ETV Bharat / bharat

ಪ್ರಜಾಪ್ರಭುತ್ವದ ಸೌಂದರ್ಯ ಹೆಚ್ಚಿಸಲು ಪರಿಸರ ಸ್ನೇಹಿ ಚುನಾವಣೆಯತ್ತ ಹರಿಸಬೇಕಿದೆ ಚಿತ್ತ - environmental impact of election

Green elections: ಚುನಾವಣೆಯಲ್ಲಿ ಬಳಕೆ ಮಾಡುವ ಫ್ಲೆಕ್ಸ್​, ಕಟೌಟ್​​ ಮತ್ತು ಹೋರ್ಡಿಂಗ್​, ವಾಹನಗಳು ಹೊರಸೂಸುವ ಹೊಗೆ ಪರಿಸರದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ. ಹೀಗಾಗಿ ಪರಿಸರ ಸ್ನೇಹಿ ಚುನಾವಣೆ ನಡೆಸಬೇಕಾದ ಅಗತ್ಯವಿದೆ.

green-elections-reducing-the-environmental-impact-of-election-campaigns-and-processes

author img

By ETV Bharat Karnataka Team

Published : May 2, 2024, 2:00 PM IST

Updated : May 2, 2024, 2:16 PM IST

ಹೈದರಾಬಾದ್​: ದೇಶದೆಲ್ಲೆಡೆ ಚುನಾವಣಾ ಕಾವು ಜೋರಾಗಿದೆ. ಅಭ್ಯರ್ಥಿಗಳು ಎಲ್ಲೆಡೆ ಸಮಾವೇಶ, ರ‍್ಯಾಲಿ ನಡೆಸವ ಮೂಲಕ ಮತಯಾಚನೆ ಮಾಡುತ್ತಿದ್ದಾರೆ. ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡ ಮತದಾರರ ಬಳಿ ಸಾಗುತ್ತಿದ್ದಾರೆ. ರಸ್ತೆಗಳ ತುಂಬೆಲ್ಲಾ ಫ್ಲೆಕ್ಸ್​, ಕಟೌಟ್​​ ಮತ್ತು ಹೋರ್ಡಿಂಗ್​ ರಾರಾಜಿಸುತ್ತಿದೆ. ಪ್ರಜಾಪ್ರಭುತ್ವದ ಹಬ್ಬದ ಸಂಭ್ರಮ ಮುಗಿಲು ಮಟ್ಟಿದೆ. ಈ ನಡುವೆ ಪರಿಸರದ ಬಗ್ಗೆ ಯಾರು ಕಾಳಜಿ ಮಾಡುತ್ತಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ. ಚುನಾವಣೆಯ ಈ ಸಾಮಗ್ರಿಗಳು ಪ್ಲಾಸ್ಟಿಕ್​​ ಮುಕ್ತವಾಗಿ ಪರಿಸರ ಸ್ನೇಹಿ ವಸ್ತುಗಳ ಬಳಕೆ ಮಾಡಬೇಕು. ಪರಿಸರ ಸ್ನೇಹಿ ಚುನಾವಣೆಗಳು ಪ್ರಜಾಪ್ರಭುತ್ವದ ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡುತ್ತದೆ ಎನ್ನುತ್ತಾರೆ ತಜ್ಞರು.

