ETV Bharat / bharat

ನಾಳೆ ಜೈಪುರಕ್ಕೆ ಫ್ರಾನ್ಸ್​ ಅಧ್ಯಕ್ಷ ಮ್ಯಾಕ್ರನ್​ ಭೇಟಿ: ಮೋದಿ ಜತೆ ದ್ವಿಪಕ್ಷೀಯ ಮಾತುಕತೆ - ಗಣರಾಜ್ಯೋತ್ಸವ

ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಫ್ರಾನ್ಸ್​ ಅಧ್ಯಕ್ಷ ಎಮ್ಯಾನುಯೆಲ್​​ ಮ್ಯಾಕ್ರನ್​ ವಿಶೇಷ ಅತಿಥಿಯಾಗಿ ನಾಳೆ ಭಾರತಕ್ಕೆ ಆಗಮಿಸಲಿದ್ದಾರೆ.

french-president-macron-to-arrive-in-jaipur-will-tour-pink-city-with-pm-modi
ನಾಳೆ ಜೈಪುರಕ್ಕೆ ಫ್ರಾನ್ಸ್​ ಅಧ್ಯಕ್ಷ ಮ್ಯಾಕ್ರನ್​ ಭೇಟಿ: ಮೋದಿ ಜತೆ ದ್ವಿಪಕ್ಷೀಯ ಮಾತುಕತೆ
author img

By ETV Bharat Karnataka Team

Published : Jan 24, 2024, 5:32 PM IST

ನವದೆಹಲಿ: ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ನಾಳೆ ಭಾರತಕ್ಕೆ ಆಗಮಿಸಲಿದ್ದಾರೆ. ಭಾರತಕ್ಕೆ ಆಗಮಿಸುವ ಅವರು ಮೊದಲಿಗೆ ರಾಜಸ್ಥಾನ ರಾಜಧಾನಿ ಜೈಪುರಕ್ಕೆ ಭೇಟಿ ನೀಡುವ ಮೂಲಕ ತಮ್ಮ ಪ್ರವಾಸವನ್ನು ಅಧಿಕೃತವಾಗಿ ಪ್ರಾರಂಭಿಸಲಿದ್ದಾರೆ. ಇದೇ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ಕೂಡಾ ನಡೆಸಲಿದ್ದಾರೆ.

