ETV Bharat / bharat

ನಿಯಂತ್ರಣ ರೇಖೆಯ ಉದ್ದಕ್ಕೂ ಕಾಳ್ಗಿಚ್ಚು.. ನೆಲಬಾಂಬ್​ ಸ್ಫೋಟ

author img

By ETV Bharat Karnataka Team

Published : Jan 27, 2024, 7:49 PM IST

ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಇರುವ ಅರಣ್ಯದಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ಈ ನಡುವೆ ಭೂಗತ ಗಣಿಗಳಲ್ಲಿ ಸ್ಫೋಟಗಳು ಕೂಡಾ ಕಂಡು ಬಂದಿವೆ. ಇದು ಇಲ್ಲಿನ ಸ್ಥಳೀಯರನ್ನು ಕಂಗೆಡಿಸಿದೆ.

ನಿಯಂತ್ರಣ ರೇಖೆಯ ಉದ್ದಕ್ಕೂ ಕಾಳ್ಗಿಚ್ಚು... ನೆಲಬಾಂಬ್​ ಸ್ಫೋಟ

ಶ್ರೀನಗರ(ಜಮ್ಮು ಕಾಶ್ಮೀರ): ಪೂಂಚ್‌ನ ಕೃಷ್ಣ ಘಾಟಿ ವಲಯದ ನಿಯಂತ್ರಣ ರೇಖೆಯ ಉದ್ದಕ್ಕೂ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ಇದು ಈ ಪ್ರದೇಶದ ವಿಶಾಲವಾದ ಪರ್ವತ ಪ್ರದೇಶವನ್ನು ಆವರಿಸಿಕೊಂಡಿದೆ ಎಂದು ಸ್ಥಳೀಯ ಮೂಲಗಳು ವರದಿ ಮಾಡಿವೆ. ಈ ಕಾಳ್ಗಿಚ್ಚಿನಲ್ಲಿ ಅಪಾರ ಪ್ರಮಾಣದ ಹಸಿರು ವಲಯ ನಾಶವಾಗಿದೆ. ಇಷ್ಟೇ ಅಲ್ಲದೆ ಭೂಗತ ಗಣಿಗಳ ಸ್ಫೋಟದಿಂದ ಜನರು ಭಯಭೀತರಾಗಿದ್ದಾರೆ.

ಕಳೆದ ಹಲವು ದಿನಗಳಿಂದ ಜಮ್ಮು ಕಾಶ್ಮೀರದ ಪೊಲೀಸ್​ ಪಡೆಗಳು, ಸೇನೆ ಹಾಗೂ ಅಗ್ನಿಶಾಮಕ ಮತ್ತು ತುರ್ತು ವಿಭಾಗದ ತಂಡಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ ಎಂದು ತಿಳಿದು ಬಂದಿದೆ. ಅಗ್ನಿ ಕೆನ್ನಾಲಿಗೆಗೆ ತುತ್ತಾಗಿರುವ ಅರಣ್ಯದೊಳಗೆ, ಅತ್ತ ಕಡೆಯಿಂದ ಒಳನುಸುಳುವ ಯತ್ನಗಳನ್ನು ಸಹ ಮಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಒಳ ನುಸುಳುವ ಯತ್ನದ ಮೇಲೂ ತೀವ್ರ ನಿಗಾ ಇಡಲಾಗಿದೆ.

ಕಾಶ್ಮೀರ ಕಣಿವೆಯಲ್ಲಿ ದೀರ್ಘವಾದ ಒಣಹವೆಯ ಕಾರಣದಿಂದ ಪ್ರತಿನಿತ್ಯ ಕಾಳ್ಗಿಚ್ಚುಗಳು ಕಾಣಿಸಿಕೊಳ್ಳುತ್ತಿವೆ ಎನ್ನಲಾಗಿದೆ. ಜನರು ಬಿಡಾರ ಹೂಡುವಾಗ ಬೆಂಕಿ ಹಚ್ಚಿ, ಅದನ್ನು ಸಂಪೂರ್ಣವಾಗಿ ನಂದಿಸದೇ ಇರುವುದು ಅಥವಾ ಸಿಗರೇಟ್ ಇತ್ಯಾದಿಗಳನ್ನು ಅರಣ್ಯ ಪ್ರದೇಶಗಳಿಗೆ ಎಸೆಯುವುದರಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ವನ್ಯಜೀವಿ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಓದಿ: ಬೆಂಗಳೂರು: ಎರಡಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ, 30 ಲಕ್ಷ ಮೌಲ್ಯದ ವಸ್ತುಗಳು ಸುಟ್ಟು ಕರಕಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.