ETV Bharat / bharat

ಲೋಕಸಭೆ ಚುನಾವಣೆ: ಕರ್ನಾಟಕದಲ್ಲಿ 'ಡೆಪಾಸಿಟ್‌' ಕಳೆದುಕೊಂಡವರೆಷ್ಟು ಗೊತ್ತಾ? - Election Deposit

author img

By ETV Bharat Karnataka Team

Published : Jun 5, 2024, 4:25 PM IST

Updated : Jun 5, 2024, 5:36 PM IST

ರಾಜ್ಯದ 28 ಕ್ಷೇತ್ರಗಳ ಲೋಕಸಭೆ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಹಾಗೂ ಕಾಂಗ್ರೆಸ್​ ಪಕ್ಷದ ಪ್ರಬಲ ಹಣಾಹಣಿಯಲ್ಲಿ ಬಹುತೇಕ ಅಭ್ಯರ್ಥಿಗಳು ತಮ್ಮ ತಮ್ಮ ಠೇವಣಿ ಕಳೆದುಕೊಂಡಿದ್ದಾರೆ.

Representative image
ಸಾಂದರ್ಭಿಕ ಚಿತ್ರ (ETV Bharat)

ಬೆಂಗಳೂರು: ರಾಜ್ಯದ 28 ಕ್ಷೇತ್ರಗಳ ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಅಭ್ಯರ್ಥಿಗಳು ತಮ್ಮ ಠೇವಣಿ ಕಳೆದುಕೊಂಡಿದ್ದಾರೆ. ಇದರಲ್ಲಿ ಬಹುಪಾಲು ಪಕ್ಷೇತರ ಅಭ್ಯರ್ಥಿಗಳೇ ಅನ್ನೋದು ವಿಶೇಷ.

ಮಂಗಳವಾರ ಪ್ರಕಟವಾದ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ 17, ಕಾಂಗ್ರೆಸ್​ 9 ಹಾಗೂ ಜೆಡಿಎಸ್ 2 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಸಾಕಷ್ಟು ಕುತೂಹಲ ಮೂಡಿಸಿದ್ದ ಈ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ವಿವಿಧ ಪಕ್ಷಗಳಲ್ಲಿ ಟಿಕೆಟ್​ ಸಿಗದೆ ಬಂಡಾಯವೆದ್ದ ಅಭ್ಯರ್ಥಿಗಳು ಹಾಗೂ ಹಲವು ಸಣ್ಣಪುಟ್ಟ ಪಕ್ಷಗಳ ಅನೇಕರು ಕಣಕ್ಕಿಳಿದಿದ್ದರು. ಆದರೆ, ಎಲ್ಲ ಕ್ಷೇತ್ರಗಳಲ್ಲಿ ಪ್ರಬಲ ಪರಾಜಿತ ಅಭ್ಯರ್ಥಿಗಳೂ ಸೇರಿ ಕೇವಲ 56 ಮಂದಿ ಮಾತ್ರ ತಮ್ಮ ಠೇವಣಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

418 ಅಭ್ಯರ್ಥಿಗಳಿಗೆ ಸಿಗದ ಠೇವಣಿ: ರಾಜ್ಯಾದ್ಯಂತ ಚುನಾವಣಾ ಅಖಾಡದಲ್ಲಿದ್ದ ಒಟ್ಟಾರೆ ಅಭ್ಯರ್ಥಿಗಳ ಪೈಕಿ 418 ಅಭ್ಯರ್ಥಿಗಳಿಗೆ ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದರಲ್ಲಿ 235 ಮಂದಿ ಸ್ವತಂತ್ರ ಅಭ್ಯರ್ಥಿಗಳಿದ್ದರೆ, ಇತರರು 138 ಸೇರಿದ್ದಾರೆ. ಈ ಮೂಲಕ ಶೇ.11.81ರಷ್ಟು ಅಭ್ಯರ್ಥಿಗಳು ಠೇವಣಿ ಪಡೆದಿದ್ದರೆ, ಶೇ.88.19ರಷ್ಟು ಅಭ್ಯರ್ಥಿಗಳ 'ಡೆಪಾಸಿಟ್ ಜಪ್ತಿ' ಆಗಿದೆ.

