ETV Bharat / bharat

ಎಎಪಿಗೆ ಬಿಗ್​ ಶಾಕ್​: ಕಾಂಗ್ರೆಸ್​ ಸೇರಿದ ಆಮ್​ ಆದ್ಮಿ ಪಕ್ಷದ ನಾಯಕ ರಾಜೇಂದ್ರ ಪಾಲ್​ ಗೌತಮ್​ - Rajendra Pal Gautam Joins Congress

author img

By ETV Bharat Karnataka Team

Published : Sep 6, 2024, 7:41 PM IST

ಎಎಪಿಯಲ್ಲಿದ್ದು ಹೊರ ಹೋಗುತ್ತಿರುವ ಪ್ರಮುಖ ನಾಯಕರಲ್ಲಿ ಗೌತಮ್​ ಮೂರನೇಯವರಾಗಿದ್ದಾರೆ. ಈ ಮೊದಲು ಶಾಸಕ ಕರ್ತರ್​ ಸಿಂಗ್​ ತನ್ವರ್​ ಮತ್ತು ಮಾಜಿ ಸಚಿವ ರಾಜ್​ ಕುಮಾರ್​ ಆನಂದ್​ ಪಕ್ಷ ತೊರೆದಿದ್ದಾರೆ.

ex Minister Rajendra Pal Gautam  Joins Congress
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)

ನವದೆಹಲಿ: ಗಮನಾರ್ಹ ರಾಜಕೀಯ ಬೆಳವಣಿಗೆಯಲ್ಲಿ ಆಮ್​ ಆದ್ಮಿ ಪಕ್ಷ (ಎಎಪಿ)ಯ ಮಾಜಿ ಕ್ಯಾಬಿನೆಟ್​ ಸಚಿವ ಹಾಗೂ ಪ್ರಮುಖ ದಲಿತ ನಾಯಕ ರಾಜೇಂದ್ರ ಪಾಲ್​ ಗೌತಮ್​ ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್​ ​ ನಾಯಕ ವೇಣುಗೋಪಾಲ್​, ಗೌತಮ್​​ ಅವರನ್ನು ಪಕ್ಷಕ್ಕೆ ಆತ್ಮೀಯವಾಗಿ ಬರ ಮಾಡಿಕೊಂಡಿದ್ದಾರೆ.

ಹರಿಯಾಣ ವಿಧಾನಸಭಾ ಚುನಾವಣೆ ಹೊತ್ತಲ್ಲಿ ಈ ಪಕ್ಷಾಂತರ ಹೆಚ್ಚು ನಿರ್ಣಾಯಕವಾಗಿದೆ. ಇಂಡಿಯಾ ಮೈತ್ರಿಕೂಟದ ಮೈತ್ರಿ ಪಕ್ಷವಾಗಿರುವ ಎಎಪಿ ಮತ್ತು ಕಾಂಗ್ರೆಸ್​ ಹರಿಯಾಣ ವಿಧಾನಸಭೆ ಚುನಾವಣಾಯಲ್ಲಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ರಾಜೇಂದ್ರ ಪಾಲ್​ ಗೌತಮ್​ ಎಎಪಿ ತೊರೆದು ಕಾಂಗ್ರೆಸ್​ ಸೇರಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಗೌತಮ್​​ ಅವರ ಈ ಪಕ್ಷಾಂತರವೂ ಎಎಪಿಗೆ ಹಿನ್ನಡೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. 2025ರ ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಇದು ಕಾಂಗ್ರೆಸ್​​ಗೆ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ.

ವೃತ್ತಿಯಲ್ಲಿ ವಕೀಲರಾಗಿರುವ ರಾಜೇಂದ್ರ ಪಾಲ್​ ಗೌತಮ್​, ದಲಿತರ ಹಕ್ಕಿನ ಪರ ಧ್ವನಿಯಾಗಿದ್ದಾರೆ. 2014ರಲ್ಲಿ ಎಎಪಿ ಸೇರಿದ್ದ ಇವರು 2020ರ ದೆಹಲಿ ಚುನಾವಣೆಯಲ್ಲಿ ಸೀಮಪುರಿ ಕ್ಷೇತ್ರದಲ್ಲಿ ಗೆಲುವು ಕಂಡಿದ್ದರು. ಎಎಪಿ ಸರ್ಕಾರದಲ್ಲಿ ಸಾಮಾಜಿಕ ಕಲ್ಯಾಣ, ಪ.ಜಾ ಮತ್ತು ಪ.ಪಂ, ಸೇರಿದಂತೆ ಪ್ರಮುಖ ಖಾತೆಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಅಂದಾಜು 10 ಸಾವಿರ ಮಂದಿ ಬೌದ್ಧಧರ್ಮಕ್ಕೆ ಮತಾಂತರವಾಗಿರಬಹುದು ಎಂಬ ಹೇಳಿಕೆ ವಿವಾದದ ಬೆನ್ನಲ್ಲೇ ಇವರು 2022ರಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಸಾಮೂಹಿಕ ಕಾರ್ಯಕ್ರಮದಲ್ಲಿ ನೀಡಿದ್ದ ಇವರ ಹೇಳಿಕೆಯನ್ನು ಬಲವಾಗಿ ಖಂಡಿಸಿದ್ದ ಬಿಜೆಪಿ, ಇದು ಹಿಂದೂ ದೇವರಿಗೆ ಮಾಡಿದ ಅಪಮಾನ ಅವರನ್ನು ತಕ್ಷಣ ಸಚಿವ ಸ್ಥಾನದಿಂದ ತೆಗೆದು ಹಕಬೇಕು ಎಂದಿತ್ತು. ಇದಾದ ಬಳಿಕ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಗೌತಮ್​, ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದರು.

ಎಎಪಿಯಿಂದ ಹೊರ ಹೋಗಿರುವ ಪ್ರಮುಖ ನಾಯಕರಲ್ಲಿ ಗೌತಮ್​ ಮೂರನೇಯವರಾಗಿದ್ದಾರೆ. ಈ ಮೊದಲು ಶಾಸಕ ಕರ್ತರ್​ ಸಿಂಗ್​ ತನ್ವರ್​ ಮತ್ತು ಮಾಜಿ ಸಚಿವ ರಾಜ್​ ಕುಮಾರ್​ ಆನಂದ್​ ಪಕ್ಷ ತೊರೆದಿದ್ದರು.

ಕಾಂಗ್ರೆಸ್​​ಗೆ ಗೌತಮ್​ ಸೇರ್ಪಡೆ ದೊಡ್ಡ ಪ್ರಯೋಜನವಾಗಿದೆ. ಪ್ರಮುಖ ದಲಿತ ನಾಯಕರಾಗಿರುವ ಅವರು, ದಲಿತ ಸಮುದಾಯದ ಮತಗಳನ್ನು ಸೆಳೆಯಲು ಪಕ್ಷಕ್ಕೆ ನೆರವಾಗಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದ್ದು, ದೆಹಲಿಯಲ್ಲಿ ಕಾಂಗ್ರೆಸ್​ ಮತ್ತೆ ಬಲಗೊಳ್ಳಲು ಸಹಾಯಕವಾಗಲಿದೆ.

ಇದನ್ನೂ ಓದಿ: ಭಾರತೀಯ ರೈಲ್ವೆ ಹುದ್ದೆಗೆ ರಾಜೀನಾಮೆ ಸಲ್ಲಿಸಿ, ಕಾಂಗ್ರೆಸ್​ ಸೇರಿದ ವಿನೇಶ್​ ಪೋಗಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.