ETV Bharat / bharat

ಮಾರ್ಗದರ್ಶಿತ ಪ್ರವಾಸ ಉತ್ತಮವಲ್ಲ; ಮತದಾನ ವೀಕ್ಷಣೆಗೆ ರಾಜತಾಂತ್ರಿಕ ನಿಯೋಗಕ್ಕೆ ಆಹ್ವಾನದ ಕುರಿತು ಅಬ್ಧುಲ್ಲಾ ಕಿಡಿ - govt for inviting foreign diplomats - GOVT FOR INVITING FOREIGN DIPLOMATS

ಚುನಾವಣೆಗಳು ಭಾರತದ ಆಂತರಿಕ ವಿಷಯವಾಗಿದ್ದು, ನಮಗೆ ಯಾವುದೇ ರೀತಿಯ ಪ್ರಮಾಣ ಪತ್ರ ಬೇಕಾಗಿಲ್ಲ. ಇಲ್ಲಿನ ಚುನಾವಣೆ ಪ್ರಕ್ರಿಯೆಗಳನ್ನು ವೀಕ್ಷಣೆ ಹಾಗೂ ಪರಿಶೀಲನೆಗೆ ವಿದೇಶಿಯರನ್ನು ಏಕೆ ಕರೆಯಬೇಕು ಎಂದು ಫಾರೂಕ್​ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.

guided-tour-not-good-omar-slams-govt-for-inviting-foreign-diplomats-to-see-j-k-polls
ಮತಚಲಾಯಿಸಿದ ಒಮರ್​ ಅಬ್ಧುಲ್ಲಾ (eಎನ್​ಐ)
author img

By PTI

Published : Sep 25, 2024, 3:29 PM IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಚುನಾವಣೆ ವೀಕ್ಷಣೆಗೆ ವಿದೇಶಿ ರಾಜತಾಂತ್ರಿಕರಿಗೆ ಕೇಂದ್ರ ಸರ್ಕಾರ ಆಹ್ವಾನ ನೀಡಿರುವ ಕ್ರಮಕ್ಕೆ ಒಮರ್​ ಒಬ್ದುಲ್ಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆಗಳು ಭಾರತದ ಆಂತರಿಕ ವಿಷಯವಾಗಿದ್ದು, ನಮಗೆ ಯಾವುದೇ ರೀತಿಯ ಪ್ರಮಾಣ ಪತ್ರ ಬೇಕಾಗಿಲ್ಲ. ಇಲ್ಲಿನ ಚುನಾವಣೆಯನ್ನು ಪರೀಕ್ಷಿಸಲು ಹಾಗೂ ವೀಕ್ಷಿಸಲು ವಿದೇಶಿಯರನ್ನು ಏಕೆ ಕೇಳಬೇಕು ಎಂದು ನನಗೆ ತಿಳಿಯುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದು ಮಾರ್ಗದರ್ಶಿ ಪ್ರವಾಸವಾಗಿದ್ದರೆ, ಇದು ಒಳ್ಳೆಯ ಲಕ್ಷಣವಲ್ಲ. ಈ ಚುನಾವಣೆಯಲ್ಲಿ ಜನರು ಭಾಗವಹಿಸುವಿಕೆ ಕುರಿತು ಕೇಂದ್ರವೂ ಪ್ರಶಂಸೆ ಪಡೆಯಲು ಬಯಸುತ್ತಿದೆ. ಈ ಮೂಲಕ ಇಲ್ಲಿನ ಜನರಿಗೆ ದ್ರೋಹ ಬಗೆಯುತ್ತಿದೆ ಎಂದು ನ್ಯಾಷನಲ್​ ಕಾನ್ಫರೆನ್ಸ್​ನ ಫಾರೂಕ್​ ಅಬ್ದುಲ್ಲಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರದಲ್ಲಿ ಎರಡನೇ ಹಂತದ ಚುನಾವಣೆ: ಜಮ್ಮು ಮತ್ತು ಕಾಶ್ಮೀರದ 6 ಜಿಲ್ಲೆಗಳ 26 ಸ್ಥಾನಗಳಿಗೆ ಇಂದು ಎರಡನೇ ಹಂತದ ಮತದಾನ ನಡೆಯುತ್ತಿದೆ. ಈ ಚುನಾವಣೆಗಳನ್ನು ವೀಕ್ಷಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಆಹ್ವಾನದ ಮೇರೆಗೆ 16 ರಾಜತಾಂತ್ರಿಕರ ನಿಯೋಗ ಆಗಮಿಸಿದೆ.

