ETV Bharat / bharat

ದೆಹಲಿ ವಿಶ್ವವಿದ್ಯಾಲಯ ಪ್ರವೇಶಾತಿ: ಕಾಲೇಜು​, ಕೋರ್ಸ್‌ಗಳ ಆದ್ಯತೆಗಳನ್ನು ಭರ್ತಿ ಮಾಡಲು ಇಂದು ಕೊನೆಯ ದಿನ - Delhi University Admission - DELHI UNIVERSITY ADMISSION

CUET ಸ್ಕೋರ್‌ಗಳ ಆಧಾರದ ಮೇಲೆ 71,000 ಪದವಿಪೂರ್ವ ಸೀಟುಗಳಲ್ಲಿ ಪ್ರವೇಶಾತಿಗಳು ಆರಂಭವಾಗಿವೆ. 3,00,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೊದಲ ಪಟ್ಟಿಯಲ್ಲಿ ಪ್ರವೇಶಕ್ಕಾಗಿ ಕಾಲೇಜು ಮತ್ತು ಕೋರ್ಸ್ ಆದ್ಯತೆಗಳನ್ನು ಭರ್ತಿ ಮಾಡಿದ್ದಾರೆ ಎಂದು ದೆಹಲಿ ವಿಶ್ವವಿದ್ಯಾಲಯ ಹೇಳಿದೆ.

DELHI UNIVERSITY UG ADMISSION CUET  DU ADMISSION 2024  DELHI UNIVERSITY ADMISSION  DELHI UNIVERSITY ADMISSION 2024
ದೆಹಲಿ ವಿಶ್ವವಿದ್ಯಾಲಯ ಪ್ರವೇಶಾತಿ (ETV Bharat)
author img

By ETV Bharat Karnataka Team

Published : Aug 7, 2024, 12:42 PM IST

ನವದೆಹಲಿ: ಇಂದು ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿ ಕೋರ್ಸ್‌ಗೆ ಎರಡನೇ ಹಂತದ ಪ್ರವೇಶದ ಹಿನ್ನೆಲೆಯಲ್ಲಿ ಕಾಲೇಜುಗಳು ಮತ್ತು ಕೋರ್ಸ್‌ಗಳ ಆದ್ಯತೆಗಳನ್ನು ಭರ್ತಿ ಮಾಡಲು ಕೊನೆಯ ದಿನವಾಗಿದೆ. CUET UG ಫಲಿತಾಂಶವನ್ನು ಪ್ರಕಟಿಸುವ ಮೊದಲು ಪ್ರವೇಶಕ್ಕಾಗಿ ದೆಹಲಿ ವಿಶ್ವವಿದ್ಯಾಲಯದ ಸಾಮಾನ್ಯ ಸೀಟ್ ಹಂಚಿಕೆ ವ್ಯವಸ್ಥೆ (CSAS) ಪೋರ್ಟಲ್‌ನಲ್ಲಿ ನೋಂದಾಯಿಸಿದ ವಿದ್ಯಾರ್ಥಿಗಳು ಇಂದು 4:59 PM ರೊಳಗೆ ಆದ್ಯತೆಯ ಫಾರ್ಮ್‌ಗಳನ್ನು ಭರ್ತಿ ಮಾಡಬಹುದಾಗಿದೆ.

ಜುಲೈ 28 ರಂದು CUET ಯುಜಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಿದ ನಂತರ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಆಗಸ್ಟ್ 1 ರಿಂದ ಎರಡನೇ ಹಂತದಲ್ಲಿ ಆದ್ಯತೆಗಳನ್ನು ಭರ್ತಿ ಮಾಡಲು ಅವಕಾಶವನ್ನು ಕಲ್ಪಿಸಲಾಗಿತ್ತು. ಅಡ್ಮಿಷನ್​ ಬ್ರಾಂಚ್​ ಮೊದಲ ಹಂತದಲ್ಲಿ ನೋಂದಾಯಿಸದವರಿಗೆ ಮೊದಲ ಮತ್ತು ಎರಡನೆಯ ಹಂತಗಳಲ್ಲಿ ಏಕಕಾಲದಲ್ಲಿ ಸೇರಲು ಅವರಿಗೆ ಅವಕಾಶ ನೀಡಲಾಗಿದೆ.

CUET ಅಂಕಗಳ ಆಧಾರದ ಮೇಲೆ 71,000 ಪದವಿಪೂರ್ವ ಸೀಟುಗಳಲ್ಲಿ ಪ್ರವೇಶಗಳು ನಡೆಯುತ್ತಿವೆ. ಇಲ್ಲಿಯವರೆಗೆ ಎರಡನೇ ಹಂತದಲ್ಲಿ, 3,00,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೊದಲ ಪಟ್ಟಿಯಲ್ಲಿ ಪ್ರವೇಶಕ್ಕಾಗಿ ಕಾಲೇಜು ಮತ್ತು ಕೋರ್ಸ್ ಆದ್ಯತೆಗಳನ್ನು ಭರ್ತಿ ಮಾಡಿದ್ದಾರೆ. ಈ ಹಿಂದೆ CUET ಯುಜಿ ಪರೀಕ್ಷೆಗೆ ನೋಂದಾಯಿಸುವಾಗ ಸುಮಾರು 6,00,000 ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ತಮ್ಮ ಮೊದಲ ಆದ್ಯತೆಯ ಭಾಗವಾಗಿ ದೆಹಲಿ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಿಕೊಂಡಿದ್ದರು. ಆರಂಭದಲ್ಲಿ ಆಗಸ್ಟ್ 1 ರಂದು ಪ್ರಾರಂಭವಾಗಬೇಕಿದ್ದ ