ETV Bharat / bharat

ಭಾರಿ ಮಳೆಗೆ ನಲುಗಿದ ಗುಜರಾತ್​: ಇದುವೆರೆಗೆ 28 ಜನರು ಸಾವು, 18,000ಕ್ಕೂ ಹೆಚ್ಚು ಸಂತ್ರಸ್ತರ ಸ್ಥಳಾಂತರ - Extremely heavy rain in Gujarat

ಈ ಪರಿಸ್ಥಿತಿ ಇನ್ನೂ ಐದು ದಿನಗಳ ಕಾಲ ಮುಂದುವರೆಯುವ ಎಚ್ಚರಿಕೆ ನೀಡಿರುವ ಹವಾಮಾನ ಇಲಾಖೆ ರಾಜ್ಯದ 11 ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಹಾಗೂ ಉಳಿದ 22 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ ಮಾಡಿದೆ.

Rescue operations in flooded areas
ಪ್ರವಾಹಪೀಡಿತ ಸ್ಥಳಗಳಲ್ಲಿ ರಕ್ಷಣಾ ಕಾರ್ಯಾಚರಣೆ (ANI)
author img

By ETV Bharat Karnataka Team

Published : Aug 29, 2024, 2:03 PM IST

ಅಹಮದಾಬಾದ್​ (ಗುಜರಾತ್)​: ಕಳೆದ ಮೂರು ದಿನಗಳಿಂದ ಗುಜರಾತ್​ನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಇದುವರೆಗೆ 28 ಜನರು ಸಾವನ್ನಪ್ಪಿದ್ದಾರೆ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಿಂದ ಸುಮಾರು 18,000 ಜನರನ್ನು ಸುಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

Rescue operations in flooded areas
ಪ್ರವಾಹಪೀಡಿತ ಸ್ಥಳಗಳಲ್ಲಿ ರಕ್ಷಣಾ ಕಾರ್ಯಾಚರಣೆ (ANI)

ವಾಡಿಕೆಗಿಂತ ಹೆಚ್ಚಿನ ಮಳೆಯಿಂದಾಗಿ ಗುಜರಾತ್​ನ 18 ಜಿಲ್ಲೆಗಳು ಅತೀವ ಹಾನಿಗೊಳಗಾಗಿವೆ. ಕಚ್​, ದ್ವಾರಕಾ, ಜಾಮ್​ನಗರ, ಮೊರ್ಬಿ, ಸುರೇಂದ್ರನಗರ, ಜುನಾಗಢ್​, ರಾಜ್​ಕೋಟ್​, ಬೊಟಾಡ್​, ಗಿರ್​ ಸೋಮನಾಥ್​, ಅಮ್ರೇಲಿ ಮತ್ತು ಭಾವನಗರದಲ್ಲಿ ಹೆಚ್ಚು ಹಾನಿಯಾಗಿದೆ. ಮುಂದಿನ 5 ದಿನಗಳು ಇದೇ ಪರಿಸ್ಥಿತಿ ಮುಂದುವರಿಯಲಿದ್ದು, 5 ದಿನಗಳ ಕಾಲ ಗುಜರಾತ್​ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಹವಾಮಾನ ಇಲಾಖೆ (ಐಎಂಡಿ) ಗುರುವಾರ ಗುಜರಾತ್​ನ 33 ಜಿಲ್ಲೆಗಳ ಪೈಕಿ 11 ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​ ಹಾಗೂ ಉಳಿದ 22 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ ಘೋಷಣೆ ಮಾಡಿದೆ. ಈ ಪ್ರದೇಶದಲ್ಲಿ ಆಳವಾದ ವಾಯುಭಾರ ಕುಸಿತದಿಂದಾಗಿ ಭಾರಿ ಮಳೆಯಾಗುತ್ತಿದೆ. ಕಚ್​, ದ್ವಾರಕಾ, ಜಾಮ್‌ನಗರ, ಮೊರ್ಬಿ, ಸುರೇಂದ್ರನಗರ, ಜುನಾಗಢ್, ರಾಜ್‌ಕೋಟ್, ಬೊಟಾಡ್, ಗಿರ್ ಸೋಮನಾಥ್, ಅಮ್ರೇಲಿ ಮತ್ತು ಭಾವನಗರ ಜಿಲ್ಲೆಗಳನ್ನು ಒಳಗೊಂಡಿರುವ ಕಚ್​ ಮತ್ತು ಸೌರಾಷ್ಟ್ರ ಪ್ರದೇಶಗಳಿಗೆ IMD ರೆಡ್ ಅಲರ್ಟ್ ನೀಡಿದೆ. ಉಳಿದಂತೆ, ಉತ್ತರ, ಮಧ್ಯ ಮತ್ತು ದಕ್ಷಿಣ ಗುಜರಾತ್‌ಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಗುಜರಾತ್ ಸರ್ಕಾರವು ಹಂಚಿಕೊಂಡ ವಿವರಗಳ ಪ್ರಕಾರ, ಮೋರ್ಬಿ, ವಡೋದರಾ, ಭರೂಚ್, ಜಾಮ್‌ನಗರ, ಅರಾವಳಿ, ಪಂಚಮಹಲ್, ದ್ವಾರಕಾ ಮತ್ತು ದಂಗ್ ಜಿಲ್ಲೆಗಳಲ್ಲಿ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದಾರೆ. ಆನಂದ್‌ನಲ್ಲಿ ಆರು ಜನರು, ಅಹಮದಾಬಾದ್‌ನಲ್ಲಿ ನಾಲ್ಕು ಜನರು, ಗಾಂಧಿನಗರ, ಖೇಡಾ, ಮಹಿಸಾಗರ್, ದಾಹೋದ್ ಮತ್ತು ಸುರೇಂದ್ರನಗರ ಜಿಲ್ಲೆಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಮೃತರ ಪೈಕಿ ಏಳು ಜನರು ಮೋರ್ಬಿ ಜಿಲ್ಲೆಯ ಧವಾನಾ ಗ್ರಾಮದ ಬಳಿ ಉಕ್ಕಿ ಹರಿಯುತ್ತಿದ್ದ ಕಾಸ್‌ವೇ ದಾಟುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು, ಗುಜರಾತ್​ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್​ ಅವರೊಂದಿಗೆ ದೂರವಾಣಿ ಸಂಭಾಷೆ ನಡೆಸಿದ್ದು, ಕೇಂದ್ರ ಸರ್ಕಾರದಿಂದ ಸಾಧ್ಯ ಇರುವ ಎಲ್ಲ ಬೆಂಬಲ ಮತ್ತು ನೆರವಿನ ಭರವಸೆ ನೀಡಿದರು.

