ಅಮ್ರೇಲಿ (ಗುಜರಾತ್): ಇಲ್ಲಿನ ಅಮ್ರೇಲಿ ಜಿಲ್ಲೆಯ ಸವರ್ ಕುಂಡ್ಲಾ ಮತ್ತು ಸಮೀಪದ ಗ್ರಾಮಗಳಲ್ಲಿ ಭಾನುವಾರ ಸಂಜೆ ಭೂಕಂಪನದ ಅನುಭವವಾಗಿದೆ. ಸಂಜೆ 5.20ರ ಸುಮಾರಿಗೆ ಕಂಪನದ ಅನುಭವವಾದ ತಕ್ಷಣ ಜನರು ಭಯಭೀತರಾಗಿ ಮನೆ, ಕಚೇರಿಗಳಿಂದ ಹೊರಗೆ ಓಡಿಬಂದರು. ಸವಾರ ಕುಂಡ್ಲಾ, ಮಿಟಿಯಾಲ, ಧಜ್ಡಿ ಮತ್ತು ಸಕ್ರಪಾರ ಗ್ರಾಮಗಳಲ್ಲಿ ಭೂಕಂಪನ ಉಂಟಾಗಿದೆ.
ಧರಿಗಿರ್ ಗ್ರಾಮಗಳ ಜನರು ಕಂಪನದ ಅನುಭವವಾದ ತಕ್ಷಣ ಮನೆಗಳಿಂದ ಆಚೆ ಬಂದರು. ಸಂತ್ರಸ್ತ ಸ್ಥಳಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಭೀತಿ ಉಂಟಾಗಿದೆ. ಇದೇ ವೇಳೆ ಭೂಕಂಪದ ತೀವ್ರತೆ 3.7ರಷ್ಟಿತ್ತು ಎಂದು ಗಾಂಧಿನಗರ ಭೂಕಂಪನ ಸಂಶೋಧನಾ ಇಲಾಖೆ ಮಾಹಿತಿ ನೀಡಿದೆ. ಇದು ಅಕ್ಷಾಂಶ 21.247 ಮತ್ತು ರೇಖಾಂಶ 71.105 ನಲ್ಲಿ ಸಂಭವಿಸಿದೆ.
ಭೂಕಂಪದಿಂದ ಜನರು ಭಯಭೀತರಾಗಿದ್ದಾರೆ. ಕಂಪನದ ಅನುಭವಿಸಿದವರಿಗೆ ಈ ಹಿಂದೆ ಕಚ್‌ನಲ್ಲಿ ಸಂಭವಿಸಿದ್ದ ಭೀಕರ ಭೂಕಂಪನದ ನೆನಪಾಗಿದೆ.
ಇದನ್ನೂ ಓದಿ: ಬೆಂಗಳೂರಿನಿಂದ ಅಯೋಧ್ಯೆಗೆ ತೆರಳುತ್ತಿದ್ದ ಫ್ಲೈಟ್ ಸೇರಿ 50ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ!