ETV Bharat / bharat

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ 30 ಲಕ್ಷ ಸರ್ಕಾರಿ ಖಾಲಿ ಹುದ್ದೆಗಳ ಭರ್ತಿ: 'ಯುವ ನ್ಯಾಯ' ಗ್ಯಾರಂಟಿ ಘೋಷಿಸಿದ ಖರ್ಗೆ - Congress

2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಯುವಕರಿಗಾಗಿ 'ಯುವ ನ್ಯಾಯ' ಗ್ಯಾರಂಟಿ ಜಾರಿ ಮಾಡುವುದಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

From 'Pehli Naukri Pakki 'To 'Paper Leak Se Mukti', Congress Lists 5 'Guarantees' For Youth If Voted To Power
'ಯುವ ನ್ಯಾಯ' ಗ್ಯಾರಂಟಿ ಘೋಷಿಸಿದ ಖರ್ಗೆ
author img

By ETV Bharat Karnataka Team

Published : Mar 7, 2024, 7:26 PM IST

Updated : Mar 7, 2024, 7:41 PM IST

ಬನ್ಸ್ವಾರಾ (ರಾಜಸ್ಥಾನ): ಲೋಕಸಭೆ ಚುನಾವಣಾ ಹೊಸ್ತಿಲಲ್ಲಿ ಪ್ರತಿಪಕ್ಷ ಕಾಂಗ್ರೆಸ್​ ದೇಶದ ಯುವಕರಿಗಾಗಿ 'ಯುವ ನ್ಯಾಯ' ಗ್ಯಾರಂಟಿಯನ್ನು ಗುರುವಾರ ಘೋಷಿಸಿದೆ. ಇದೊಂದು 'ನೌಕರಿ ಕ್ರಾಂತಿ' ಎಂದೇ ಕರೆದಿರುವ ಕಾಂಗ್ರೆಸ್​, 2024ರ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ನೇಮಕಾತಿ ಭರವಸೆ (Bharti Bharosa), ಮೊದಲ ನೌಕರಿ ಖಚಿತ (Pehli Naukri Pakki), ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಮುಕ್ತಿ (Paper Leak Se Mukti), ಗಿಗ್ ಆರ್ಥಿಕತೆಗೆ ಸಾಮಾಜಿಕ ಭದ್ರತೆ (Social Security for Gig Economy), ಯುವ ಬೆಳಕು (Yuva Roshni) ಎಂಬ ಐದು ಭರವಸೆಗಳನ್ನು ಜಾರಿ ಮಾಡುವುದಾಗಿ ಹೇಳಿದೆ.

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಯ ಭಾಗವಾಗಿ ಎಂದು ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯಲ್ಲಿ ಪಕ್ಷದ ಸಾರ್ವಜನಿಕ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 'ಯುವ ನ್ಯಾಯ' ಗ್ಯಾರಂಟಿ ಪ್ರಕಟಿಸಿದರು. ಕೇಂದ್ರದಲ್ಲಿ ಕಾಂಗ್ರೆಸ್​ಗೆ ಅಧಿಕಾರ ಕೊಟ್ಟರೆ, ಪಕ್ಷವು ಈ ಗ್ಯಾರಂಟಿಯ ಮೂಲಕ ಉದ್ಯೋಗವನ್ನು ಒದಗಿಸುತ್ತದೆ. ವ್ಯಾಪಾರ ಮತ್ತು ಉದ್ಯೋಗಾವಕಾಶಗಳನ್ನು ಬೆಂಬಲಿಸುತ್ತದೆ ಎಂದು ತಿಳಿಸಿದರು.

