ನವದೆಹಲಿ: ಉತ್ತರಾಖಂಡದ ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನವಾಗಿದೆ. ಯಾತ್ರಿಕರನ್ನು ಸಾಗಿಸುತ್ತಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷಕ್ಕೀಡಾಗಿ ತುರ್ತು ಭೂಸ್ಪರ್ಶ ಕಂಡಿತ್ತು. ಇದನ್ನು ಎಂಐ-17 ಹೆಲಿಕಾಪ್ಟರ್ ಮೂಲಕ ದುರಸ್ತಿಗೆ ಕೊಂಡೊಯ್ಯುತ್ತಿದ್ದಾಗ ಜಾರಿಬಿದ್ದು ನಾಶವಾಗಿದೆ. ಕೇದಾರನಾಥದ ಮಂದಾಕಿನಿ ನದಿಯ ಬಳಿ ಈ ಹೆಲಿಕಾಪ್ಟರ್ ಪತನವಾಗಿದ್ದು, ಇದರ ವಿಡಿಯೋ ಲಭ್ಯವಾಗಿದೆ.
ಭಾರತೀಯ ವಾಯುಪಡೆಗೆ ಸೇರಿದ ಎಂಐ-17 ಹೆಲಿಕಾಪ್ಟರ್ ದೋಷಯುಕ್ತ ಹೆಲಿಕಾಪ್ಟರ್ ಅನ್ನು ಕೇದಾರನಾಥದಿಂದ ಗೌಚಾರ್ಗೆ ಸಾಗಿಸುತ್ತಿತ್ತು. ಈ ವೇಳೆ ಟೋಯಿಂಗ್ ಹಗ್ಗ ತುಂಡಾಗಿ ವಿಮಾನ ಎತ್ತರದಿಂದ ನೆಲಕ್ಕೆ ಬಿದ್ದು ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾತ್ರಿಕರನ್ನು ಸಾಗಿಸುತ್ತಿದ್ದಾಗ ದೋಷ: ನಾಶವಾದ ಹೆಲಿಕಾಪ್ಟರ್ ಅನ್ನು ಖಾಸಗಿ ಕಂಪನಿಯೊಂದು ನಿರ್ವಹಣೆ ಮಾಡುತ್ತಿತ್ತು. ಕೇದಾರನಾಥಕ್ಕೆ ಬರುವ ಯಾತ್ರಿಕರನ್ನು ಇದು ಹೊತ್ತು ತರುತ್ತಿದ್ದಾಗ ಮೇ ತಿಂಗಳಲ್ಲಿ ತಾಂತ್ರಿಕ ದೋಷದಿಂದಾಗಿ ತುರ್ತು ಭೂಸ್ಪರ್ಶವಾಗಿತ್ತು. ಬಳಿಕ ಕಾಪ್ಟರ್ ಅಲ್ಲಿಯೇ ಕೆಟ್ಟು ನಿಂತಿತ್ತು. ಇದೀಗ ಹೆಲಿಕಾಪ್ಟರ್ ಅನ್ನು ಭಾರತದ ವಾಯುಪಡೆಗೆ ಸೇರಿದ ಎಂಐ-17 ಹೆಲಿಕಾಪ್ಟರ್ ಮೂಲಕ ಅದನ್ನು ದುರಸ್ತಿಗಾಗಿ ಗೌಚಾರ್ ಎಂಬಲ್ಲಿಗೆ ರವಾನಿಸಲಾಗುತ್ತಿತ್ತು.
VIDEO | Uttarakhand: A defective helicopter, which was being air lifted from #Kedarnath by another chopper, accidentally fell from mid-air as the towing rope snapped, earlier today.#UttarakhandNews
— Press Trust of India (@PTI_News) August 31, 2024
(Source: Third Party) pic.twitter.com/yYo9nCXRIw
ತೀವ್ರ ಗಾಳಿಯಿಂದ ಸಮತೋಲನ ಕಳೆದುಕೊಂಡ ದೋಷಯುಕ್ತ ಹೆಲಿಕಾಪ್ಟರ್ ಗಾಳಿಯಲ್ಲಿ ಎಳೆದಾಡಿದೆ. ಈ ವೇಳೆ ಟೋಯಿಂಗ್ ಹಗ್ಗ ತುಂಡಾಗಿದೆ. ಮಂದಾಕಿನಿ ನದಿ ಬಳಿ ಹೋಗುತ್ತಿದ್ದಾಗ ಹೆಲಿಕಾಪ್ಟರ್ ಬಿದ್ದು ಪತನವಾಗಿದೆ. ಅದೃಷ್ಟವಶಾತ್ ಅಪಘಾತದ ವೇಳೆ ಅದರೊಳಗೆ ಪ್ರಯಾಣಿಕರು, ಲಗೇಜ್ ಇರಲಿಲ್ಲ. ಹೀಗಾಗಿ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪತನದ ನಂತರ ರಕ್ಷಣಾ ತಂಡವು ಸ್ಥಳಕ್ಕೆ ತಲುಪಿದೆ. ತಾಂತ್ರಿಕ ದೋಷವಿದ್ದ ವಿಮಾನ ನಾಶವಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕೇದಾರನಾಥ ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ ರಾಹುಲ್ ಚೌಭೆ ತಿಳಿಸಿದ್ದಾರೆ.
ಕೇದಾರನಾಥ ಯಾತ್ರೆಗೆ ಭಾರೀ ಮಳೆ ಅಡ್ಡಿಯಾಗಿದೆ. ಇದರಿಂದ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರನ್ನು ಹೆಲಿಕಾಪ್ಟರ್ಗಳ ಮೂಲಕ ಸಾಗಿಸಲಾಗುತ್ತಿತ್ತು. ಇದರಿಂದಾಗಿ ಯಾತ್ರಾರ್ಥಿಗಳ ಸಂಖ್ಯೆಯಲ್ಲೂ ತೀವ್ರ ಕುಸಿತ ಕಂಡುಬಂದಿದೆ.
ಗೌರಿಕುಂಡದಿಂದ ಕೇದಾರನಾಥಕ್ಕೆ ಹೋಗುವ ಮಾರ್ಗದಲ್ಲಿ ಮಯಿಂದಾಗಿ ಭೂಕುಸಿತಗಳು ಸಂಭವಿಸಿದೆ. ಇದರಿಂದ ಸಾವಿರಾರು ಯಾತ್ರಾರ್ಥಿಗಳು ಪರದಾಡುವಂತಾಗಿತ್ತು. ಹೀಗಾಗಿ ಕಾಲ್ನಡಿಗೆಯನ್ನು ಸ್ಥಗಿತಗೊಳಿಸಿ, ಯಾತ್ರಿಕರು ಹೆಲಿಕಾಪ್ಟರ್‌ಗಳಲ್ಲಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದರು. ಮೇ 10 ರಂದು ಚಾರ್ಧಾಮ್ ಯಾತ್ರೆ ಆರಂಭವಾಗಿದೆ. ಇದುವರೆಗೆ 33 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಕೇದಾರನಾಥಕ್ಕೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ಉತ್ತರಾಖಂಡದಲ್ಲಿ ಮಳೆ ಅಬ್ಬರ: ಕೇದಾರನಾಥದಲ್ಲಿ 700ಕ್ಕೂ ಹೆಚ್ಚು ಯಾತ್ರಾರ್ಥಿಗಳ ಸ್ಥಳಾಂತರ - Heavy rain in Uttarakhand