ETV Bharat / bharat

ಪ್ರಸಾರ ಮಸೂದೆ ಕರಡನ್ನು ಹಿಂಪಡೆದ ಸರ್ಕಾರ; ಅ. 15ರ ವರೆಗೆ ಸಲಹೆಗೆ ಸಮಯಾವಕಾಶ - withdraws draft of broadcast bill

author img

By ETV Bharat Karnataka Team

Published : Aug 13, 2024, 12:15 PM IST

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮೂಲಗಳ ಪ್ರಕಾರ, ಇದೀಗ ಕರಡನ್ನು ಹಿಂಪಡೆಯಲಾಗಿದ್ದು, ಹೆಚ್ಚಿನ ಚರ್ಚೆಗಳ ನಂತರ ಹೊಸ ಕರಡನ್ನು ಬಿಡುಗಡೆ ಮಾಡಲಾಗುವುದು.

govt-withdraws-draft-of-broadcast-bill-seeks-suggestions-on-new-one-till-october-15
ಅಶ್ವಿನಿ ವೈಷ್ಣವ್​ (ಈಟಿವಿ ಭಾರತ್​​)

ನವದೆಹಲಿ: ಆನ್​ಲೈನ್​ ವಿಷಯಗಳ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಿದೆ ಎಂದು ಆರೋಪಿಸಲಾಗಿದ್ದ, ವ್ಯಾಪಕ ಟೀಕೆಗೆ ಗುರಿಯಾಗಿದ್ದ ಪ್ರಸಾರ ಸೇವೆ (ನಿಯಂತ್ರಣ) ಮಸೂದೆ-2024 ಕರಡನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮೂಲಗಳ ಪ್ರಕಾರ, ಇದೀಗ ಕರಡನ್ನು ಹಿಂಪಡೆಯಲಾಗಿದ್ದು, ಹೆಚ್ಚಿನ ಚರ್ಚೆಗಳ ನಂತರ ಹೊಸ ಕರಡನ್ನು ಬಿಡುಗಡೆ ಮಾಡಲಾಗುವುದು. ಜೊತೆಗೆ ಈ ಕರಡನ್ನು ಹಿಂಪಡೆಯಲು ಮತ್ತೊಂದು ಕಾರಣ ಸುದ್ದಿ ಪ್ರಸಾರ ಮತ್ತು ಡಿಜಿಟಲ್​ ಅಸೋಸಿಯೇಷನ್​ ಒತ್ತಡ ಆಗಿದೆ.

ಈ ಕರಡಿಗೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳಿಂದ ಅನೇಕ ಹೇಳಿಕೆ ಮತ್ತು ಶಿಫಾರಸ್ಸುಗಳನ್ನು ಸರ್ಕಾರ ಪಡೆದಿದ್ದು, ಇದಾದ ಬಳಿಕ ಪ್ರಸ್ತುತದ ಕರಡನ್ನು ಹಿಂಪಡೆಯಲಾಗಿದೆ. ಇದೀಗ ಸರ್ಕಾರ ಕರಡಿಗೆ ಸಂಬಂದಿಸಿದಂತೆ ಸಲಹೆ ಮತ್ತು ಅನಿಸಿಕೆಗಳನ್ನು ನೀಡಲು 2024ರ ಅಕ್ಟೋಬರ್ 15ರವರೆಗೆ ಸಮಯ ವಿಸ್ತರಿಸಿದೆ.

ಇನ್ನು ಈ ಕರಡನ್ನು ವಾಪಸ್​ ಪಡೆದಿರುವ ಕುರಿತು ಎಂಐಬಿ ಅಧಿಕೃತವಾಗಿ ದೃಢಡಿಸಿಲ್ಲ. ಆದರೆ, ಸೋಮವಾರ ಸಂಜೆ ಮಾತನಾಡಿದ ಸಚಿವಾಲಯ, ಮತ್ತಷ್ಟು ಸಮಾಲೋಚನೆ ಬಳಿಕ ಹೊಸದಾಗಿ ಪ್ರಸಾರ ಮಸೂದೆ ಕರಡನ್ನು ಸಿದ್ಧಪಡಿಸಲಾಗುವುದು ಎಂದಿದೆ.

