ETV Bharat / bharat

ಎನ್‌ಕೌಂಟರ್‌ : ಓರ್ವ ನಕ್ಸಲ್ ಹತ, ಭದ್ರತಾ ಸಿಬ್ಬಂದಿಗೆ ಗಾಯ - ENCOUNTER IN MALKANGIRI

ಒಡಿಶಾ-ಛತ್ತೀಸ್​ಗಢ ಗಡಿ ಬಳಿ ಭದ್ರತಾ ಪಡೆ ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ಇದರಲ್ಲಿ ಓರ್ವ ನಕ್ಸಲ್​ ಹತನಾಗಿದ್ದು, ಒಬ್ಬ ಭದ್ರತಾ ಸಿಬ್ಬಂದಿಗೆ ಗಾಯವಾಗಿದೆ.

Security forces
ಭದ್ರತಾ ಪಡೆಗಳು (ETV Bharat)
author img

By ETV Bharat Karnataka Team

Published : Nov 21, 2024, 4:22 PM IST

ಮಲ್ಕಾನ್‌ಗಿರಿ (ಒಡಿಶಾ): ಒಡಿಶಾ-ಛತ್ತೀಸ್‌ಗಢ ಗಡಿ ಬಳಿಯ ಮಲ್ಕಾನ್‌ಗಿರಿ ಎಂವಿ-79 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಎನ್‌ಕೌಂಟರ್ ಮುಂದುವರೆದಿದೆ. ಈ ವೇಳೆ ಒಬ್ಬ ನಕ್ಸಲೇಟ್ ಸಾವನ್ನಪ್ಪಿದ್ದು, ಓರ್ವ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಸಿಬ್ಬಂದಿಯನ್ನ ಜಿಲ್ಲಾ ಪ್ರಧಾನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ. ಇನ್ನೂ ಕಾಡಿನಲ್ಲಿ ಶೋಧ ಕಾರ್ಯ ಮುಂದುವರೆದಿದೆ.

ಛತ್ತೀಸ್‌ಗಢದಿಂದ ಒಡಿಶಾಗೆ ಪ್ರವೇಶಿಸಿದ ನಕ್ಸಲರು ; ಪ್ರಾಥಮಿಕ ಮಾಹಿತಿ ಪ್ರಕಾರ, ಛತ್ತೀಸ್‌ಗಢದಿಂದ ಮಲ್ಕನಗಿರಿ ಅರಣ್ಯಕ್ಕೆ ಕೆಲವು ನಕ್ಸಲರು ಪ್ರವೇಶಿಸಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಎಂವಿ-79 ಪೊಲೀಸ್ ಠಾಣೆ ವ್ಯಾಪ್ತಿಯ ಜಿನೆಲ್‌ಗುಡ ಗ್ರಾಮದ ಬಳಿ ಅವರು ಬೀಡು ಬಿಟ್ಟಿದ್ದಾರೆ. ಈ ಮಾಹಿತಿ ಆಧಾರದ ಮೇಲೆ ನಿನ್ನೆ (ಬುಧವಾರ) ಮಧ್ಯಾಹ್ನದಿಂದ ಸಮೀಪದ ಅರಣ್ಯದಲ್ಲಿ ‘ಎಸ್​ಒಜಿ’ ಹಾಗೂ ‘ಡಿವಿಎಫ್’ ಜಂಟಿ ಕಾರ್ಯಾಚರಣೆ ಆರಂಭಿಸಿದೆ. ಕೂಂಬಿಂಗ್ ವೇಳೆ ಗುಂಡಿನ ದಾಳಿ ಪ್ರಾರಂಭವಾಗಿದೆ. ಈ ವೇಳೆ 'ಡಿವಿಎಫ್' ಜವಾನನಿಗೆ ಗುಂಡು ತಾಗಿದೆ. ನಂತರ ಸಿಬ್ಬಂದಿಯನ್ನ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಬಿಎಸ್‌ಎಫ್ ಭಾಗಿ : ಮಾಹಿತಿ ಪ್ರಕಾರ, ನಕ್ಸಲೀಯರ ಗುಂಪು ಹೊಡೆದಾಟದಲ್ಲಿ ತೊಡಗಿದೆ. ಅವರನ್ನು ಹಿಡಿಯಲು ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಇದೀಗ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಕೂಡ ಈ ಜಂಟಿ ಕಾರ್ಯಾಚರಣೆಯಲ್ಲಿ ತೊಡಗಿದೆ.

ಸಮೀಪದ ಅರಣ್ಯವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಹಿಂದೆ, ಛತ್ತೀಸ್‌ಗಢದಲ್ಲಿ ಮಾವೋವಾದಿಗಳು ಅನೇಕ ಎನ್‌ಕೌಂಟರ್‌ಗಳಲ್ಲಿ ಪ್ರಾಣ ಕಳೆದುಕೊಂಡ ನಂತರ, ಅವರು ಒಡಿಶಾ ಅರಣ್ಯವನ್ನು ಪ್ರವೇಶಿಸಬಹುದೆಂಬ ಭಯವಿತ್ತು. ಅದಕ್ಕಾಗಿಯೇ ಒಡಿಶಾ ಪೊಲೀಸರೂ ಕಾರ್ಯಾಚರಣೆಗೆ ಸಿದ್ಧರಾಗಿದ್ದರು.

ಇದನ್ನೂ ಓದಿ : ಛತ್ತೀಸ್‌ಗಢ: ಹತರಾದ ಐವರು ನಕ್ಸಲರ ತಲೆ ಮೇಲಿತ್ತು 40 ಲಕ್ಷ ರೂ. ಬಹುಮಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.