ETV Bharat / bharat

ದೇಶದಲ್ಲಿ 2.68 ಕೋಟಿ ವಿಕಲಚೇತನರು, ರಾಷ್ಟ್ರೀಯ ಡೇಟಾಬೇಸ್​ ತಯಾರಿಗೆ ಸಿದ್ಧತೆ: ಕೇಂದ್ರದ ಮಾಹಿತಿ - NATIONAL DATABASE FOR DISABLED

ಕೇಂದ್ರ ಸರ್ಕಾರ ವಿಕಲಚೇತನರ ಡೇಟಾಬೇಸ್​ ರಚಿಸುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಅನುಪ್ರಿಯಾ ಹೇಳಿದ್ದಾರೆ.

ಅನುಪ್ರಿಯಾ ಪಟೇಲ್
ರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಅನುಪ್ರಿಯಾ (IANS)
author img

By ETV Bharat Karnataka Team

Published : Dec 6, 2024, 7:49 PM IST

ನವದೆಹಲಿ: ಭಾರತದಲ್ಲಿ ಅಂದಾಜು 2.68 ಕೋಟಿ ವಿಕಲಚೇತನರಿದ್ದು, ಇದು ಒಟ್ಟು ಜನಸಂಖ್ಯೆಯ ಶೇ 2.21ರಷ್ಟಿದೆ ಮತ್ತು ವಿಕಲಚೇತನರ ಸಂಖ್ಯೆಯನ್ನು ನಿಖರವಾಗಿ ತಿಳಿಯಲು ಸರಕಾರವು ವಿಕಲಚೇತನರ ರಾಷ್ಟ್ರೀಯ ಡೇಟಾಬೇಸ್ (ಪಿಡಬ್ಲ್ಯೂಡಿ) ರಚಿಸುತ್ತಿದೆ ಎಂದು ಸಂಸತ್ತಿಗೆ ಶುಕ್ರವಾರ ಮಾಹಿತಿ ನೀಡಲಾಯಿತು. ದೇಶದಲ್ಲಿನ ವಿಕಲಚೇತನರ ಜನಸಂಖ್ಯೆಯ ಅಂದಾಜು ಪ್ರಮಾಣವನ್ನು ಕಂಡುಹಿಡಿಯಲು ಈ ಡೇಟಾಬೇಸ್ ವಿಶ್ವಾಸಾರ್ಹ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಲೋಕಸಭೆಗೆ ತಿಳಿಸಿದರು.

ಚಲನೆ, ಶ್ರವಣ ಮತ್ತು ದೃಷ್ಟಿಯಲ್ಲಿ ಕ್ರಮವಾಗಿ 54.36 ಲಕ್ಷ, 50.72 ಲಕ್ಷ ಮತ್ತು 50.33 ಲಕ್ಷ ವಿಕಲಚೇತನರಿದ್ದು, ಇವು ವಿಕಲಚೇತನ ಜನರನ್ನು ಹೊಂದಿರುವ ಮೂರು ದೊಡ್ಡ ವಿಭಾಗಗಳಾಗಿವೆ ಎಂದು ಅವರು ಹೇಳಿದರು.

ಡಿಎಂಕೆಯ ರಾಣಿ ಶ್ರೀಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ರಾಜ್ಯ ಸಚಿವೆ ಪಟೇಲ್, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ (ಎಂಒಎಸ್​ಜೆಇ) ವಿಕಲಚೇತನ ವ್ಯಕ್ತಿಗಳ ಸಬಲೀಕರಣ ಇಲಾಖೆ (ಡಿಇಪಿಡಬ್ಲ್ಯೂಡಿ)ಯು ದೇಶದಲ್ಲಿನ ವಿಕಲಚೇತನರ ಜನಸಂಖ್ಯೆಯ ದತ್ತಾಂಶಕ್ಕಾಗಿ 2011 ರ ಜನಗಣತಿಯನ್ನು ಅವಲಂಬಿಸಿದೆ ಎಂದು ಹೇಳಿದರು.

