ಮುಂಬೈ(ಮಹಾರಾಷ್ಟ್ರ): ಇಲ್ಲಿನ ವಿಕ್ರೋಲಿ ಪೂರ್ವ ಪ್ರದೇಶದ ಡಾ.ಅಂಬೇಡ್ಕರ್ ಆಸ್ಪತ್ರೆಯಲ್ಲಿ ಇಂದು ನಸುಕಿನ ಜಾವ ಭಾರಿ ಅಗ್ನಿ ಅವಘಡ ಸಂಭವಿಸಿತು. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.
"ಭಾನುವಾರ ರಾತ್ರಿ 1.47ಕ್ಕೆ ನಮಗೆ ಕರೆ ಬಂತು. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳನ್ನು ಕಳುಹಿಸಲಾಯಿತು. 40ಕ್ಕೂ ನಿಮಿಷಕ್ಕೂ ಹೆಚ್ಚು ಕಾಲ ಶ್ರಮಿಸಿ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದರು" ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಆರು ರೋಗಿಗಳನ್ನು ರಕ್ಷಿಸಿ ಘಾಟ್‌ಕೋಪರ್‌ನಲ್ಲಿರುವ ರಾಜವಾಡಿ ಆಸ್ಪತ್ರೆಗೆ ರವಾನಿಸಲಾಗಿದೆ.
ಮೂರು ಮಹಡಿಗಳಲ್ಲಿ ಬೆಂಕಿ: ನೆಲಮಹಡಿ ಮತ್ತು ಮೇಲಿನ ಮೂರು ಮಹಡಿಗಳ ಐಸಿಯುನಲ್ಲಿನ ಏರ್ ಸೆಕ್ಷನ್ ಮೋಟಾರ್‌ನ ಮುಖ್ಯ ಕೇಬಲ್‌ಗೆ ಬೆಂಕಿ ವ್ಯಾಪಿಸಿತ್ತು. ಅನಾಹುತಕ್ಕೆ ಕಾರಣ ತಿಳಿದುಬಂದಿಲ್ಲ. ಸದ್ಯ ತನಿಖೆ ನಡೆಯುತ್ತಿದೆ. ಹೆಚ್ಚಿನ ಮಾಹಿತಿಗೆ ಕಾಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
22 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ(ಪ್ರತ್ಯೇಕ ಘಟನೆ): ಶನಿವಾರ ಮಧ್ಯಾಹ್ನ ಮಲಾಡ್ ಪ್ರದೇಶದಲ್ಲಿ 22 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ಹತೋಟಿಗೆ ತಂದಿದ್ದರು. ಇದರಿಂದಾಗಿ ಯಾವುದೇ ಸಾವು ನೋವು ಸಂಭವಿಸಿರಲಿಲ್ಲ.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ: 7 ಗಂಟೆಗೂ ಹೆಚ್ಚು ಕಾಲ ಇಡಿ ವಿಚಾರಣೆ ಎದುರಿಸಿದ ಜಾರ್ಖಂಡ್ ಸಿಎಂ