ಇದರ ಅವಶ್ಯಕತೆ ಏಕೆ?: ಅಧ್ಯಯನ ಹೇಳುವಂತೆ 2016ರಲ್ಲಿ ಅಮೆರಿಕ ಅಧ್ಯಕ್ಷ ಚುನಾವಣೆಯ ಸಂದರ್ಭದಲ್ಲಿ ಪರಿಸರದ ಮೇಲೆ ಬಾರಿ ಪ್ರಮಾಣದ ಹೊರೆ ಬಿದ್ದಿತು. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಹಬ್ಬದಲ್ಲಿ ಬಳಕೆ ಆಗುವ ವಿದ್ಯುತ್​, ಭಾರಿ ಪ್ರಮಾಣದ ಇಂಧನ ಬಳಕೆ ಮತ್ತು ಅದಕ್ಕೆ ಆಗುವ ಖರ್ಚು, ಧ್ವನಿ ವರ್ಧಕದಿಂದ ಆಗುವ ಶಬ್ಧ ಮಾಲಿನ್ಯ. ಇದರ ಜೊತೆಗೆ ಪಿವಿಸಿ ಫ್ಲೆಕ್ಸ್​ ಬ್ಯಾನರ್, ಹೋರ್ಡಿಂಗ್​, ಪೋಸ್ಟರ್​, ಕಟೌಟ್​, ಪ್ಲಾಸ್ಟಿಕ್​ ಬಳಕೆಯ ಪ್ರೋಮೊಷನಲ್​ ಮೆಟಿರಿಯಲ್ಸ್​ ಮತ್ತು ವಿಲೇವಾರಿ ವಸ್ತುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಕೆ ಮಾಡಲಾಗಿತ್ತು. ಚುನಾವಣೆ ಬಳಿಕ ಈ ವಸ್ತುಗಳೆಲ್ಲ ಮೋರಿ, ಭೂಮಿ, ನದಿ ಸೇರಿದವು. ಇದರಿಂದ ನೀರು ಮತ್ತು ಮಣ್ಣು ಮಾಲಿನ್ಯವಾಯಿತು. ಪಾಲಿವಿನೈಲ್ ಕ್ಲೋರೈಡ್ ಆಧಾರಿತ ಪ್ಲಾಸ್ಟಿಕ್​ ಸುಟ್ಟ ಪರಿಣಾಮ ವಿಷಕಾರಿ ಗ್ಯಾಸ್​ ಬಿಡುಗಡೆಯಾಯಿತು.

ಇದರ ಜೊತೆಗೆ ದೇಶದೆಲ್ಲೆಡೆಯ ಮತಗಟ್ಟೆಗಳು, ಮತಗಟ್ಟೆ ಸಾಮಗ್ರಿಗಳು ಸಾಗಾಣೆಗೆ ಭಾರಿ ಗಾತ್ರದ ವಾಹನಗಳ ಬಳಕೆ ಮಾಡಲಾಯಿತು. ಇದರಿಂದ ಭಾರಿ ಇಂಧನ ಖರ್ಚಾಯಿತು. ಒಂದು ಲೀಟರ್​​ ಡಿಸೇಲ್​ನಿಂದ ಪರಿಸರದಲ್ಲಿ 2.7 ಕೆಜಿ ಕಾರ್ಬನ್​ ಡೈ ಆಕ್ಸೈಡ್​​ ಬಿಡುಗಡೆಯಾಗುತ್ತದೆ. ಇದನ್ನು ಲೆಕ್ಕ ಹಾಕಿದರೆ, ಚುನಾವಣೆಯಲ್ಲಿ ಎಷ್ಟು ಕೋಟಿ ಹೊಗೆ ಬಿಡುಗಡೆಯಾಗಿದೆ ಎಂಬುದನ್ನು ಅರ್ಥೈಸಿಕೊಳ್ಳಬಹುದು. ಇದು ಪರಿಸರ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ಚುನಾವಣೆಗೆ ವಿನಾಯಿತಿ ಇಲ್ಲ: ವಿಶ್ವ ಬ್ಯಾಂಕ್​ ಕಳೆದ ವರ್ಷ ಬಿಡುಗಡೆ ಮಾಡಿದ ವರದಿ ಅನುಸಾರ, ಭಾರತ ಶೇ 80ರಷ್ಟು ಜನಸಂಖ್ಯೆ ಪರಿಸರ ಸಂಬಂಧಿ ವಿಪತ್ತಿನ ಅಧಿಕ ಬೆದರಿಕೆಯಲ್ಲಿ ಜೀವಿಸುತ್ತಿದ್ದಾರೆ. ವಿಶ್ವ ಹವಾಮಾನ ಸಂಘಟನೆ ಹೇಳುವಂತೆ ಭಾರತದಲ್ಲಿ 90 ಲಕ್ಷಕ್ಕೂ ಹೆಚ್ಚು ಮಂದಿ ಪರಿಸರ ಬದಲಾವಣೆಯಿಂದ ಹೆಚ್ಚಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾವು ಪರಿಸರ ಸ್ನೇಹಿ ನಿಯಮಗಳನ್ನು ಎಲ್ಲ ಆಯಾಮದಲ್ಲಿ ಅನುಸರಿಸಬೇಕಿದೆ. ಚುನಾವಣೆಗಳು ಇದರಿಂದ ಹೊರತಾಗಿಲ್ಲ.

