ETV Bharat / bharat

2024-25ರ ಆರ್ಥಿಕ ಸಮೀಕ್ಷೆ ಮಂಡನೆ: ಶೇ 6.5ರಿಂದ 7ರಷ್ಟು ಜಿಡಿಪಿ ಬೆಳವಣಿಗೆ ಅಂದಾಜು - Economic Survey - ECONOMIC SURVEY

2024-25ರ ಆರ್ಥಿಕ ಸಮೀಕ್ಷೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ಮಂಡಿಸಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (IANS)
author img

By PTI

Published : Jul 22, 2024, 2:02 PM IST

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆಯಲ್ಲಿ 2024-25ರಲ್ಲಿ ಭಾರತದ ಜಿಡಿಪಿ ಬೆಳವಣಿಗೆಯ ದರವನ್ನು ಶೇಕಡಾ 6.5ರಿಂದ 7ಕ್ಕೆ ಅಂದಾಜಿಸಲಾಗಿದೆ. ಏಪ್ರಿಲ್​ನ ವರ್ಲ್ಡ್ ಎಕನಾಮಿಕ್ ಔಟ್ ಲುಕ್ ಪ್ರಕಾರ 2023ರಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆಯು ಶೇಕಡಾ 3.2 ರಷ್ಟಿರುತ್ತದೆ ಎಂದು ಸಮೀಕ್ಷೆಯಲ್ಲಿ ಪ್ರಸ್ತಾಪಿಸಲಾಗಿದೆ.

ದೇಶಗಳ ನಡುವೆ ವಿಭಿನ್ನ ಬೆಳವಣಿಗೆಯ ಮಾದರಿಗಳು ಹೊರಹೊಮ್ಮಿವೆ. ದೇಶೀಯ ರಚನಾತ್ಮಕ ಸಮಸ್ಯೆಗಳು, ಭೌಗೋಳಿಕ ರಾಜಕೀಯ ಸಂಘರ್ಷಗಳ ವಿಭಿನ್ನ ಪರಿಣಾಮ ಮತ್ತು ವಿತ್ತೀಯ ನೀತಿಗಳ ಬಿಗಿಗೊಳಿಸುವಿಕೆಯ ಪರಿಣಾಮದಿಂದಾಗಿ ದೇಶಗಳ ಬೆಳವಣಿಗೆಯ ದರದಲ್ಲಿ ತೀವ್ರ ವ್ಯತ್ಯಾಸವಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಬಾಹ್ಯ ಸವಾಲುಗಳ ಪರಿಣಾಮ ಕಡಿಮೆ: ಬಾಹ್ಯ ಸವಾಲುಗಳ ಹೊರತಾಗಿಯೂ ಭಾರತದ ಆರ್ಥಿಕತೆಯು ಹಣಕಾಸು ವರ್ಷ 2023ರಲ್ಲಿ ಸಾಧಿಸಿದ ಆವೇಗವನ್ನು 2024ರ ಹಣಕಾಸು ವರ್ಷದವರೆಗೆ ಕಾಪಾಡಿಕೊಂಡಿದೆ. ಭಾರತದ ನೈಜ ಜಿಡಿಪಿ 2024ರ ಹಣಕಾಸು ವರ್ಷದಲ್ಲಿ ಶೇಕಡಾ 8.2ರಷ್ಟು ಬೆಳೆದಿದೆ. ಇದು ಹಣಕಾಸು ವರ್ಷ 2024ರ ನಾಲ್ಕು ತ್ರೈಮಾಸಿಕಗಳ ಪೈಕಿ ಮೂರು ತ್ರೈಮಾಸಿಕಗಳಲ್ಲಿ ಶೇಕಡಾ 8ರ ಗಡಿಯನ್ನು ಮೀರಿದೆ. ಸ್ಥೂಲ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸಿದ್ದರಿಂದ ಬಾಹ್ಯ ಸವಾಲುಗಳು ಭಾರತದ ಆರ್ಥಿಕತೆಯ ಮೇಲೆ ಕನಿಷ್ಠ ಪರಿಣಾಮ ಬೀರಲಿವೆ ಎಂದು ಸಮೀಕ್ಷೆ ತಿಳಿಸಿದೆ.

