ETV Bharat / bharat

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದೆ ವಿಮಾನಯಾನ ಮಾರುಕಟ್ಟೆ; ಬೋಯಿಂಗ್​​

ದಕ್ಷಿಣ ಏಷ್ಯಾಕ್ಕೆ 2042ರ ವೇಳೆಗೆ 2,705 ಏರ್​​ಕ್ರಾಫ್ಟ್​​ಗಳು ಬೇಕಾಗಿದೆ. ಭಾರತದಲ್ಲಿ 2,500 ಹೊಸ ಏರ್​ಕ್ರಾಫ್ಟ್​​ಗಳು ಬೇಕಾಗಬಹುದು ಎಂದು ಬೋಯಿಂಗ್​ ಕಂಪನಿ ಹೇಳಿದೆ.

fastest-growing-aviation-market-in-india

author img

By ETV Bharat Karnataka Team

Published : Jan 20, 2024, 6:05 PM IST

Updated : Jan 20, 2024, 7:51 PM IST

ಹೈದರಾಬಾದ್​: ಮುಂದಿನ 20 ವರ್ಷದಲ್ಲಿ ದಕ್ಷಿಣ ಏಷ್ಯಾದಲ್ಲಿ ಅತ್ಯಂತ ವೇಗವಾಗಿ ಬೆಳೆಯುವ ಮಾರುಕಟ್ಟೆಯಾಗಿದ್ದು, ಶೇ 8ರಷ್ಟು ವಾಯು ಪ್ರಯಾಣಿಕರ ಸಂಖ್ಯೆ ಹೆಚ್ಚಲಿದೆ ಎಂದು ಬೋಯಿಂಗ್​ ಅಂದಾಜಿಸಿದೆ. ಇದರಲ್ಲಿ ಭಾರತವೂ ಪ್ರಮುಖವಾಗಿದೆ ಎಂದು ಬೋಯಿಂಗ್​ನ ಕಮರ್ಷಿಯಲ್​ ಮಾರ್ಕೆಟ್​​ ಉಪಾಧ್ಯಕ್ಷ ದರ್ರೆನ್​ ಹುಲ್ಟ್ಸ್​​ ತಿಳಿಸಿದ್ದಾರೆ. ಈ ಸಂಬಂದ ಮಾತನಾಡಿರುವ ಅವರು, ದೇಶೀಯ ಆರ್ಥಿಕತೆ ಬಲವಾಗಿ ಬೆಳವಣಿಗೆಯಾಗುತ್ತಿದೆ. ಮಧ್ಯಮ ವರ್ಗ ಆದಾಯ ಗುಂಪುಗಳು ವೇಳವಾಗಿ ವಿಸ್ತರಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ವಾಯುಯಾನ ಕೂಡ ಬೆಳವಣಿಗೆ ಕಾಣಿತ್ತಿದೆ ಎಂದರು.

ವಿಂಗ್ಸ್​​ ಇಂಡಿಯಾ 2024ದಲ್ಲಿ ಮಾತನಾಡಿದ ಅವರು, ದಕ್ಷಿಣ ಏಷ್ಯಾಕ್ಕೆ 2042ರ ವೇಳೆಗೆ 2,705 ಏರ್​​ಕ್ರಾಫ್ಟ್​​ಗಳು ಬೇಕಾಗಿದೆ. ಭಾರತದಲ್ಲಿ 2,500 ಹೊಸ ಏರ್​ಕ್ರಾಫ್ಟ್​​ಗಳು ಬೇಕಿದೆ. ಇವುಗಳಲ್ಲಿ ಶೇ 86ರಷ್ಟು ವಿಮಾನಗಳು ಸಣ್ಣ ಅಗಲವನ್ನು ಹೊಂದಿದೆ. ಶೇ 28ರಷ್ಟು ಹಳೆಯ ವಿಮಾನಗಳನ್ನು ಅಭಿವೃದ್ಧಿ ತಂತ್ರಜ್ಞಾನದ ವಿಮಾನಗಳೊಂದಿಗೆ ಬದಲಾಯಿಸಬೇಕಿದೆ. ಭಾರತದ ಜನಸಂಖ್ಯೆಯು ವಿಮಾನಯಾನದ ಬೆಳವಣಿಗೆಗೆ ಪೂರಕವಾಗಿದೆ ಎಂದರು

