ಮಂಚಾರ್ಯಾಲ (ತೆಲಂಗಾಣ): ಅಭ್ಯರ್ಥಿಯೊಬ್ಬರು ಮೃತಪಟ್ಟು ನಾಲ್ಕು ವರ್ಷಗಳ ನಂತರ ಅಂತಿಮ ಹುದ್ದೆ ಪರೀಕ್ಷೆಗೆ ಹಾಜರಾಗುವಂತೆ ಕರೆ ಪತ್ರ ಬಂದಿದೆ. ಈ ಘಟನೆ ಜಿಲ್ಲೆಯ ಮಂದಮರ್ರಿಯಿಂದ ವರದಿಯಾಗಿದೆ.
ಏನಿದು ಘಟನೆ?: ಮಂಚರ್ಯಾಲದ ಮಂದಮರ್ರಿ ಪ್ರದೇಶದ ಜೀವನ್ ಕುಮಾರ್ (24) 2014ರಲ್ಲಿ ಐಟಿಐ ಪರೀಕ್ಷೆ ಪಾಸ್ ಮಾಡಿದ್ದ. 2018ರಲ್ಲಿ ತೆಲಂಗಾಣದ ಉತ್ತರ ವಿದ್ಯುತ್ ವಿತರಣಾ ಕಂಪನಿ ಲಿ (ಎನ್ಪಿಡಿಸಿಎಲ್)ನಲ್ಲಿ ಜೂನಿಯರ್ ಲೈನ್ ಮಾನ್ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು. ಈ ಹಿನ್ನಲೆ ಉದ್ಯೋಗದ ಸಿಗುವ ಭರವಸೆಯಿಂದೇ ಪರೀಕ್ಷೆಗೂ ಎದುರಾಗಿದ್ದ. ಆದರೆ, ಕೆಲವು ಅಭ್ಯರ್ಥಿಗಳು ಹೆಚ್ಚುವರಿ ಹುದ್ದೆ ಭರ್ತಿ ಮಾಡಬೇಕು ಎಂದು ಕೋರಿ ಕೋರ್ಟ್ ಮೆಟ್ಟಿಲೇರಿದ ಹಿನ್ನಲೆ ಈ ನೇಮಕಾತಿ ಪ್ರಕ್ರಿಯೆ ನೆನಗುದಿಗೆ ಬಿದ್ದಿತು.
ಆದರೆ, ಇತ್ತೀಚಿಗೆ ಎನ್ಪಿಡಿಸಿಎಲ್ ಅಧಿಕಾರಿಗಳು ಮೆರಿಟ್ ಆಧಾರದ ಮೇಲೆ ಈ ಹುದ್ದೆ ಭರ್ತಿಗೆ ಪ್ರಕ್ರಿಯೆ ಆರಂಭ ಮಾಡಿದ್ದರು. ಇದರ ಆಧಾರದ ಮೇಲೆ ಜೂನ್ 24ರಂದು ವಿದ್ಯುತ್ ಕಂಬ ಹತ್ತುವ ದೇಹದಾರ್ಢ್ಯತೆ ಪರೀಕ್ಷೆ ಇದ್ದು, ಹಾಜರಾಗುವಂತೆ ಇದೀಗ ಕಾಲ್ ಲೆಟರ್ ಬಂದಿದೆ. ಕಾಲ್ ಲೆಟರ್ನಲ್ಲಿ ಜೀವನ್ ಹಿಂದಿನ ಎಲ್ಲ ಪರೀಕ್ಷಾ ಸುತ್ತುಗಳನ್ನು ಪಾಸ್ ಮಾಡಿದ್ದು, ಅಂತಿಮ ಹಂತದ ದೇಹದಾರ್ಥ್ಯತೆ ಪರೀಕ್ಷೆಗೆ ಹಾಜರಾಗುವಂತೆ ಈ ಪತ್ರದ ಮೂಲಕ ತಿಳಿಸಲಾಗಿತ್ತು.
ದುರದೃಷ್ಟವಶಾತ್, ಇದೀಗ ಆ ಪತ್ರ ಪಡೆದು ಸಂತಸ ಪಡಲು ಜೀವನ್ ಬದುಕಿಲ್ಲ, 2018ರಲ್ಲಿ ಕರೆಯಲಾಗಿದ್ದ ಈ ಹುದ್ದೆಗಾಗಿ ಕಾದ ಜೀವನ್ ಉದ್ಯೋಗ ಪಡೆಯುವಲ್ಲಿ ವಿಫಲನಾದೆ ಎಂಬ ಕಾರಣದಿಂದ 2020ರ ಮಾರ್ಚ್ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ.
ಕುಟುಂಬದಲ್ಲಿ ಒಬ್ಬರು ಮಾತ್ರ ಉಳಿದಿದ್ದಾರೆ: ಮಂದಮರ್ರಿ ಒಂದನೇ ವಲಯದ ನಿವಾಸಿಯಾದ ಸಿದ್ದಂಕಿ ಮೊಂಡಯ್ಯ-ಸರೋಜಾ ದಂಪತಿಯ ಮಕ್ಕಳು ನವೀನ್ ಕುಮಾರ್, ಅನುಷಾ, ಆದಿತ್ಯ, ಮತ್ತು ಜೀವನ್ ಕುಮಾರ್. ಅವರ ಇಬ್ಬರು ಹೆಣ್ಣುಮಕ್ಕಳು ಮಾನಸಿಕ ಅಸ್ವಸ್ಥರು. ಜೀವನ್ ಕುಮಾರ್ (24) 2014ರಲ್ಲಿ ಐಟಿಐ ಮುಗಿಸಿದ್ದು, ಅಕ್ಕ ಆದಿತ್ಯ (2018ರಲ್ಲಿ) ಮತ್ತು ತಾಯಿ ಸರೋಜಾ (2019ರ ಜನವರಿಯಲ್ಲಿ) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಕೆಲಸ ಸಿಗದ ಹಿನ್ನೆಲೆಯಲ್ಲಿ 2020ರ ಮಾರ್ಚ್ 15ರಂದು ಜೀವನ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ ಅಕ್ಕ ಅನುಷಾ ಮತ್ತು ತಂದೆ ಮೊಂಡಯ್ಯ ನಿಧನರಾದರು. ಈಗ ಹಿರಿಯ ಮಗ ನವೀನ್ ಮಾತ್ರ ಉಳಿದಿದ್ದಾನೆ.