ಔರಂಗಾಬಾದ್, ಮಹಾರಾಷ್ಟ್ರ: ಕಾರಿಗೆ ಸ್ಕಾರ್ಪಿಯೋ ಡಿಕ್ಕಿ ಹೊಡೆದ ಪರಿಣಾಮ ಆರು ತಿಂಗಳ ಮಗು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಇಂದು ಸಂಭವಿಸಿದೆ.
ಧಾರ್ಮಿಕ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಕುಟುಂಬ ಸಮೇತರಾಗಿ ಪುಣೆಗೆ ತೆರಳುತ್ತಿದ್ದ ಕಾರಿಗೆ ವಿರುದ್ಧ ದಿಕ್ಕಿನಲ್ಲಿ ಅತ್ಯಂತ ವೇಗವಾಗಿ ಬರುತ್ತಿದ್ದ ಮದ್ಯದ ಅಮಲಿನಲ್ಲಿದ್ದ ಯುವಕನ ಸ್ಕಾರ್ಪಿಯೋ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಿಂಬೆಜಲಗಾಂವ್ ಪ್ರದೇಶದ ಟೋಲ್ ಬೂತ್ ಬಳಿ ಅಪಘಾತ ಸಂಭವಿಸಿದೆ. ಅಮರಾವತಿ ಮೂಲದ ಮೃಣಾಲಿನಿ ಅಜಯ್ ಬೇಸರ್ಕರ್ (38), ಆಶಾಲತಾ ಪೋಪಲ್‌ಘೋಟೆ (65), ದುರ್ಗಾ ಸಾಗರ್ ಗೀತೆ (7) ಮತ್ತು ಆರು ತಿಂಗಳ ಮಗು ಸಾವನ್ನಪ್ಪಿದವರು. ಅಜಯ್ ಅಂಬಾದಾಸ್ ಬೆಸರ್ಕರ್ ಮತ್ತು ಶುಭಾಂಗಿನಿ ಸಾಗರ್ ಗಿಲೆ (36) ತೀವ್ರವಾಗಿ ಗಾಯಗೊಂಡಿದ್ದಾರೆ.
ಪಾನಮತ್ತರಾಗಿ ವಾಹನ ಚಾಲನೆ ಮಾಡಿದ್ದಕ್ಕಾಗಿ ವಿಶಾಲ್ ಅಲಿಯಾಸ್ ಉದ್ಧವ್ ಜ್ಞಾನೇಶ್ವರ್ ಚವ್ಹಾಣ್ (22) ಮತ್ತು ಕೃಷ್ಣ ಕಾರಭಾರಿ ಕೆರೆ (22) ಎಂಬುವರ ವಿರುದ್ಧ (culpable homicide) ಪ್ರಕರಣ ದಾಖಲಾಗಿದೆ.
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಅಜಯ್, ಪುಣೆ ಮೂಲದ ಕಂಪನಿಯೊಂದರಲ್ಲಿ ಅಮರಾವತಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದಿಂದಾಗಿ ಅವರು ಮತ್ತು ಅವರ ಪತ್ನಿ ಮೃಣಾಲಿ ದೇಸರ್ಕರ್ ಕಳೆದ ಕೆಲವು ವರ್ಷಗಳಿಂದ ಪುಣೆಯಲ್ಲಿ ನೆಲೆಸಿದ್ದರು. ಮತ್ತು ಅಮರಾವತಿ ಮತ್ತು ಪುಣೆ ನಡುವೆ ಪ್ರಯಾಣಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: 8 ಮಂದಿ ಸಾವು, 30 ಮಂದಿಗೆ ಗಂಭೀರ ಗಾಯ - road accident in chittoor