ಪ್ರಯೋಜನಗಳಿವು: ಪರಿಸರ ಸ್ನೇಹಿ ನಿಯಮ ಅಳವಡಿಸುವ ಮೂಲಕ ಸಾರ್ವಜನಿಕ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುವಂತೆ ಶಬ್ದ ಮಾಲಿನ್ಯ ತಗ್ಗಿಸಿ ಮತ್ತು ಗಾಳಿ ಗುಣಮಟ್ಟ ಹೆಚ್ಚಿಸಬೇಕಿದೆ. ಈ ಪ್ರಕ್ರಿಯೆಯಲ್ಲಿ ಪರಿಸರ ಸ್ನೇಹಿ ಚುನಾವಣೆಗಳು ಆರಂಭದಲ್ಲಿ ಅಧಿಕ ವೆಚ್ಚ ಎಂದು ಎನಿಸಿದರೂ ಅದು ವರ್ಷ ಕಳೆದಂತೆ ವೆಚ್ಚ ತಗ್ಗಲಿದೆ. ಚುನಾವಣೆ ಬಳಿಕ ಉಂಟಾಗುವ ತ್ಯಾಜ್ಯ ಸಂಗ್ರಹದ ಹೊರೆ ಕಡಿಮೆ ಮಾಡಬಹುದು.

ಹೊಸ ಪೀಳಿಗೆಯ ಪ್ರಾಧಾನ್ಯತೆ: ಭಾರತದ ಹೊಸ ಪೀಳಿಗೆ ಅಸಾಮಾನ್ಯ ಹವಾಮಾನವನ್ನು ಕೆಲವು ವರ್ಷಗಳಿಂದ ಕಾಣುತ್ತಿದೆ. ಡೆಲೊಯ್ಟ್​ ಸಮೀಕ್ಷೆ ಹೇಳುವಂತೆ, ಹವಾಮಾನ ಬದಲಾವಣೆಯು 1.8 ಕೋಟಿ ಹೊಸ ಮತದಾರರ ಪ್ರಮುಖ ಸಾಮಾಜಿಕ ಸಮಸ್ಯೆಯಾಗಿದೆ.

ಏನು ಮಾಡಬೇಕಿದೆ?: ಚುನಾವಣಾ ಆಯೋಗ 1999ರಲ್ಲಿ ಚುನಾವಣೆಯಲ್ಲಿ ಎಲ್ಲ ಪಕ್ಷಗಳಿಗೆ ಪ್ಲಾಸ್ಟಿಕ್​/ ಪಾಲಿಥಿನ್​ ಅನ್ನು ಚುನಾವಣಾ ಸಾಮಗ್ರಿಗೆ ಬಳಕೆ ಮಾಡದಂತೆ ಸಲಹೆ ನೀಡಿತು. ಈ ರೀತಿ ಪರಿಸರ ಸ್ನೇಹಿ ಚುನಾವಣೆಗೆ ಮುಂದಾಗಲು ತಜ್ಞರು ನೀಡಿದ ಸಲಹೆಗಳು ಇಲ್ಲಿದೆ. ಪಕ್ಷಗಳು, ಚುನಾವಣಾ ಆಯೋಗ, ಸರ್ಕಾರ, ಮತದಾರರು ಮತ್ತು ನಾಗರಿಕ ಸಮಾಜ ಸೇರಿದಂತೆ ಎಲ್ಲರೂ ಪರಿಸರ ಸ್ನೇಹಿ ಚುನಾವಣೆಗೆ ಮುಂದಾಗಬೇಕು.