ಕರಡು ಪ್ರಸಾರ ಸೇವೆ ನಿಯಂತ್ರಣ ಮಸೂದೆಯನ್ನು ಸರ್ಕಾರದ ಕೆಲವು ಸಂಬಂಧಿಸಿದವರೊಂದಿಗೆ ಹಂಚಿಕೆ ಮಾಡಿತು. ಡಿಜಿಪಬ್​ ಮತ್ತು ಎಡಿಟರ್​ ಗಿಲ್ಡ್​​ ಆಫ್​ ಇಂಡಿಯಾದಂತಹ ಮಾಧ್ಯಮ ಮಂಡಳಿಗಳು, ಡಿಜಿಟಲ್​ ಮಾಧ್ಯಮ ಸಂಘಟನೆ ಮತ್ತು ಸಿವಿಲ್​ ಸೊಸೈಟಿ ಅಸೋಸಿಯೇಷನ್​ಗಳ ಸಮಾಲೋಚನೆ ನಡೆಸಿಲ್ಲ ಎಂದು ಟೀಕೆ ಮಾಡಿದ್ದವು.

ಕರಡು ಮಸೂದೆ ಕುರಿತು ಸಚಿವಾಲಯವು ಅನೇಕರ ಜೊತೆ ಸರಣಿ ಸಮಾಲೋಚನೆ ನಡೆಸಲಿದೆ. ಇದಾದ ಬಳಿಕ ಈ ಕುರಿತು ಟೀಕೆ ಮತ್ತು ಸಲಹೆ ನೀಡಲು ಅಕ್ಟೋಬರ್​ 15ರ ವರೆಗೆ ಸಮಯಾವಕಾಶ ನೀಡಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಎಕ್ಸ್​ನಲ್ಲಿ ತಿಳಿಸಿದೆ.

ವಿವರವಾದ ಸಮಾಲೋಚನೆ ಬಳಿಕ ಹೊಸ ಕರಡನ್ನು ಪ್ರಕಟಿಸಲಾಗುವುದು. ಪ್ರಸಾರ ಸೇವೆ (ನಿಯಂತ್ರಣ) ಮಸೂದೆ ಕರಡಿನ ಸಂಬಂಧ ಕೆಲಸ ಮಾಡಲಾಗುತ್ತಿದೆ. ಸಾಮಾನ್ಯ ಸಾರ್ವಜನಿಕರು ಮತ್ತು ಸಂಬಂಧಿತರ ಹೇಳಿಕೆಯ ವಿವರಣೆ ಪಟ್ಟಿಯ ಜೊತೆಗೆ ಈ ಬಿಲ್ ಅನ್ನು 2023ರ ನವೆಂಬರ್​ 10ರಂದು ಸಾರ್ವಜನಿಕ ಡೊಮೈನ್​ನಲ್ಲಿ ಇಡಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಈ ಸಂಬಂಧ ಅನೇಕ ಅಸೋಸಿಯೇಷನ್​ಗಳಿಂದ ಅನೇಕ ಶಿಫಾರಸು, ಟೀಕೆ ಮತ್ತು ಸಲಹೆಗಳನ್ನು ಪಡೆಯಲಾಗಿದೆ. ಈ ಮಸೂದೆಯಲ್ಲಿ ಆನ್​ಲೈನ್​ ವಿಷಯ ಕ್ರಿಯೇಟರ್​ ಜೊತೆಗೆ ಒಟಿಟಿ ಮತ್ತು ಡಿಜಿಟಲ್​ ಸುದ್ದಿ ಪ್ರಸಾರಗಳನ್ನು ಸೇರಿಸಲಾಗಿದೆ. ಇವರನ್ನೆಲ್ಲಾ ಸಚಿವಾಲಯದ ವಿಷಯ ಮತ್ತು ಜಾಹೀರಾತು ಕೋಡ್‌ನ ವ್ಯಾಪ್ತಿಗೆ ತರಲಾಗುವುದು.

ಇದನ್ನೂ ಓದಿ: ಇಂದಿನಿಂದ ಐದು ದಿನಗಳ ಕಾಲ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ - Karnataka Rain forecast

ETV Bharat Logo

Copyright © 2024 Ushodaya Enterprises Pvt. Ltd., All Rights Reserved.