ಡೆಹ್ರಾಡೂನ್ (ಉತ್ತರಾಖಂಡ): ರುದ್ರಪುರದಲ್ಲಿ ನರ್ಸ್ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಂತರ ಹೃದಯ ವಿದ್ರಾವಕ ಘಟನೆಯೊಂದು ಡೆಹ್ರಾಡೂನ್‌ನಲ್ಲಿ ನಡೆದಿದೆ. ಬಸ್ಸಿನಲ್ಲಿ ಪಂಜಾಬ್‌ನ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರದ ಪ್ರಕರಣ ಬೆಳಕಿಗೆ ಬಂದಿದೆ. ಮಕ್ಕಳ ಕಲ್ಯಾಣ ಸಮಿತಿ ತಂಡದವರು ಬಾಲಕಿಯನ್ನು ರಕ್ಷಿಸಿದ್ದಾರೆ. ಸಮಿತಿಯು ಅಪರಿಚಿತ ಆರೋಪಿಗಳ ವಿರುದ್ಧ ಪಟೇಲ್ ನಗರದ ಐಎಸ್‌ಬಿಟಿ ಪೋಸ್ಟ್ ಪೊಲೀಸ್ ಪೋಸ್ಟ್‌ನಲ್ಲಿ ಶನಿವಾರ ಪ್ರಕರಣ ದಾಖಲಿಸಿದೆ. ಬಳಿಕ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬಾಲಕಿ ಮೇಲೆ ಅತ್ಯಾಚಾರ: ಮಾಹಿತಿಯ ಪ್ರಕಾರ, ಪಂಜಾಬ್ ಮೂಲದ ಬಾಲಕಿ ಮೊರಾದಾಬಾದ್‌ನಿಂದ ಯುಪಿ ರೋಡ್‌ವೇಸ್ ಬಸ್ ಹತ್ತಿದ್ದಳು. ಅಕೆ ಆಗಸ್ಟ್ 13 ರಂದು ಬೆಳಗಿನ ಜಾವ 2.30 ರ ಸುಮಾರಿಗೆ ISBT ಡೆಹ್ರಾಡೂನ್ ತಲುಪಿದ್ದಳು. ಬಸ್ ಖಾಲಿಯಾದ ಬಳಿಕ ಐವರು ಕಾಮುಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಬಾಲಕಿಯನ್ನು ಬಸ್‌ನಿಂದ ಹೊರಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ ಎಂದುನ ತಿಳಿದುಬಂದಿದೆ.
ಮಕ್ಕಳ ಕಲ್ಯಾಣ ಸಮಿತಿಯ ಹೆಲ್ಪ್‌ಲೈನ್ ತಂಡವು ಐಎಸ್‌ಬಿಟಿಯ ಹೊರಗೆ ನಿತ್ರಾಣ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಕಂಡು ವಿಚಾರಿಸಿದ್ದಾರೆ. ಸಮಿತಿಯು ಬಾಲಕಿಗೆ ಧೈರ್ಯ ತುಂಬಿದಾಗ ಆಕೆ ತನಗಾದ ಸಂಕಷ್ಟವನ್ನು ವಿವರಿಸಿದ್ದಾಳೆ. ಸಮಿತಿಯ ಸದಸ್ಯರು ಶನಿವಾರ ರಾತ್ರಿ ಐಎಸ್‌ಬಿಟಿ ಪೊಲೀಸ್ ಪೋಸ್ಟ್‌ಗೆ ಆಗಮಿಸಿ ಘಟನೆಯ ಬಗ್ಗೆ ಮಾಹಿತಿ ನೀಡಿದರು.
ಮನೆಯಿಂದ ಹೊರಹಾಕಿರುವ ಕುಟುಂಬಸ್ಥರು: ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯೆ ಪ್ರೀತಿ ಅವರ ಪ್ರಕಾರ, ಬಾಲಕಿ ತಾನು ಪಂಜಾಬ್ ನಿವಾಸಿ ಮತ್ತು ತನ್ನ ಪೋಷಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾಳೆ. ಆಕೆಯ ಸಹೋದರಿ ಮತ್ತು ಸೋದರ ಮಾವ ಆಕೆಯನ್ನು ಆಗಸ್ಟ್ 11 ರಂದು ಮನೆಯಿಂದ ಹೊರಹಾಕಿದ್ದಾರಂತೆ. ನಂತರ ಸಂತ್ರಸ್ತೆ ಪಂಜಾಬ್, ನಂತರ ಮೊರಾದಾಬಾದ್ ಮತ್ತು ಬಳಿಕ ಡೆಹ್ರಾಡೂನ್‌ನಿಂದ ದೆಹಲಿಗೆ ತಲುಪಿದ್ದಳು. ಇದರಿಂದ ಬಸ್ ಕೆಂಪು ಬಣ್ಣದ್ದಾಗಿತ್ತು ಎಂದು ಭಾವಿಸಲಾಗಿದೆ. ಉತ್ತರ ಪ್ರದೇಶ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಆಗಿರಬಹುದು ಎಂದು ಶಂಕಿಸಲಾಗಿದೆ ಎಂದು ಹೇಳಿದರು.
ಈ ವಿಚಾರದಲ್ಲಿ ಪೊಲೀಸರು ಹೇಳಿದ್ದೇನು: ಘಟನೆಯ ಬಗ್ಗೆ ಮಾಹಿತಿ ಪಡೆಯಲು ನಾನೇ ಐಎಸ್‌ಬಿಟಿ ಪೋಸ್ಟ್‌ಗೆ ತಲುಪಿದ್ದು, ಅಪರಿಚಿತ ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಎಸ್‌ಪಿ ಅಜಯ್ ಸಿಂಗ್ ಹೇಳಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಐಎಸ್‌ಬಿಟಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.