ಜೊತೆಗೆ ಐದು ಭರವಸೆಗಳ ಬಗ್ಗೆ ಸಾಮಾಜಿಕ ಜಾಲತಾಣ 'ಎಕ್ಸ್​'ನಲ್ಲಿ ಮಾಹಿತಿ ಹಂಚಿಕೊಂಡು ಅವುಗಳ ಬಗ್ಗೆ ಖರ್ಗೆ ವಿವರಿಸಿದ್ದಾರೆ. ''2024ರಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ತಕ್ಷಣ ದೇಶದ ಯುವ ಜನತೆಗೆ ಉದ್ಯೋಗ ಖಾತ್ರಿ ನೀಡುವ ಮೂಲಕ ಹೊಸ ನೌಕರಿ ಕ್ರಾಂತಿ ಆರಂಭವಾಗಲಿದೆ. ಇಂದು ಕಾಂಗ್ರೆಸ್ ಪಕ್ಷವು ಈ ದೇಶದ ಕೋಟ್ಯಂತರ ಯುವಕರಿಗೆ ದೊಡ್ಡ ಘೋಷಣೆ ಮಾಡುತ್ತಿದೆ. ಅದರ ಐದು ಮುಖ್ಯಾಂಶಗಳು ಹೀಗಿವೆ ಎಂದು ಖರ್ಗೆ ಪೋಸ್ಟ್​ ಮಾಡಿದ್ದಾರೆ.

1. ಭರ್ತಿ ಭರೋಸಾ (ನೇಮಕಾತಿ ಭರವಸೆ): ಕಾಂಗ್ರೆಸ್‌ನ ಈ ಗ್ಯಾರಂಟಿ ದೇಶದ ಯುವಕರಿಗಾಗಿ. ಮೊದಲಿಗೆ ನಾವು ಎಲ್ಲ ಯುವಕರಿಗೆ ನೇಮಕಾತಿ ವಿಶ್ವಾಸವನ್ನು ಖಾತ್ರಿಪಡಿಸುತ್ತೇವೆ. ಇದರಲ್ಲಿ ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ ಸುಮಾರು 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಜಿ ಸಲ್ಲಿಕೆಯಿಂದ ನೇಮಕಾತಿಯವರೆಗೆ ಸಮಯವನ್ನು ನಿಗದಿ ಪಡಿಸಲಾಗುತ್ತದೆ.

2. ಪೆಹ್ಲಿ ನೌಕರಿ ಪಕ್ಕಿ (ಮೊದಲ ನೌಕರಿ ಖಚಿತ): ಪದವಿ ಪಡೆದ ನಂತರವೂ ದೇಶದ ಪ್ರತಿ ಇಬ್ಬರು ಯುವಕರಲ್ಲಿ ಒಬ್ಬರು ಸರಿಯಾದ ಅಪ್ರೆಂಟಿಸ್‌ಶಿಪ್ ತರಬೇತಿಯನ್ನು ಹೊಂದಿಲ್ಲದ ಕಾರಣ ನಿರುದ್ಯೋಗಿಗಳಾಗಿದ್ದಾರೆ. ಕಾಂಗ್ರೆಸ್​ ಪಕ್ಷವು ಅಪ್ರೆಂಟಿಸ್‌ಶಿಪ್ ಹಕ್ಕು ಎಂಬ ಕಾನೂನನ್ನು ತರುವ ಮೂಲಕ ನಾವು ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿಯೊಬ್ಬ ಡಿಪ್ಲೊಮಾ ಅಥವಾ ಪದವಿ ಹೊಂದಿರುವ ಯುವಕರಿಗೆ ಅಪ್ರೆಂಟಿಸ್‌ಶಿಪ್ ತರಬೇತಿಯನ್ನು ಖಾತ್ರಿ ಪಡಿಸುತ್ತದೆ. ಎಲ್ಲ ಅಪ್ರೆಂಟಿಸ್‌ಗಳಿಗೆ ಒಂದು ವರ್ಷದಲ್ಲಿ 1 ಲಕ್ಷ ರೂ., ಅಂದರೆ ತಿಂಗಳಿಗೆ 8,500 ರೂ.ಗಳ ನೆರವು ನೀಡಲಾಗುತ್ತದೆ.