ವಿಕಲಚೇತನರ ಹಕ್ಕುಗಳ ಕಾಯ್ದೆ 2016ರ ಪ್ರಕಾರ 21 ನಿರ್ದಿಷ್ಟ ಅಂಗವೈಕಲ್ಯಗಳಿವೆ. ದೇಶಾದ್ಯಂತ ವಿಕಲಚೇತನರಿಗಾಗಿ ರಾಷ್ಟ್ರೀಯ ಡೇಟಾಬೇಸ್ ರಚಿಸಲು ಡಿಇಪಿಡಬ್ಲ್ಯೂಡಿ ವಿಶಿಷ್ಟ ಅಂಗವೈಕಲ್ಯ ಐಡಿ (ಯುಡಿಐಡಿ) ಉಪ ಯೋಜನೆಯನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು.

ಸರ್ಕಾರದ ಅಂಕಿಅಂಶಗಳ ಪ್ರಕಾರ 19.98 ಲಕ್ಷ ಜನರು ವಾಕ್ ವೈಕಲ್ಯ, 15.05 ಲಕ್ಷ ಜನರು ಬುದ್ಧಿಮಾಂದ್ಯತೆ ಮತ್ತು 7.22 ಲಕ್ಷ ಜನರು ಮಾನಸಿಕ ಅಸ್ವಸ್ಥತೆ ಹೊಂದಿದ್ದಾರೆ. 21.16 ಲಕ್ಷ ಬಹು ಅಂಗವೈಕಲ್ಯ ಹೊಂದಿರುವವರಿದ್ದು, 49.27 ಲಕ್ಷ ಜನರನ್ನು ಸರ್ಕಾರವು ಅಂಗವೈಕಲ್ಯದ "ಇತರ" ವಿಭಾಗದಲ್ಲಿ ಪಟ್ಟಿ ಮಾಡಿದೆ ಎಂದು ಸಚಿವಾಲಯ ತಿಳಿಸಿದೆ.

ವಿಕಲಚೇತನರಿಗಾಗಿ ಡೇಟಾಬೇಸ್ ರಚಿಸುವ ಯೋಜನೆಯನ್ನು ವಿವರಿಸಿದ ರಾಜ್ಯ ಸಚಿವೆ ಪಟೇಲ್, "ವಿಕಲಚೇತನರ ಹಕ್ಕುಗಳ (ಆರ್ ಪಿಡಬ್ಲ್ಯುಡಿ) ಕಾಯ್ದೆ 2016 ರ ಪ್ರಕಾರ, 21 ನಿರ್ದಿಷ್ಟ ಅಂಗವೈಕಲ್ಯಗಳಿವೆ. ದೇಶಾದ್ಯಂತ ವಿಕಲಚೇತನರಿಗಾಗಿ ರಾಷ್ಟ್ರೀಯ ಡೇಟಾಬೇಸ್ ರಚಿಸುವ ಉದ್ದೇಶದಿಂದ ಡಿಇಪಿಡಬ್ಲ್ಯೂಡಿ ವಿಶಿಷ್ಟ ಅಂಗವೈಕಲ್ಯ ಐಡಿ (ಯುಡಿಐಡಿ) ಉಪ ಯೋಜನೆಯನ್ನು ಪ್ರಾರಂಭಿಸಿದೆ. ಯುಡಿಐಡಿ ಯೋಜನೆಯಡಿ ಅಂಗವೈಕಲ್ಯ ಪ್ರಮಾಣಪತ್ರಗಳು ಮತ್ತು ವಿಶಿಷ್ಟ ಅಂಗವೈಕಲ್ಯ ಗುರುತಿನ ಚೀಟಿಗಳನ್ನು ಆಯಾ ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳು ಸೂಚಿಸಿದ ಸಮರ್ಥ ವೈದ್ಯಕೀಯ ಪ್ರಾಧಿಕಾರಗಳ ಮೂಲಕ ಅಂಗವಿಕಲ ವ್ಯಕ್ತಿಗಳಿಗೆ ನೀಡಲಾಗುತ್ತದೆ" ಎಂದು ಹೇಳಿದರು.

ಇದನ್ನೂ ಓದಿ : ಮಕ್ಕಳ ಜಾತಿ ತಂದೆ ಅಥವಾ ತಾಯಿ ಯಾರ ಜಾತಿಯಿಂದ ನಿರ್ಧಾರ? ಸುಪ್ರೀಂ ಕೋರ್ಟ್​ ಮಹತ್ವದ ತೀರ್ಪು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.