2019ಕ್ಕೂ ಮೊದಲು ಅಂದರೆ ಕೋವಿಡ್​ ಪೂರ್ವಕ್ಕೆ ಹೋಲಿಕೆ ಮಾಡಿದಾಗ 2023ರಲ್ಲಿ ಮಾಸಿಕ ದೇಶಿಯ ಪ್ರಯಾಣಿಕರಲ್ಲಿ ಶೇ 7ರಷ್ಟು ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಶೇ 30ರಷ್ಟು ಹೆಚ್ಚಾಗಿದೆ. ಇದು ಮತ್ತೆ ಮುಂಚೂಣಿಗೆ ಬಂದಿದೆ. 2019ಕ್ಕೆ ಹೋಲಿಸಿದಾಗ 2024ರ ಏಪ್ರಿಲ್​ ಹೊತ್ತಿಗೆ ದೂರ ಪ್ರಯಾಣದ ಜನರ ಸಂಖ್ಯೆ ಶೇ 50ರಷ್ಟು ಹೆಚ್ಚಿಸಲಿದೆ. ಭಾರತದ ವಿಮಾನಗಳು ಕಡಿಮೆ ಟಿಕೆಟ್​​ ದರ, ಆಫರ್​ ಸೇವೆ ಬೇಡಿಕೆಯನ್ನು ಹೆಚ್ಚಿಸಿದೆ. ಕೋವಿಡ್​ಗೂ ಮೊದಲು ಹೋಲಿಕೆ ಮಾಡಿದಾಗ ಶೇ 90ರಷ್ಟು ಸೀಟ್​​ಗಳು ಭರ್ತಿಯಾಗುತ್ತಿದೆ.

ಜಾಗತಿಕ ಮಾರುಕಟ್ಟೆ: ಜಾಗತಿಕವಾಗಿ ಮುಂದಿನ 20 ವರ್ಷದಲ್ಲಿ 42,592 ಹೊಸ ವಿಮಾನಗಳು ಬೇಕಾಗಿದೆ. ದಕ್ಷಿಣ ಏಷ್ಯಾದಲ್ಲಿ 37 ಸಾವಿರ ಪೈಲಟ್​​, 38,000 ತಾಂತ್ರಿಕರು ಬೇಕಾಗಿದ್ದಾರೆ. ಭಾರತದಲ್ಲಿ 15 ಕಾರ್ಗೋಗಳು ಇದ್ದು, ಇದು ಮುಂದಿನ 20 ವರ್ಷದಲ್ಲಿ ಇದು 80ಕ್ಕೆ ತಲುಪಲಿದೆ. ಕೋವಿಡ್​ನಿಂದಾಗಿ ಕಳೆದ ಎರಡು ಮೂರು ವರ್ಷದಲ್ಲಿ 2 ಸಾವಿರ ವಿಮಾನಗಳು ತಡವಾಗಿ ಸೇವೆ ನೀಡುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ.

ಟಿಎಸಿಎಲ್​ ಜೊತೆಗೆ ಒಪ್ಪಂದ: ಬೋಯಿಂಗ್​ ಟಾಟಾ ಅಡ್ವಾನ್ಸ್ಡ್​​​ ಸಿಸ್ಟಂ ಲಿಮಿಟೆಡ್​ (ಟಿಎಸಿಎಲ್​) ಒಪ್ಪಂದಕ್ಕೆ ಸಹಿ ಹಾಕಿದ್ದು, ವಾಣಿಜ್ಯ ವಿಮಾನಗಳಿಗೆ ಸುಧಾರಿತ ಘಟಕಗಳನ್ನು ಪೂರೈಸುತ್ತದೆ. ಬೋಯಿಂಗ್ ಇವುಗಳನ್ನು 737 ಮ್ಯಾಕ್ಸ್, 777 ಎಕ್ಸ್​​ ಮತ್ತು 787 ಡ್ರೀಮ್ಲೈನರ್ ವಿಮಾನಗಳನ್ನು ಪೂರೈಸುತ್ತದೆ. ಟಿಎಸಿಎಲ್​ ಬೆಂಗಳೂರು ಮತ್ತು ನಾಗ್ಪುರ್​​ ಕೇಂದ್ರದಲ್ಲಿ ಉತ್ಪಾದನೆ ಮಾಡುತ್ತಿದೆ.