3. ಪೇಪರ್​ ಲೀಕ್​ ಸೆ ಮುಕ್ತಿ (ಪ್ರಶ್ನೆಪತ್ರಿಕೆ ಸೋರಿಕೆಯಿಂದ ಮುಕ್ತಿ): ಇಂದು ದೇಶದಲ್ಲಿ ನೇಮಕಾತಿ ಪ್ರಕ್ರಿಯೆಯೇ ನಡೆಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನೇಮಕಾತಿ ಪ್ರಕ್ರಿಯೆ ಆರಂಭಗೊಂಡರೂ ಪತ್ರಿಕೆ ಇಲ್ಲ. ಪತ್ರಿಕೆ ಇದ್ದರೂ ಆ ಪತ್ರಿಕೆ ಸೋರಿಕೆಯಾಗುತ್ತದೆ. ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಿಂದ ನಮ್ಮ ಯುವಕರು ಅಧ್ಯಯನ ಮಾಡಲು ನಗರಗಳಿಗೆ ಬರುತ್ತಾರೆ. ಅವರಿಗೆ ಸರ್ಕಾರಿ ನೌಕರಿ ಕೊಡಿಸಲು ಅವರ ಹೆತ್ತವರು ತಮ್ಮ ಇಡೀ ಜೀವಮಾನದ ಉಳಿತಾಯವನ್ನು ವ್ಯಯಿಸುತ್ತಾರೆ ಎಂಬುವುದನ್ನು ಸ್ವಲ್ಪ ಊಹಿಸಿಕೊಳ್ಳಿ. ಹೀಗಾಗಿ ಹೊಸ ಕಾನೂನು ತರುವ ಮೂಲಕ ಪೇಪರ್ ಲೀಕ್‌ಗೆ ಪೂರ್ಣವಿರಾಮ ಹಾಕುತ್ತೇವೆ ಎಂದು ಕಾಂಗ್ರೆಸ್ ಪಕ್ಷ ಭರವಸೆ ನೀಡುತ್ತದೆ.

ಎಲ್ಲ ಪರೀಕ್ಷೆಗಳು ನ್ಯಾಯಯುತ ರೀತಿಯಲ್ಲಿ ನಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಯುವಕರ, ಪೋಷಕರ ವರ್ಷಗಳ ಶ್ರಮ ವ್ಯರ್ಥವಾಗಬಾರದು. ಇದರಿಂದ ಕೋಟ್ಯಂತರ ಯುವಕರ ಭವಿಷ್ಯವು ಪ್ರತಿ ವರ್ಷ ಉತ್ತಮಗೊಳ್ಳುತ್ತದೆ. ಅವರ ಪತ್ರಿಕೆಗಳು ಸಮಯಕ್ಕೆ ಸರಿಯಾಗಿ ಬರಬೇಕು, ನೇಮಕಾತಿ ಸರಿಯಾಗಿ ನಡೆಯಬೇಕು ಮತ್ತು ಯುವಕರು ಮತ್ತು ಅವರ ಕುಟುಂಬಗಳು ಅಭಿವೃದ್ಧಿ ಹೊಂದಬೇಕು.

4. ಗಿಗ್ ಆರ್ಥಿಕತೆಗೆ ಸಾಮಾಜಿಕ ಭದ್ರತೆ: ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮತ್ತು ಭಾರತ್ ಜೋಡೋ ನ್ಯಾಯ ಯಾತ್ರೆಯ ಸಮಯದಲ್ಲಿ ಲಕ್ಷಾಂತರ ಜನರನ್ನು ಭೇಟಿಯಾಗಿದ್ದಾರೆ. ಟ್ರಕ್ ಡ್ರೈವರ್‌ಗಳು, ಮೆಕ್ಯಾನಿಕ್ಸ್, ಕಾರ್ಪೆಂಟರ್‌ಗಳು, ಡೆಲಿವರಿ ಬಾಯ್​ಗಳು, ಟ್ಯಾಕ್ಸಿ ಡ್ರೈವರ್‌ಗಳು ಸೇರಿದಂತೆ ಗಿಗ್ ಆರ್ಥಿಕತೆಯ ಎಲ್ಲ ಭಾಗಗಳ ಅನೇಕ ಜನರನ್ನು ಭೇಟಿ ಮಾಡಿದ್ದಾರೆ. ರಾಹುಲ್ ಅವರ ಸಮಸ್ಯೆಗಳನ್ನು ಆಲಿಸಿ, ದುಃಖ ಮತ್ತು ನೋವುಗಳನ್ನು ಹಂಚಿಕೊಂಡಿದ್ದಾರೆ. ಈ ಜನರು ಯಾವ ಸಮಸ್ಯೆಗಳನ್ನು ಎದುರಿಸುತ್ತಾರೆ?, ಸಂಬಳ ಎಷ್ಟು ಕಡಿಮೆ ಇದೆ ಎಂಬುವುದು ಸೇರಿ ಅವರು ಎಲ್ಲವನ್ನೂ ಆಲಿಸಿ ಅರ್ಥಮಾಡಿಕೊಂಡಿದ್ದಾರೆ.