ಹಣದುಬ್ಬರ ಶೇ 5.4ಕ್ಕೆ ಇಳಿಕೆ: ಸೂಕ್ತ ಸಮಯದಲ್ಲಿ ಸರಿಯಾದ ನೀತಿಗಳನ್ನು ಜಾರಿಗೊಳಿಸಿದ್ದರಿಂದ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಬೆಲೆ ಸ್ಥಿರತೆ ಕ್ರಮಗಳು ಚಿಲ್ಲರೆ ಹಣದುಬ್ಬರವನ್ನು ಶೇಕಡಾ 5.4ಕ್ಕೆ ಇಳಿಸಲು ಸಹಾಯ ಮಾಡಿದೆ ಎಂದು ಆರ್ಥಿಕ ಸಮೀಕ್ಷೆ 2023-2024 ಸೋಮವಾರ ತಿಳಿಸಿದೆ. ಹಣಕಾಸು ವರ್ಷ 2022 ಮತ್ತು 2023ರ ಅವಧಿಯಲ್ಲಿ, ಕೋವಿಡ್ -19 ಸಾಂಕ್ರಾಮಿಕ, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಪೂರೈಕೆ ಅಡೆತಡೆಗಳು ಜಾಗತಿಕವಾಗಿ ಹಣದುಬ್ಬರದ ಒತ್ತಡವನ್ನು ಹೆಚ್ಚಿಸಲು ಕಾರಣವಾಗಿವೆ ಎಂದು ಸಮೀಕ್ಷೆ ಹೇಳಿದೆ.

ಆರ್ಥಿಕ ಸಮೀಕ್ಷೆಯ ಪ್ರಕಾರ, ಅಂತಾರಾಷ್ಟ್ರೀಯ ಸಂಘರ್ಷಗಳು ಮತ್ತು ಆಹಾರ ವೆಚ್ಚಗಳ ಮೇಲೆ ಪರಿಣಾಮ ಬೀರುವಂಥ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ಭಾರತದಲ್ಲಿ ಗ್ರಾಹಕ ಸರಕು ಮತ್ತು ಸೇವೆಗಳು ದುಬಾರಿಯಾಗಿವೆ. ಕೆಲವು ನಿರ್ದಿಷ್ಟ ಆಹಾರ ಪದಾರ್ಥಗಳ ಹಣದುಬ್ಬರ ದರ ಹೆಚ್ಚಾಗಿದ್ದರೂ ಒಟ್ಟಾರೆ ಹಣದುಬ್ಬರ ದರವು ಬಹುತೇಕ ನಿಯಂತ್ರಣದಲ್ಲಿದೆ ಎಂದು ಸಮೀಕ್ಷೆ ಹೇಳಿದೆ.

ಚಾಲ್ತಿ ಖಾತೆ ಕೊರತೆ: ಜಾಗತಿಕವಾಗಿ ಸರಕುಗಳಿಗೆ ಬೇಡಿಕೆ ಕಡಿಮೆಯಾಗಿದ್ದರಿಂದ ಬಾಹ್ಯ ಸಮತೋಲನವು ಒತ್ತಡಕ್ಕೊಳಗಾಗಿದೆ. ಆದರೆ ಹೆಚ್ಚಳವಾದ ಸೇವೆಗಳ ರಫ್ತುಗಳು ಇದನ್ನು ಬಹುತೇಕ ಸಮತೋಲನಗೊಳಿಸಿವೆ. ಇದರ ಪರಿಣಾಮವಾಗಿ, ಚಾಲ್ತಿ ಖಾತೆ ಕೊರತೆ (ಸಿಎಡಿ) 2024ರ ಹಣಕಾಸು ವರ್ಷದಲ್ಲಿ ಜಿಡಿಪಿಯ ಶೇಕಡಾ 0.7ರಷ್ಟಿದೆ. ಇದು ಹಣಕಾಸು ವರ್ಷ 2023ರಲ್ಲಿ ಇದ್ದ ಜಿಡಿಪಿಯ ಶೇಕಡಾ 2.0ಗಿಂತ ಉತ್ತಮವಾಗಿದೆ.

ಇದನ್ನೂ ಓದಿ : Explained: ಹಣಕಾಸು ಮಸೂದೆ ಎಂದರೇನು?: ಬನ್ನಿ, ಅರ್ಥ ಮಾಡಿಕೊಳ್ಳೋಣ - What is a Finance Bill

ETV Bharat Logo

Copyright © 2024 Ushodaya Enterprises Pvt. Ltd., All Rights Reserved.