ETV Bharat / bharat

ಹಳಿ ತಪ್ಪಿದ ಗೂಡ್ಸ್​​​ರೈಲು, ನಾಲ್ಕು ಬೋಗಿಗಳು ಪಲ್ಟಿ: ಆತಂಕಗೊಂಡ ಜನ - GOODS COACHES DERAILED SHAHDOL

author img

By ETV Bharat Karnataka Team

Published : Jun 28, 2024, 7:22 AM IST

ಶಾಹದೋಲ್ ರೈಲು ನಿಲ್ದಾಣದ ಯಾರ್ಡ್ ಬಳಿ ಗುರುವಾರ ಗೂಡ್ಸ್ ರೈಲಿನ ನಾಲ್ಕು ಬೋಗಿಗಳು ಪಲ್ಟಿಯಾಗಿವೆ. ಘಟನಾ ಸ್ಥಳಕ್ಕೆ ರೈಲ್ವೆಯ ಉನ್ನತ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು. ಪಲ್ಟಿಯಾದ ಗೂಡ್ಸ್ ರೈಲು ಬೋಗಿಗಳನ್ನು ಹಳಿತಪ್ಪಿದ ಬಳಿಕ ಅವುಗಳನ್ನು ಹಳಿಯಿಂದ ಹೊರ ತೆಗೆಯುವ ಕಾರ್ಯವೂ ನಡೆಯಿತು.

Good train derailed in Shahdol Madhya pradesh
ಹಳಿ ತಪ್ಪಿದ ಗೂಡ್ಸ್​​​ರೈಲು, ನಾಲ್ಕು ಬೋಗಿಗಳು ಪಲ್ಟಿ: ಆತಂಕಗೊಂಡ ಜನ (ETV Bharat)

ಶಹದೋಲ್, ಮಧ್ಯಪ್ರದೇಶ: ಕಲ್ಲಿದ್ದಲು ತುಂಬಿದ ರೈಲು, ಶಹದೋಲ್​​ ನಿಲ್ದಾಣದ ಮೂಲಕ ಹಾದು ಹೋಗುತ್ತಿದ್ದ ಗೂಡ್ಸ್ ರೈಲು ಶಹದೋಲ್ ರೈಲು ನಿಲ್ದಾಣದ ಪಕ್ಕದ ಯಾರ್ಡ್‌ನಲ್ಲಿ ಗುರುವಾರ ಹಳಿತಪ್ಪಿತ್ತು. ಈ ಘಟನೆಯಲ್ಲಿ ಗೂಡ್ಸ್ ರೈಲಿನ ನಾಲ್ಕು ಲೋಡ್ ಬೋಗಿಗಳು ಭಾರಿ ಶಬ್ದದೊಂದಿಗೆ ಹಳಿತಪ್ಪಿ ಪಲ್ಟಿಯಾಗಿವೆ. ಗೂಡ್ಸ್ ರೈಲು ಬೋಗಿಗಳು ಹಳಿತಪ್ಪಿ ನಿಲ್ದಾಣದಲ್ಲಿ ಸೈರನ್ ಮೊಳಗಿದಾಗ ಗದ್ದಲ ಉಂಟಾಯಿತು. ಇದರಿಂದ ಪ್ರಯಾಣಿಕರೂ ಭಯಗೊಂಡರು. ಮಾಹಿತಿ ಲಭಿಸಿದ ತಕ್ಷಣ ರೈಲ್ವೆ ಉನ್ನತಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ರೈಲು ಬೋಗಿಗಳನ್ನು ತೆಗೆಯುವ ಕಾರ್ಯವನ್ನು ತ್ವರಿತವಾಗಿ ನಿರ್ವಹಿಸಲಾಗಿದೆ.

ಗೂಡ್ಸ್ ರೈಲು ಎಲ್ಲಿಗೆ ಹೋಗುತ್ತಿತ್ತು?: ಈ ಗೂಡ್ಸ್ ರೈಲು ಕಲ್ಲಿದ್ದಲು ತುಂಬಿಕೊಂಡು ಛತ್ತೀಸ್‌ಗಢದ ಸೂರಜ್‌ಪುರದಿಂದ ರಾಜಸ್ಥಾನಕ್ಕೆ ಹೋಗುತ್ತಿದ್ದಾಗ ಮಧ್ಯಪ್ರದೇಶದ ಶಹದೋಲ್ ರೈಲು ನಿಲ್ದಾಣದ ಅಂಗಳದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಮುಂಜಾನೆ ಈ ಘಟನೆ ನಡೆದಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಯಾರ್ಡ್ ಲೈನ್ ನಂ.10ರಲ್ಲಿ ಗೂಡ್ಸ್ ರೈಲು ಬೋಗಿಗಳು ಹಳಿತಪ್ಪಿದ್ದವು

ಶಾಹದೋಲ್ ರೈಲು ನಿಲ್ದಾಣದಲ್ಲಿ ನಾಲ್ಕು ಕೋಚ್‌ಗಳು ಹಳಿತಪ್ಪಿವೆ ಮತ್ತು ಅವುಗಳ ಮರುಸ್ಥಾಪನೆ ಕಾರ್ಯವನ್ನು ತ್ವರಿತ ಗತಿಯಲ್ಲಿ ಮಾಡಲಾಗುತ್ತಿದೆ. ಇದು ಪ್ಯಾಸೆಂಜರ್ ರೈಲುಗಳ ಸಂಚಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಬಿಲಾಸ್‌ಪುರ ವಿಭಾಗದ ಪಿಆರ್‌ಒ ಅಂಬಿಕೇಶ್ ಸಾಹು ಹೇಳಿಕೆ ಕೊಟ್ಟಿದ್ದರು. ಎಲ್ಲ ಪ್ಯಾಸೆಂಜರ್ ರೈಲುಗಳು ತಮ್ಮ ವೇಳಾಪಟ್ಟಿಯ ಪ್ರಕಾರ ಓಡಲಿವೆ. ಪ್ರಯಾಣಿಕ ರೈಲುಗಳ ಸಂಚಾರಕ್ಕೆ ಇದರಿಂದ ಯಾವುದೇ ತೊಂದರೆ ಆಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: ನೀಟ್​​-ಯುಜಿ ಅಕ್ರಮದ ಸಿಬಿಐ ತನಿಖೆ​: ಬಿಹಾರದಲ್ಲಿ ಇಬ್ಬರು ಆರೋಪಿಗಳ ಬಂಧನ - NEET UG Exam Row

ETV Bharat Logo

Copyright © 2024 Ushodaya Enterprises Pvt. Ltd., All Rights Reserved.