ತಮ್ಮ ಹಳ್ಳಿಗಳಿಂದ ಮೈಲಿಗಳಷ್ಟು ದೂರದಲ್ಲಿರುವ ನಗರಗಳಲ್ಲಿ ಕೆಲಸ ಮಾಡುತ್ತಿರುವ ಅವರ ಕಷ್ಟಕರ ಪರಿಸ್ಥಿತಿಗಳನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಇದರ ನಂತರ ರಾಜಸ್ಥಾನದ ಅಂದಿನ ಕಾಂಗ್ರೆಸ್ ಸರ್ಕಾರವು ಈ ಎಲ್ಲ ಜನರ ಕಲ್ಯಾಣಕ್ಕಾಗಿ ಸಾಮಾಜಿಕ ಭದ್ರತಾ ಕಾನೂನನ್ನು ತಂದಿತ್ತು. ಈಗ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಗಿಗ್ ಆರ್ಥಿಕತೆಯಲ್ಲಿ ಸಾಮಾಜಿಕ ಭದ್ರತೆ ಮತ್ತು ಕೆಲಸದ ಪರಿಸ್ಥಿತಿಗಳಿಗಾಗಿ ನಾವು ಹೊಸ ಕಾನೂನನ್ನು ತರುತ್ತೇವೆ ಎಂದು ಕಾಂಗ್ರೆಸ್ ಪಕ್ಷವು ಖಾತ್ರಿಪಡಿಸುತ್ತದೆ. ಗಿಗ್ ಆರ್ಥಿಕತೆಯಲ್ಲಿ ಅನೌಪಚಾರಿಕವಾಗಿ ಕೆಲಸ ಮಾಡುವ ಮೂಲಕ ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಬೆಂಬಲಿಸುತ್ತಿರುವ ಇಂತಹ ಕೋಟ್ಯಂತರ ಯುವಕರು ಪ್ರಯೋಜನ ಪಡೆಯುತ್ತಾರೆ.

5. ಯುವ ರೋಷನಿ (ಯುವ ಬೆಳಕು): ಯುವ ರೋಶಿನಿಯಲ್ಲಿ 5,000 ಕೋಟಿ ರೂ. ಮೊತ್ತದೊಂದಿಗೆ ನಿಧಿ ಸ್ಥಾಪನೆ ಮಾಡಲಾಗುವುದು. ಅದನ್ನು ದೇಶದ ಎಲ್ಲ ಜಿಲ್ಲೆಗಳಲ್ಲಿ ವಿತರಿಸಲಾಗುತ್ತದೆ. 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರಿಗೆ ತಮ್ಮ ಸ್ವಂತ ವ್ಯವಹಾರ - ಸ್ಟಾರ್ಟ್ಅಪ್​ ಪ್ರಾರಂಭಿಸಲು ಈ ನಿಧಿಯನ್ನು ನೀಡಲಾಗುವುದು ಎಂದು ಕಾಂಗ್ರೆಸ್ ಪಕ್ಷವು ಖಾತ್ರಿಪಡಿಸುತ್ತದೆ. ಈ ಎಲ್ಲ ವ್ಯವಹಾರಗಳು ಯುವಜನರಿಗೆ ಲಕ್ಷಗಟ್ಟಲೆ ಉದ್ಯೋಗಗಳನ್ನು ಸೃಷ್ಟಿಸುತ್ತವೆ ಎಂದು ಖರ್ಗೆ ತಮ್ಮ ಪೋಸ್ಟ್​ನಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ: ಉದ್ಯೋಗದ ಹೆಸರಲ್ಲಿ ರಷ್ಯಾಗೆ ಕಳುಹಿಸಿ ಯುದ್ಧಕ್ಕೆ ತಳ್ಳಿದ್ರು: ಭಾರತೀಯ ಯುವಕ ಸಾವು

Last Updated : Mar 7, 2024, 7:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.