ಶಾಸಕಾಂಗ ಕೂಡ ಪರಿಸರ - ಸ್ನೇಹಿ ಚುನಾವಣಾ ಪ್ರಕ್ರಿಯೆ ನಡೆಸುವಂತೆ ಆದೇಶ ನೀಡಬೇಕು. ಇದು ಎಲ್ಲ ಚುನಾವಣಾ ನಿಯಮದಲ್ಲಿ ಭಾಗಿಯಾಗಬೇಕು. ದೊಡ್ಡ ದೊಡ್ಡ ರ‍್ಯಾಲಿಗಳು ಕಡಿಮೆಯಾಗಬೇಕು. ಡಿಜಿಟಲ್​ ಪ್ಲಾಟ್​ಫಾರ್ಮ್​, ವರ್ಚುಯಲ್​ ಪ್ರಚಾರ, ಮನೆ ಮನೆ ಪ್ರಚಾರಕ್ಕೆ ಆದ್ಯತೆ ನೀಡಬೇಕು. ಪರಿಸರ ಸ್ನೇಹಿ ವಾಹನಗಳ ಬಳಕೆಯಾಗಬೇಕು. ಕಾರ್​ಪೂಲಿಂಗ್​ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಉತ್ತೇಜನ ನೀಡಬೇಕು.

ಪ್ಲಾಸ್ಟಿಕ್​ ಅನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಇದಕ್ಕೆ ಪರ್ಯಾಯವಾಗಿ ಬಟ್ಟೆ, ಮರುಬಳಕೆ ಪೇಪರ್​ ಅಥವಾ ಕರಗುವ ಪ್ಲಾಸ್ಟಿಕ್​ ಬಳಕೆ ಮಾಡಬೇಕು. ಮತಗಟ್ಟೆಗಳಲ್ಲೂ ಈ ನಿಯಮ ಪಾಲಿಸಬೇಕು. ತ್ಯಾಜ್ಯ ಸಂಗ್ರಹ, ವರ್ಗೀಕರಣ ಮತ್ತು ವಿಲೇವಾರಿ ಆದ್ಯತೆ ಮೇರೆಗೆ ನಡೆಯಬೇಕು.

ಡಿಜಿಟಲ್​ ವೋಟಿಂಗ್​: ಚುನಾವಣೆಯಲ್ಲಿ ಕಾರ್ಬನ್ ಹೊರಸೂಸುವಿಕೆಯ ಪ್ರಮುಖ ಮೂಲ ಮತದಾರರನ್ನು ಮತ್ತು ಚುನಾವಣಾ ಸಾಮಗ್ರಿಗಳನ್ನು ಮತಗಟ್ಟೆಗಳಿಗೆ ಮತ್ತು ಹೊರಗೆ ಸಾಗಿಸಲು ಬಳಸುವ ಸಾರಿಗೆ ವ್ಯವಸ್ಥೆಗಳು ಎಂದು ಅಧ್ಯಯನವೊಂದು ಹೇಳುತ್ತದೆ. ಮತಗಟ್ಟೆಗಳು ಪರಿಸರಕ್ಕೂ ಹೊರೆಯಾಗುತ್ತಿವೆ. ಮತದಾರರು ಮತಗಟ್ಟೆಗಳಿಗೆ ತೆರಳುವ ಅಗತ್ಯವಿಲ್ಲದೇ ಡಿಜಿಟಲ್ ಮತದಾನ ವ್ಯವಸ್ಥೆ ಜಾರಿಗೆ ತಂದರೆ ಚುನಾವಣೆ ಸಂಬಂಧಿತ ಇಂಗಾಲದ ಹೊರಸೂಸುವಿಕೆಯನ್ನು ಶೇ.40ರಷ್ಟು ಕಡಿಮೆ ಮಾಡಬಹುದು

ಭಾರತದ ಚುನಾವಣಾ ಆಯೋಗ ಡಿಜಿಟಲ್​ ವೋಟಿಂಗ್​ ಮಾಡಲು ಪ್ರಯತ್ನಿಸಬೇಕು. ಈ ದಿಸೆಯಲ್ಲಿ ನಿಜಕ್ಕೂ ಹಲವು ಸವಾಲುಗಳಿವೆ. ಮೂಲಸೌಕರ್ಯ ಅತ್ಯಗತ್ಯ. ಅವುಗಳನ್ನು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕವಾಗಿ ಸ್ಥಾಪಿಸಬೇಕು. ಹ್ಯಾಕಿಂಗ್ ಮತ್ತು ಇತರ ವಂಚನೆಗಳನ್ನು ತಪ್ಪಿಸಬೇಕು. ಅಧಿಕಾರಿಗಳಿಗೆ ತರಬೇತಿ ನೀಡಬೇಕು. ಡಿಜಿಟಲ್ ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲ ಮತದಾರರು ಸಮಾನವಾಗಿ ಪಾಲ್ಗೊಳ್ಳುವಂತೆ ಸರ್ಕಾರ ಕೆಲಸ ಮಾಡಬೇಕು.

