ETV Bharat / bharat

ಒಳ್ಳೆಯ ಸುದ್ದಿ: 10 ಸಾವಿರ ಹೊಸ ನಾನ್​-ಎಸಿ ಬೋಗಿ ಚಾಲನೆಗೆ ರೈಲ್ವೆ ಇಲಾಖೆ ನಿರ್ಧಾರ - Indian Railways

author img

By ETV Bharat Karnataka Team

Published : Jul 5, 2024, 2:39 PM IST

ಮುಂಬರುವ ಎರಡು ವರ್ಷಗಳಲ್ಲಿ ಹೊಸದಾಗಿ 10 ಸಾವಿರ ನಾನ್-ಎಸಿ ಬೋಗಿಗಳನ್ನು ರೈಲು ಜಾಲಕ್ಕೆ ಸೇರಿಸಲಾಗುವುದು ಎಂದು ರೈಲ್ವೆ ಸಚಿವಾಲಯ ಹೇಳಿದೆ.

ರೈಲು ಬೋಗಿ
ಸಾಂದರ್ಭಿಕ ಚಿತ್ರ (IANS)

ನವದೆಹಲಿ: ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ಮತ್ತು ತನ್ನ ಜಾಲದಲ್ಲಿ ಸಾಮಾನ್ಯ ಜನರಿಗೆ ಪ್ರಯಾಣಿಕರ ಸೌಕರ್ಯವನ್ನು ಹೆಚ್ಚಿಸಲು 2024-25 ಮತ್ತು 2025-26ರಲ್ಲಿ ಹೆಚ್ಚುವರಿಯಾಗಿ 10,000 ಎಸಿ ರಹಿತ ಬೋಗಿಗಳನ್ನು ಸೇರ್ಪಡೆಗೊಳಿಸಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ (2024-25) 4,485 ಎಸಿ ರಹಿತ ಬೋಗಿಗಳನ್ನು ಮತ್ತು 2025-26ರಲ್ಲಿ ಇನ್ನೂ 5,444 ಬೋಗಿಗಳನ್ನು ಉತ್ಪಾದಿಸಲಾಗುವುದು ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಇದಲ್ಲದೆ ರೈಲ್ವೆ ತನ್ನ ಪ್ರಯಾಣಿಕರ ಸಾಗಾಟದ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲು 5,300 ಕ್ಕೂ ಹೆಚ್ಚು ಸಾಮಾನ್ಯ ಬೋಗಿಗಳನ್ನು ಕೂಡ ರೈಲುಗಳಿಗೆ ಸೇರ್ಪಡೆಗೊಳಿಸಲಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತೀಯ ರೈಲ್ವೆ 2,605 ಸಾಮಾನ್ಯ ಬೋಗಿಗಳನ್ನು ತಯಾರಿಸಲು ಸಜ್ಜಾಗಿದೆ. ಇದರಲ್ಲಿ ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ವಿಶೇಷ ಅಮೃತ್ ಭಾರತ್ ಸಾಮಾನ್ಯ ಬೋಗಿಗಳು ಸೇರಿವೆ ಎಂದು ಭಾರತೀಯ ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಇವುಗಳ ಜೊತೆಗೆ, ಅಮೃತ್ ಭಾರತ್ ಬೋಗಿಗಳು, 32 ಹೆಚ್ಚಿನ ಸಾಮರ್ಥ್ಯದ ಪಾರ್ಸೆಲ್ ವ್ಯಾನ್​ಗಳು ಮತ್ತು 55 ಪ್ಯಾಂಟ್ರಿ ಕಾರುಗಳು ಸೇರಿದಂತೆ 1,470 ಎಸಿ ಅಲ್ಲದ ಸ್ಲೀಪರ್ ಬೋಗಿಗಳು ಮತ್ತು 323 ಎಸ್ಎಲ್ಆರ್ (ಸಿಟ್ಟಿಂಗ್-ಕಮ್-ಲಗೇಜ್ ರೇಕ್) ಬೋಗಿಗಳನ್ನು ವಿವಿಧ ಪ್ರಯಾಣಿಕರ ಅಗತ್ಯತೆಗಳು ಮತ್ತು ವ್ಯವಸ್ಥಾಪನಾ ಅಗತ್ಯಗಳನ್ನು ಪೂರೈಸಲು ತಯಾರಿಸಲಾಗುವುದು.

2025-26ರ ಆರ್ಥಿಕ ವರ್ಷದಲ್ಲಿ, ಭಾರತೀಯ ರೈಲ್ವೆ 2,710 ಸಾಮಾನ್ಯ ಬೋಗಿಗಳೊಂದಿಗೆ ತನ್ನ ಪ್ರಯಾಣಿಕರ ಸಾಗಾಟದ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅಮೃತ್ ಭಾರತ್ ಜನರಲ್ ಬೋಗಿಗಳು ಸೇರಿದಂತೆ 1,910 ನಾನ್ ಎಸಿ ಸ್ಲೀಪರ್ ಬೋಗಿಗಳು ಮತ್ತು ಅಮೃತ್ ಭಾರತ್ ಸ್ಲೀಪರ್ ಕೋಚ್​ಗಳು ಸೇರಿದಂತೆ 514 ಎಸ್ಎಲ್ಆರ್ ಬೋಗಿಗಳನ್ನು ರೈಲ್ವೆ ಸಚಿವಾಲಯ ತಯಾರಿಸಲಿದೆ.

ಕೊಂಕಣ ರೈಲ್ವೆ ವಿಲೀನಕ್ಕೆ ಆಗ್ರಹ: ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (ಕೆಆರ್ ಸಿಎಲ್) ಅನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವಂತೆ ಕರಾವಳಿ ಕರ್ನಾಟಕದ ಸಂಸದರು ರೈಲ್ವೆ ಸಚಿವಾಲಯಕ್ಕೆ ಒತ್ತಾಯಿಸಿದ್ದಾರೆ. ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ನವದೆಹಲಿಯ ಅವರ ಕಚೇರಿಯಲ್ಲಿ ಭೇಟಿಯಾದ ಉಡುಪಿ-ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ವಿಲೀನ ಪ್ರಕ್ರಿಯೆಯನ್ನು ಶೀಘ್ರವಾಗಿ ಪ್ರಾರಂಭಿಸುವಂತೆ ಮನವಿ ಮಾಡಿದರು.

ಮಂಗಳೂರು-ಹಾಸನ ರೈಲ್ವೆ ಮಾರ್ಗದ ಸುಬ್ರಹ್ಮಣ್ಯ ರಸ್ತೆ-ಸಕಲೇಶಪುರ ಘಾಟ್ ವಿಭಾಗವನ್ನು ದ್ವಿಗುಣಗೊಳಿಸುವವರೆಗೆ ಅಥವಾ ಹೊಸ ಜೋಡಿ ಮಾರ್ಗವನ್ನು ನಿರ್ಮಿಸುವವರೆಗೆ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಅವರು ಸಚಿವರಿಗೆ ಒತ್ತಾಯಿಸಿದರು.

ಇದನ್ನೂ ಓದಿ: 'ಅವರೇನು ಸ್ವಾತಂತ್ರ ಹೋರಾಟಗಾರರಾ? ಅವರಿಗೇಕೆ 10 ಲಕ್ಷ ರೂಪಾಯಿ ಹರಿಹಾರ?'! - Kallakurichi Hooch Tragedy

ETV Bharat Logo

Copyright © 2024 Ushodaya Enterprises Pvt. Ltd., All Rights Reserved.