ಈ ಬಗ್ಗೆ ಮಾತನಾಡಿರುವ ಟಿಎಸಿಎಲ್​ ಹಿರಿಯ ಉಪ ನಿರ್ದೇಶಕಿ, ಈ ಒಪ್ಪಂದವು ಏರೋಸ್ಪೇಸ್ ಉತ್ಪಾದನಾ ವಲಯದಲ್ಲಿ ಭಾರತದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಬೋಯಿಂಗ್ ಇಂಡಿಯಾ ಅಧ್ಯಕ್ಷ ಸಲೀಲ್ ಗುಪ್ತೆ ಮಾತನಾಡಿದ ಅವರು, ಗುಣಮಟ್ಟದ ಸಂಕೀರ್ಣ ಘಟಕಗಳನ್ನು ಖರೀದಿಸಲು ಭಾರತೀಯ ಕಂಪನಿಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

ಜೆಟ್​ಸೆಟ್​ಗೊ 280 ಹೈಬ್ರಿಡ್​ ಎಲೆಕ್ಟ್ರಿಕ್​ ವಿಮಾನ: ಖಾಸಗಿ ಚಾರ್ಟರ್ಡ್ ವಿಮಾನ ನಿರ್ವಹಣಾ ಸಂಸ್ಥೆಯಾಗಿರುವ ಜೆಟ್​ಸೆಟ್​ಗೊ, 280 ಹೊಸ ಹೈಬ್ರಿಡ್​​ ಎಲೆಕ್ಟ್ರಿಕ್​ ಏರ್​ಕ್ರಾಫ್ಟ್​​. ಈ ವಿಮಾನಗಳಿಗೆ ಎಲೆಕ್ಟ್ರಾ ಏರೋ, ಹೊರೈಜನ್ ಏರ್‌ಕ್ರಾಫ್ಟ್ ಮತ್ತು ಓವರ್ ಏರ್ 3 ಕಂಪನಿಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿವೆ. ಈ ಆರ್ಡರ್​​ಗಳ 1.3 ಬಿಲಿಯನ್​ ಡಾಲರ್​​ ಮೌಲ್ಯವನ್ನು ಹೊಂದಿದೆ. ವಿಮಾನ ನಿಲ್ದಾಣ ಸಾರಿಗೆ, ಪ್ರಾದೇಶಿಕ ವಿಮಾನಗಳು, ನಗರ ಪ್ರಯಾಣ ಮತ್ತು ಏರ್ ಟ್ಯಾಕ್ಸಿ ಸೇವೆಗಳಿಗೆ ಈ ವಿಮಾನಗಳನ್ನು ಬಳಸಲಾಗುತ್ತದೆ.

ಜೆಟ್​ಸೆಟ್​ಗೋ ಸಿಇಒ ಕನಿಕ ತೆಕ್ರಿವಲ್​ ಮಾತನಾಡಿ, ಅಡ್ವಾನ್ಸ್ಡ್ ಏರ್ ಮೊಬಿಲಿಟಿ ದೇಶಾದ್ಯಂತ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನಲೆ ಹೊಸ ಮಾದರಿಯ ವಿಮಾನವನ್ನು ಖರೀದಿಸಲು ನಿರ್ಧರಿಸಲಾಗಿದೆ. ಬ್ಲೋನ್ ಲಿಫ್ಟ್, ಫ್ಯಾನ್ ಇನ್ ವಿಂಗ್ ಲಿಫ್ಟ್ ಸಿಸ್ಟಂಗಳು, ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಪ್ರೊಪಲ್ಷನ್, ಸೂಪರ್ ಕ್ವೈಟ್ ಆಪ್ಟಿಮಲ್ ಸ್ಪೀಡ್ ಟಿಲ್ಟೆಡ್ ರೋಟರ್‌ಗಳು ಇತ್ಯಾದಿ ಅತ್ಯಾಧುನಿಕ ತಂತ್ರಜ್ಞಾನಗಳು ಈ ವಿಮಾನಗಳಲ್ಲಿ ಲಭ್ಯವಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಹೈದರಾಬಾದ್ 'ವಿಂಗ್ಸ್​ ಇಂಡಿಯಾ': ಹೆಚ್‌ಎಎಲ್‌ನಿಂದ ಸ್ವದೇಶಿ ಏರ್‌ಕ್ರಾಫ್ಟ್‌ಗಳ ಪ್ರದರ್ಶನ

Last Updated : Jan 20, 2024, 7:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.