ಈ ಕುರಿತು ಟೀಕೆ ವ್ಯಕ್ತಪಡಿಸಿದ ನ್ಯಾಷನಲ್​ ಕಾನ್ಫರೆನ್ಸ್​ ಪಕ್ಷದ ನಾಯಕ ಅಬ್ಧುಲ್ಲಾ, ಅವರು ಜನರನ್ನು ಅವಮಾನ ಮಾಡುತ್ತಿದ್ದು, ಜನರನ್ನು ಬಂಧಿಸಿ ಮತ್ತು ಕಿರುಕುಳ ನೀಡಲು ಸರ್ಕಾರ ತನ್ನ ಎಲ್ಲ ತಂತ್ರಗಳನ್ನು ಬಳಸುತ್ತಿದೆ. ಜನರು ಚುನಾವಣೆಯಲ್ಲಿ ಭಾಗಿಯಾಗುತ್ತಿರುವುದನ್ನು ಭಾರತ ಸರ್ಕಾರ ಒತ್ತಿ ಹೇಳುವು ಅವಶ್ಯಕತೆ ಇಲ್ಲ. ಆದರೆ, ಸರ್ಕಾರ ಅದನ್ನು ಮಾಡುತ್ತಿದೆ ಎಂದರು.

ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಭಾರತ ಅಥವಾ ವಿದೇಶಿ ರಾಷ್ಟ್ರಗಳು ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ ಎಂದರೆ, ಮತ್ತೆ ಏಕೆ ಅವರನ್ನು ಆಮಂತ್ರಿಸಲಾಗಿದೆ. ಚುನಾವಣೆಯಲ್ಲಿ ಭಾಗಿಯಾಗುತ್ತಿರುವುದಕ್ಕೆ ಜಮ್ಮು ಮತ್ತು ಕಾಶ್ಮೀರ ಜನಕ್ಕೆ ಪ್ರಶಂಸೆ ನೀಡಬೇಕು. ಆದರೆ, ಈ ಎಲ್ಲ ಪ್ರಶಂಸೆಗಳನ್ನು ಭಾರತ ಸರ್ಕಾರ ಪಡೆಯುತ್ತಿದೆ. ವಿದೇಶಿ ರಾಜತಾಂತ್ರಿಕರನ್ನು ಆಮಂತ್ರಿಸಿರುವ ಸರ್ಕಾರ ಯಾಕೆ ವಿದೇಶಿ ಪತ್ರಕರ್ತರಿಗೆ ಅವಕಾಶ ನೀಡಿಲ್ಲ ಎಂದು ಇದೇ ವೇಳೆ ಪ್ರಶ್ನಿಸಿದರು.

ಇಲ್ಲಿನ ಚುನಾವಣೆ ಪ್ರಸಾರಕ್ಕೆ ಯಾವುದೇ ವಿದೇಶಿ ಪತ್ರಕರ್ತರಿಗೆ ಅನುಮತಿ ನೀಡಿಲ್ಲ. ಆದರೆ, ಮಾರ್ಗದರ್ಶಿತ ಪ್ರವಾಸಕ್ಕೆ ಮಾತ್ರ ರಾಜತಾಂತ್ರಿಕರಿಗೆ ಅವಕಾಶ ನೀಡಲಾಗಿದೆ. ಇದು ಉತ್ತಮ ನಡೆಯಲ್ಲ ಎಂದು ಟೀಕಿಸಿದರು.

ದಶಕಗಳ ಬಳಿಕ ಹಾಗೂ 2019ರಲ್ಲಿ ವಿಶೇಷ ಸ್ಥಾನಮಾನದ 370ನೇ ವಿಧಿ ರದ್ದುಗೊಳಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯುತ್ತಿದೆ. ಈಗಾಗಲೇ ಮೊದಲ ಹಂತದ ಚುನಾವಣೆ ನಡೆದಿದ್ದು, ಇಂದು ಎರಡನೇ ಹಂತದ ಚುನಾವಣೆ ಸಾಗುತ್ತಿದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ: ಮಧ್ಯಾಹ್ನ 1 ಗಂಟೆಗೆ ಶೇ 36.93 ಮತದಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.