ಹಸಿರು ಚುನಾವಣೆಯತ್ತ ಮೊದಲ ಹೆಜ್ಜೆ: 2019 ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ, ಕೇರಳ ರಾಜ್ಯ ಚುನಾವಣಾ ಆಯೋಗ ರಾಜಕೀಯ ಪಕ್ಷಗಳು ತಮ್ಮ ಪ್ರಚಾರದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಮನವಿ ಮಾಡಿತು. ಕೇರಳ ಹೈಕೋರ್ಟ್​​ ಚುನಾವಣಾ ಪ್ರಚಾರದಲ್ಲಿ ಫ್ಲೆಕ್ಸ್ ಮತ್ತು ಜೈವಿಕ ವಿಘಟನೀಯವಲ್ಲದ ವಸ್ತುಗಳನ್ನು ಬಳಸುವುದನ್ನು ನಿಷೇಧಿಸಿತು. ಇದರಿಂದಾಗಿ ಗೋಡೆ ಬರಹ ಮತ್ತು ಕಾಗದದ ಪೋಸ್ಟರ್​ಗಳು ಬಂದವು. ಚುನಾವಣಾ ಪ್ರಕ್ರಿಯೆಯಲ್ಲೂ ಕೈಯಿಂದ ತಯಾರಿಸಿದ ಪೇಪರ್ ಪೆನ್ನುಗಳು ಮತ್ತು ಪೇಪರ್ ಬ್ಯಾಗ್‌ಗಳನ್ನು ಬಳಸಲಾಗುತ್ತಿತ್ತು

ಗೋವಾ ರಾಜ್ಯ ಜೀವವೈವಿಧ್ಯ ಮಂಡಳಿಯು 2022ರ ವಿಧಾನಸಭಾ ಚುನಾವಣೆಗಾಗಿ ಪರಿಸರ ಸ್ನೇಹಿ ಮತಗಟ್ಟೆಗಳನ್ನು ಸ್ಥಾಪಿಸಿತು. ಸತ್ತಾರಿ ಮತ್ತು ಪೋಂಡಾದ ಸ್ಥಳೀಯ ಕುಶಲಕರ್ಮಿಗಳು ತೆಂಗಿನ ಚಿಪ್ಪುಗಳು, ತಾಳೆ ಮರಗಳು, ಬಿದಿರು, ಭತ್ತದ ಸಿಪ್ಪೆ ಇತ್ಯಾದಿಗಳಿಂದ ಚುನಾವಣಾ ಸಾಮಗ್ರಿ ತಯಾರಿಸಿದರು.

2019ರಲ್ಲಿ ಶ್ರೀ ಲಂಕಾದ ಪೊದುಜನ ಪೆರಮುನಾ ಪಕ್ಷ ವಿಶ್ವದ ಮೊದಲ ಪರಿಸರ ಸ್ನೇಹಿ ಚುನಾವಣಾ ಪ್ರಚಾರ ಆರಂಭಿಸಿತು. ಪಕ್ಷವೂ ಚುನಾವಣಾ ಪ್ರಚಾರದಿಂದ ಇಂಧನ ಹೊರಸೂಸುವಿಕೆ ಮತ್ತು ವಿದ್ಯುತ್​ ಬಳಕೆ ಪರ್ಯಾಯವಾಗಿ ಪ್ರತಿ ಜಿಲ್ಲೆಗಳಲ್ಲಿ ಮರಗಳನ್ನು ನೆಟ್ಟರು.

ಇದನ್ನೂ ಓದಿ: ದಿನದಿಂದ ದಿನಕ್ಕೆ ಕೆಂಡವಾಗುತ್ತಿರುವ ಸೂರ್ಯ; ನಲ್ಗೊಂಡ ಜಿಲ್ಲೆಯಲ್ಲಿ 46 ಡಿಗ್ರಿ ತಾಪಮಾನ ದಾಖಲು

Last Updated : May 2, 2024, 2:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.