ETV Bharat / bharat

ಹರಿಯಾಣ ವಿಧಾನಸಭೆ ಚುನಾವಣೆ: ಅತಿ ಹೆಚ್ಚು, ಅತಿ ಕಡಿಮೆ ಮತಗಳಲ್ಲಿ ಗೆದ್ದವರು ಇವರು - WINNING MARGIN

ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ಗೆಲುವಿನ ಅಂತರ 98 ಸಾವಿರ ಮತಗಳಾಗಿದ್ದರೆ, ಅತಿ ಕಡಿಮೆ ಅಂತರದ ಜಯ ಕೇವಲ 32 ಮತಗಳಿಂದ ಬಂದಿದೆ.

ಹರಿಯಾಣ ವಿಧಾನಸಭೆ ಚುನಾವಣೆ
ಹರಿಯಾಣ ವಿಧಾನಸಭೆ ಚುನಾವಣೆ (ETV Bharat)
author img

By PTI

Published : Oct 9, 2024, 10:00 PM IST

ಚಂಡೀಗಢ: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿಯಾಗಿ ಗೆದ್ದು ದಾಖಲೆಯ ಮೂರನೇ ಬಾರಿಗೆ ಅಧಿಕಾರಕ್ಕೇರಲು ಸಜ್ಜಾಗಿದೆ. ಕಾಂಗ್ರೆಸ್​​ನಿಂದ ಭಾರಿ ಸವಾಲು ಎದುರಾಗಿದ್ದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಅಲ್ಪಮತಗಳಲ್ಲಿ ಗೆಲುವು ಕಂಡಿದ್ದಾರೆ.

ಹರಿಯಾಣದ ಉಚ್ಚಾನ್​ ಕಲಾನ್ ಕ್ಷೇತ್ರವು ಅತಿ ತುರುಸಿನ ಸ್ಪರ್ಧೆಗೆ ಸಾಕ್ಷಿಯಾಗಿದೆ. ಇಲ್ಲಿನ ಬಿಜೆಪಿ ಅಭ್ಯರ್ಥಿ ದೇವೇಂದ್ರ ಚಟರ್ ಅವರು ಕಾಂಗ್ರೆಸ್​ನ ಬ್ರಿಜೇಂದ್ರ ಸಿಂಗ್ ಅವರನ್ನು ಕೇವಲ 32 ಮತಗಳಿಂದ ಸೋಲಿಸಿದ್ದಾರೆ. ಇದು ರಾಜ್ಯದಲ್ಲಿಯೇ ಅತಿ ಕಡಿಮೆ ಅಂತರದ ಜಯ. ವಿಶೇಷವೆಂದರೆ, ಇದೇ ಕ್ಷೇತ್ರದ ಹಾಲಿ ಶಾಸಕ ಮತ್ತು ಜೆಜೆಪಿ ನಾಯಕ ದುಶ್ಯಂತ್ ಚೌಟಾಲಾ ಕಳಪೆ ಪ್ರದರ್ಶನ ನೀಡಿದ್ದಾರೆ. ಇವರು ಐದನೇ ಸ್ಥಾನ ಪಡೆದುಕೊಂಡಿದ್ದಾರೆ.

ಇಂಡಿಯನ್ ನ್ಯಾಷನಲ್ ಲೋಕ ದಳದ ಆದಿತ್ಯ ದೇವಿಲಾಲ್ ಅವರು ದಬ್ವಾಲಿ ಕ್ಷೇತ್ರದಲ್ಲಿ 610 ಮತಗಳಿಂದ ಗೆದ್ದರು. ಕಾಂಗ್ರೆಸ್​​ನ ಅಮಿತ್ ಸಿಹಾಗ್ ಅವರು ಇಲ್ಲಿ ಸೋತರು. ಲೋಹರು ಕ್ಷೇತ್ರದಲ್ಲಿ ಕಾಂಗ್ರೆಸ್​​ನ ಅಭ್ಯರ್ಥಿ ರಾಜಬೀರ್ ಫರ್ತಿಯಾ ಅವರು ಬಿಜೆಪಿಯ ಹಿರಿಯ ನಾಯಕ ಜೈ ಪ್ರಕಾಶ್ ದಲಾಲ್ ಅವರನ್ನು ಕೇವಲ 792 ಮತಗಳಿಂದ ಸೋಲಿಸಿದರು.

ಆದಂಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಂದರ್ ಪ್ರಕಾಶ್ ಅವರು ಬಿಜೆಪಿಯ ಭವ್ಯಾ ಬಿಷ್ಣೋಯ್ ಅವರನ್ನು 1,268 ಮತಗಳ ಅಂತರದಿಂದ ಮಣಿಸಿದರು. ದಾದ್ರಿ ಕ್ಷೇತ್ರದಲ್ಲಿ ಬಿಜೆಪಿಯ ಸುನೀಲ್ ಸತ್ಪಾಲ್ ಸಾಂಗ್ವಾನ್ ಅವರು ಕಾಂಗ್ರೆಸ್‌ನ ಮನೀಶಾ ಸಾಂಗ್ವಾನ್ ಅವರನ್ನು 1,957 ಮತಗಳ ಅಂತರದಿಂದ ಜಯಿಸಿದರು.

ಕಾಂಗ್ರೆಸ್ ಪಕ್ಷದ ಚಂದರ್ ಮೋಹನ್ ಅವರು ಬಿಜೆಪಿ ಹಿರಿಯ ನಾಯಕ ಮತ್ತು ಹರಿಯಾಣ ವಿಧಾನಸಭಾ ಸ್ಪೀಕರ್ ಆಗಿದ್ದ ಜಿಯಾನ್ ಚಂದ್ ಗುಪ್ತಾ ಅವರನ್ನು ಪಂಚಕುಲ ಕ್ಷೇತ್ರದಲ್ಲಿ 1,997 ಮತಗಳ ಅಂತರದಿಂದ ಸೋಲಿಸಿದ್ದಾರೆ.

ದೊಡ್ಡ ಅಂತರದ ಗೆಲುವು: ಮತ್ತೊಂದೆಡೆ, ಕಾಂಗ್ರೆಸ್ ಪಕ್ಷದ ಮಮ್ಮನ್ ಖಾನ್ ಅವರು ನುಹ್ ಜಿಲ್ಲೆಯ ಫಿರೋಜ್‌ಪುರ ಜಿರ್ಕಾ ಕ್ಷೇತ್ರದಲ್ಲಿ 98,441 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದು ರಾಜ್ಯದಲ್ಲಿಯೇ ಅತಿದೊಡ್ಡ ಅಂತರದ ಜಯವಾಗಿದೆ. ಈ ಕ್ಷೇತ್ರದ ಹಾಲಿ ಶಾಸಕರಾಗಿದ್ದ ಖಾನ್ ಅವರು ಬಿಜೆಪಿಯ ನಸೀಮ್ ಅಹಮದ್ ಅವರನ್ನು ಸೋಲಿಸಿದರು. ಮಮ್ಮನ್​ ಖಾನ್ 1,30,497 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿಯಾಗಿದ್ದ ನಸೀಮ್​​ 32,056 ಮತಗಳನ್ನು ಮಾತ್ರ ಪಡೆದರು.

ಇನ್ನು 90 ಸ್ಥಾನಗಳ ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 48 ಸ್ಥಾನಗಳಲ್ಲಿ ಗೆಲುವು ಸಾಧಿಸಿ ನಿಚ್ಚಳ ಬಹುಮತ ಪಡೆದಿದೆ. ಕಾಂಗ್ರೆಸ್ 36 ಸ್ಥಾನಗಳನ್ನು ಗೆದ್ದಿದೆ. ಲೋಕಸಭಾ ಚುನಾವಣೆಯ ಹಿನ್ನಡೆ, 10 ವರ್ಷಗಳ ಆಡಳಿತದಲ್ಲಿನ ವಿರೋಧಿ ಅಲೆಯನ್ನು ದಾಟಿ ಬಿಜೆಪಿ ಮೂರನೇ ಬಾರಿಗೆ ಸರ್ಕಾರವನ್ನು ರಚಿಸಲು ಸಜ್ಜಾಗಿದೆ.

ಇದನ್ನೂ ಓದಿ: ಹರಿಯಾಣದಲ್ಲಿ ನಿರ್ಲಕ್ಷಿಸಿದ ಕಾಂಗ್ರೆಸ್‌ಗೆ ಕೌಂಟರ್‌; ದೆಹಲಿಯಲ್ಲಿ ಏಕಾಂಗಿ ಸ್ಪರ್ಧೆಗೆ ಆಪ್ ಪ್ಲಾನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.