮಾರಾಟಗಾರರು ಉಚಿತ ಪ್ರಚಾರ ಪಡೆಯುತ್ತಿದ್ದಾರೆ.

ಇನ್ನು ಕೆಲವರು ವಿಡಿಯೋ ನೋಡಿ ಬಂದರೆ, ಇನ್ನು ಕೆಲವರು ಅಕ್ಕಪಕ್ಕದವರು ಹೇಳಿದ್ದನ್ನು ಕೇಳಿ ಬಂದು ಊಟ ಮಾಡುತ್ತಾರೆ. ಬಿರಿಯಾನಿ ಪಾಯಿಂಟ್‌ಗಳು ಮಧ್ಯಾಹ್ನದ ಸಮಯದಲ್ಲಿ ಜನರಿಂದ ತುಂಬಿ ತುಳುಕುತ್ತವೆ. ಕಡಿಮೆ ಬೆಲೆಯ ಹೊರತಾಗಿಯೂ, ರುಚಿ ಮತ್ತು ಗುಣಮಟ್ಟದಲ್ಲಿ ರಾಜಿ ಅಗತ್ಯವಿಲ್ಲ. ಆಹಾರವು ಅಗ್ಗ ಮತ್ತು ಉತ್ತಮ ಗುಣಮಟ್ಟದ್ದಾಗಿದ್ದರೆ ಜನರು ಅದನ್ನು ತಿನ್ನಲು ನೂರಾರು ಕಿಲೋಮೀಟರ್ ದೂರದಿಂದ ಬರುತ್ತಾರೆ. ಈ ಮೂಲಕ ಕಡಿಮೆ ಬೆಲೆಗೆ ಮಾರಾಟ ಮಾಡುವ ಮೂಲಕ ಉತ್ತಮ ವ್ಯಾಪಾರ ಆಗುತ್ತಿದೆ. ಇದರಿಂದ ಮಾರಾಟಗಾರರು ಹಾಗೂ ಗ್ರಾಹಕರು ಸಂತಸಗೊಂಡಿದ್ದಾರೆ.

ಓದಿ: ಜಾತ್ರೆಗೆ ಬಂದ ಸಾವಿರಾರು ಗೋವುಗಳ ದಾಹ ತೀರಿಸಿದ ನಿರ್ಮಾಪಕ ಮಹೇಂದ್ರ ಮುನ್ನೋತ್ - Water supply to cows

ETV Bharat Logo

Copyright © 2025 Ushodaya Enterprises Pvt. Ltd., All Rights Reserved.