ವಡೋದರದಲ್ಲಿ ಮಳೆ ನಿಂತಿದ್ದರೂ, ವಿಶ್ವಾಮಿತ್ರಿ ನದಿ ತನ್ನ ಅಪಾಯದ ಮಟ್ಟ ಮೀರಿ ಹಯಿಯುತ್ತಿರುವುದರಿಂದ, ವಸತಿ ಪ್ರದೇಶಗಳಿಗೆ, ಹಲವಾರು ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಭರದ ರಕ್ಷಣಾ ಕಾರ್ಯಾಚರಣೆ: ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ರಾಜ್ಯಾದ್ಯಂತ ನದಿಗಳು ಮತ್ತು ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ಭರದಿಂದ ನಡೆಯುತ್ತಿದೆ.

ಸೇನೆಯ ನೆರವು ಕೋರಿದ ಗುಜರಾತ್​ ಸರ್ಕಾರ: ಗುಜರಾತ್ ಸರ್ಕಾರವು ಪರಿಹಾರ ಕಾರ್ಯಾಚರಣೆಗಾಗಿ ದ್ವಾರಕಾ, ಆನಂದ್, ವಡೋದರಾ, ಖೇಡಾ, ಮೊರ್ಬಿ ಮತ್ತು ರಾಜ್‌ಕೋಟ್ ಜಿಲ್ಲೆಗಳಲ್ಲಿ ತಲಾ ಒಂದರಂತೆ ಭಾರತೀಯ ಸೇನೆಯ ಆರು ಕಾಲಂಗಳನ್ನು ಸಹಾಯಕ್ಕೆ ನೀಡುವಂತೆ ವಿನಂತಿಸಿದೆ. ಗುಜರಾತ್​ ಸರ್ಕಾರದ ಮನವಿಯ ಮೇರೆಗೆ ಭಾರತೀಯ ಸೇನೆಯ ಆರು ತಂಡಗಳು ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಈಗಾಗಲೇ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿವೆ. ಹೆಚ್ಚುವರಿಯಾಗಿ, 14 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಯೋಧರನ್ನು ಮತ್ತು ರಾಜ್ಯ ವಿಪತ್ತು ಪಡೆಯಿಂದ 22 ಯೋಧರನ್ನು ಈಗಾಗಲೇ ವಿಪತ್ತು ನಿರ್ವಹಣೆ ಕಾರ್ಯಾಚರಣೆ ಬೆಂಬಲಿಸಲು ನಿಯೋಜಿಸಲಾಗಿದೆ.

ನಿರಂತರ ಮಳೆಯಿಂದಾಗಿ ರಾಜ್ಯದ ಕೆಲವು ಭಾಗಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ಮುಂದುವರೆದಿರುವ ಕಾರಣ, ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪಡೆ ಅಲ್ಲದೇ ಸೇನೆ, ವಾಯುಪಡೆ, ಮತ್ತು ಕರಾವಳಿ ಕಾವಲು ಪಡೆಗಳೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ರಾಜ್ಯಾದ್ಯಂತ ಜಲಾವೃತ ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ರಕ್ಷಣಾ ಸಿಬ್ಬಂದಿ ಸ್ಥಳಾಂತರಿಸುವ ದೃಶ್ಯಗಳ ಕರುಣಾಜನಕವಾಗಿದೆ. ಏತನ್ಮಧ್ಯೆ, ಭಾರಿ ಮಳೆಯಿಂದಾಗಿ ವಡೋದರಾದ ಏಕತಾ ಪ್ರತಿಮೆಗೆ ಹೋಗುವ ರಸ್ತೆ ಹಾಳಾಗಿದೆ.

ಇದನ್ನೂ ಓದಿ: ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಳ: ಉಗಾರ-ಕುಡಚಿ ಸೇತುವೆ ಜಲಾವೃತ - Kudachi bridge sink

ETV Bharat Logo

Copyright © 2024 Ushodaya Enterprises Pvt. Ltd., All Rights Reserved.