ಫ್ರಾನ್ಸ್​ ಅಧ್ಯಕ್ಷ ಮ್ಯಾಕ್ರನ್ ಅವರು ಅಂಬರ್ ಕೋಟೆಗೆ ಭೇಟಿ ನೀಡಲಿದ್ದು, ಅಲ್ಲಿ ಕುಶಲಕರ್ಮಿಗಳು, ಇಂಡೋ-ಫ್ರೆಂಚ್ ಸಾಂಸ್ಕೃತಿಕ ಯೋಜನೆಗಳ ಮಧ್ಯಸ್ಥಗಾರರು ಮತ್ತು ಜೈಪುರದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಆ ಬಳಿಕ ಪ್ರಧಾನಿ ಮೋದಿ ಅವರ ಜತೆಗೂಡಿ 'ಪಿಂಕ್ ಸಿಟಿ'ಯ ಕೆಲವು ಐತಿಹಾಸಿಕ ಸ್ಥಳಗಳಿಗೆ ಒಟ್ಟಿಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಮ್ಯಾಕ್ರನ್​ ಭಾರತಕ್ಕೆ ಆಗಮಿಸಿದ್ದು. ಭಾರತದ 75 ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ, ಫ್ರೆಂಚ್ ಸಶಸ್ತ್ರ ಪಡೆಗಳ ತುಕಡಿಯು ಗಣರಾಜ್ಯೋತ್ಸವ ಪರೇಡ್ ಮತ್ತು ಫ್ಲೈಪಾಸ್ಟ್‌ನಲ್ಲಿ ಭಾರತದ ಸೈನಿಕರು ಮತ್ತು ವೈಮಾನಿಕ ದಳಗಳೊಂದಿಗೆ ಭಾಗವಹಿಸಲಿದ್ದಾರೆ. ಬಳಿಕ ಅವರು ರಾಷ್ಟ್ರಪತಿ ಭವನದಲ್ಲಿ 'ಅಟ್ ಹೋಮ್' ನಲ್ಲಿ ಭಾಗಿಯಾಗಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಆಹ್ವಾನದ ಮೇರೆಗೆ ರಾಜ್ಯ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಭೇಟಿಯು ಭಾರತ- ಫ್ರಾನ್ಸ್​ಗಳ ನಡುವಣ ಸುಮಧುರ ಬಾಂಧವ್ಯದ ಪ್ರತೀಕವಾಗಿದೆ. ಫ್ರಾನ್ಸ್​ ಅಧ್ಯಕ್ಷರ ಈ ಭೇಟಿ, ದೇಶದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆರನೇ ಪಾಲ್ಗೊಳ್ಳುವಿಕೆ ಆಗಲಿದೆ. ಇದುವರೆಗೂ ಐದು ಬಾರಿ ಫ್ರಾನ್ಸ್​ ಅಧ್ಯಕ್ಷರು ಭಾರತದ ಗಣರಾಜ್ಯೋತ್ಸವದ ಪರೇಡ್​ನಲ್ಲಿ ಭಾಗಿಯಾಗಿದ್ದಾರೆ. ಮ್ಯಾಕ್ರನ್​ ಅವರ ಈ ಭೇಟಿ ಆರನೇಯದ್ದಾಗಲಿದೆ. ಇದು ಯಾವುದೇ ರಾಷ್ಟ್ರಗಳ ಭಾಗವಹಿಸುವಿಕೆಗಿಂತ ಅತ್ಯಧಿಕವಾಗಿದೆ. ಜುಲೈ 14, 2023 ರಂದು ಫ್ರಾನ್ಸ್‌ನಲ್ಲಿ ನಡೆದ ಬಾಸ್ಟಿಲ್ ದಿನದಂದು ಪ್ರಧಾನಿ ಮೋದಿ ಅವರು ಪ್ಯಾರಿಸ್​ಗೆ ಭೇಟಿ ನೀಡಿ ಪ್ರತಿಷ್ಠಿತ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಉಭಯ ದೇಶಗಳ ಪಾಲುದಾರಿಕೆ ಗಾಢ ಬಾಂಧವ್ಯದ ಇಪ್ಪತ್ತೈದು ವರ್ಷಗಳ ನಂತರ, ಫ್ರಾನ್ಸ್ ಮತ್ತು ಭಾರತ ದೇಶಗಳು ಮುಂದಿನ 25 ವರ್ಷಗಳವರೆಗೆ ಹೊಸ ಸಂಬಂಧಗಳ ಶಕೆಯನ್ನು ಆರಂಭಿಸಿವೆ. ಫ್ರಾನ್ಸ್ ಮತ್ತು ಭಾರತದ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸುವ ಗುರಿ ಹೊಂದಲಾಗಿದೆ. ಹಲವು ಕೇತ್ರಗಳ ಜತೆಗೆ ರಕ್ಷಣಾ ವಲಯದಲ್ಲಿ ನಿಕಟ ಸಹಕಾರಕ್ಕೆ ಉಭಯ ದೇಶಗಳು ಮುಂದಾಗಿವೆ.

ಉಭಯ ದೇಶಗಳು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಕೊಡುಗೆ ನೀಡುವಲ್ಲಿ ಪ್ರಮುಖ ಪಾಲುದಾರ ರಾಷ್ಟ್ರಗಳಾಗಿವೆ. ವಿಶೇಷವಾಗಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ, ಎರಡೂ ರಾಷ್ಟ್ರಗಳು ಜಂಟಿ ಕಾರ್ಯತಂತ್ರವನ್ನು ಜಾರಿಗೆ ತರುತ್ತವೆ. ಬಾಹ್ಯಾಕಾಶ, ಲಾಂಚರ್‌ಗಳು, ಬಾಹ್ಯಾಕಾಶ ಪರಿಶೋಧನೆ, ವಿಮಾನಯಾನ, ಹವಾಮಾನ ಮೇಲ್ವಿಚಾರಣಾ ಉಪಗ್ರಹಗಳು ಮತ್ತು ಕಡಲ ಕಣ್ಗಾವಲು ತಂತ್ರಜ್ಞಾನಗಳ ಪಾಲುದಾರಿಕೆಯಲ್ಲಿ ಉಭಯ ರಾಷ್ಟ್ರಗಳು 60 ವರ್ಷಗಳ ದೀರ್ಘಾವಧಿಯ ಸಹಕಾ ಹೊಂದಿವೆ ಎಂಬುದು ಗಮನಾರ್ಹ.

ಇದನ್ನು ಓದಿ: ಲೋಕಸಭೆ ಚುನಾವಣೆಯಲ್ಲಿ ಆಪ್​ - ಟಿಎಂಸಿ ಏಕಾಂಗಿ ಸ್ಪರ್ಧೆ ಇಂಡಿಯಾ ಕೂಟದ ಮರಣಶಾಸನ: ಬಿಜೆಪಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.