ETV Bharat / bharat

ಕ್ಯಾಬ್​ ಡಿಕ್ಕಿ: ಇಂಟೆಲ್​ ಇಂಡಿಯಾ ಮಾಜಿ ಮುಖ್ಯಸ್ಥ ಸೈನಿ ಸಾವು

ಪಾಮ್​ ಬೀಚ್​ ರಸ್ತೆಯಲ್ಲಿ ಸೈಕ್ಲಿಂಗ್​ ಮಾಡುತ್ತಿದ್ದ ವೇಳೆ ವೇಗವಾಗಿ ಬಂದ ಕ್ಯಾಬ್​ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಅವತಾರ್​ ಸೈನಿ ಸಾವನ್ನಪ್ಪಿದ್ದಾರೆ.

author img

By PTI

Published : Feb 29, 2024, 1:03 PM IST

Former Intel India chief Saini killed in cab collision
ಕ್ಯಾಬ್​ ಡಿಕ್ಕಿ ಹೊಡೆದು ಇಂಟೆಲ್​ ಇಂಡಿಯಾ ಮಾಜಿ ಮುಖ್ಯಸ್ಥ ಸೈನಿ ಸಾವು

ಮುಂಬೈ (ಮಹಾರಾಷ್ಟ್ರ): ಸೈಕ್ಲಿಂಗ್​ ಮಾಡುತ್ತಿದ್ದ ವೇಳೆ ವೇಗವಾಗಿ ಬಂದ ಕ್ಯಾಬ್​ ಡಿಕ್ಕಿ ಹೊಡೆದ ಪರಿಣಾಮ ಇಂಟೆಲ್​ ಇಂಡಿಯಾ ಮಾಜಿ ಮುಖ್ಯಸ್ಥ ಅವತಾರ್​ ಸೈನಿ ಅವರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ನವ ಮುಂಬೈ ಟೌನ್​ಶಿಪ್​ನಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಬುಧವಾರ ಮುಂಜಾನೆ 5.50ರ ಸುಮಾರಿಗೆ ನೆರೊಲ್​ ಪ್ರದೇಶದ ಪಾಮ್​ ಬೀಚ್​ ರಸ್ತೆಯಲ್ಲಿ ಸೈನಿ(68) ಅವರು ತಮ್ಮ ಸಹ ಸೈಕ್ಲಿಸ್ಟ್​ ಜೊತೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಕ್ಯಾಬ್​ ಹಿಂದಿನಿಂದ ಸೈನಿ ಅವರ ಬೈಸಿಕಲ್​ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ನಂತರ ಚಾಲಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದನು. ಬೈಸಿಕಲ್​ ಕ್ಯಾಬ್​ನ ಮುಂಭಾಗದ ಚಕ್ರಗಳ ಕೆಳಗೆ ಸಿಕ್ಕಿಹಾಕಿಕೊಂಡಿತ್ತು. ತೀವ್ರವಾಗಿ ಗಾಯಗೊಂಡಿದ್ದ ಸೈನಿ ಅವರನ್ನು ಸಹ ಸೈಕ್ಲಿಸ್ಟ್​ಗಳು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರು. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಕಯಾಬ್​ ಚಾಲಕನ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಎಫ್​ಐಆರ್​ ದಾಖಲಿಸಿದ್ದಾರೆ. 279 (ಅತೀ ವೇಗದ ಚಾಲನೆ), 337(ಮಾನವ ಜೀವಕ್ಕೆ ಹಾನಿಯಾಗುವಂತೆ ದುಡುಕಿನ ಚಾಲನೆ), 304 (ಸಾವಿಗೆ ಕಾರಣ) ಹಾಗೂ ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ ಎಫ್​ಐಆರ್​ ದಾಖಲಾಗಿದೆ. ಆರೋಪಿಯನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ಎನ್​ಆರ್​ಐ ಪೊಲೀಸ್​ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದರು.

ಸೈನಿ ಅವರು ಚೆಂಬೂರಿನ ನಿವಾಸಿಯಾಗಿದ್ದು, ಇಂಟೆಲ್ 386 ಹಾಗೂ 486 ಮೈಕ್ರೋಪ್ರೊಸೆಸರ್​ಗಳಲ್ಲಿ ಕೆಲಸ ಮಾಡಿದ ಕೀರ್ತಿಗೆ ಪಾತ್ರರಾಗಿದ್ದರು. ಕಂಪನಿಯ ಪೆಂಟಿಯಮ್​ ಪ್ರೊಸೆಸರ್​ ವಿನ್ಯಾಸದ ಮುಂದಾಳತ್ವವನ್ನು ಸಹ ಅವರು ವಹಿಸಿದ್ದರು.

ಇದನ್ನೂ ಓದಿ: ರಾಜೀವ್ ಗಾಂಧಿ ಹತ್ಯೆ ಪ್ರಕರಣ: 30 ವರ್ಷ ಜೈಲುವಾಸ ಅನುಭವಿಸಿದ ಸಂತನ್ ನಿಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.