ಠೇವಣಿ ಕಳೆದುಕೊಳ್ಳುವುದು ಎಂದರೇನು?: ಜನಪ್ರತಿನಿಧಿ ಕಾಯ್ದೆ-1951ರ ಪ್ರಕಾರ, ಯಾವುದೇ ವ್ಯಕ್ತಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕಾದರೆ, ಚುನಾವಣಾ ಆಯೋಗದ ಬಳಿ ಹಣ ಠೇವಣಿ ಇಡಬೇಕು. ಸಾಮಾನ್ಯ ಅಭ್ಯರ್ಥಿಗಳಾದರೆ 25,000 ರೂ. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಾದರೆ 12,500 ರೂ.ಗಳ ನಗದು ಹಾಗೂ ಭಾರತೀಯ ರಿಸರ್ವ್​ ಬ್ಯಾಂಕ್​/ ಸರ್ಕಾರದ ಯಾವುದೇ ಖಜಾನೆ ಮೂಲಕ ಪಡೆದ ರಶೀದಿ ರೂಪದಲ್ಲೂ ನೀಡಬಹುದು.

ಠೇವಣಿ ಹಣ ಮರಳಿ ಸಿಗಬೇಕಾದರೆ ಚುನಾವಣೆಯಲ್ಲಿ ಚಲಾವಣೆಯಾದ ಅರ್ಹ ಮತಗಳಲ್ಲಿ 1/6ರಷ್ಟು ಮತಗಳನ್ನು ಪಡೆಯಬೇಕು. ಇಲ್ಲವಾದಲ್ಲಿ, ಅಂತಹ ಅಭ್ಯರ್ಥಿಯ ಠೇವಣಿ ಜಪ್ತಿ ಆಗುತ್ತದೆ. ಆ ಹಣ ಮರಳಿ ಸಿಗುವುದಿಲ್ಲ. ಚುನಾವಣೆಯ ಪ್ರಕ್ರಿಯೆಯಲ್ಲಿ ಅಭ್ಯರ್ಥಿಯ ಗಂಭೀರತೆಯನ್ನು ಅರಿತುಕೊಳ್ಳುವ ಸಲುವಾಗಿಯೇ ಠೇವಣಿಯನ್ನು ಕಡ್ಡಾಯಗೊಳಿಸಲಾಗಿದೆ.

ಠೇವಣಿ ವಾಪಸ್​ ಯಾವಾಗ?: ಅಭ್ಯರ್ಥಿಗೆ ತನ್ನ ಠೇವಣಿ ಹಣ ಸಿಗುವ ಅವಕಾಶವನ್ನೂ ಕಲ್ಪಿಸಲಾಗಿದೆ. ಆದರೆ, ಅದಕ್ಕೂ ನಿರ್ದಿಷ್ಟ ಮಾನದಂಡಗಳಿವೆ. ಸ್ಪರ್ಧಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಸರು ಮರೆಯಾದಾಗ, ಚುನಾವಣಾ ಆಯೋಗದಿಂದ ನಾಮಪತ್ರ ತಿರಸ್ಕೃತಗೊಂಡಾಗ ಅಥವಾ ನಾಮಪತ್ರ ವಾಪಸ್​ ಪಡೆದಾಗ ಠೇವಣಿ ಹಣ ಮರಳಿಸಲಾಗುತ್ತದೆ. ಇದಲ್ಲದೇ, ಯಾವುದೇ ಅಭ್ಯರ್ಥಿಯು ಮತದಾನಕ್ಕಿಂತ ಮೊದಲ ಮೃತಪಟ್ಟಾಗ, ಚುನಾವಣೆಯಲ್ಲಿ ಗೆದ್ದಾಗ, ಚಲಾವಣೆಯಾದ ಅರ್ಹ ಮತಗಳಲ್ಲಿ 1/6ರಷ್ಟು ಮತಗಳ ಪಡೆದಾಗ ಮಾತ್ರ ಠೇವಣಿ ಹಣ ಮರಳಿ ಸಿಗುತ್ತದೆ.

ಇದನ್ನೂ ಓದಿ: ಕರ್ನಾಟಕದಿಂದ 20 ಮಂದಿ ಹೊಸ ಸಂಸದರು ಆಯ್ಕೆ! ಮೊದಲ ಬಾರಿಗೆ ಸಂಸತ್ ಪ್ರವೇಶಿಸುವವರು ಇವರೇ

Last Updated : Jun 5, 2024, 5:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.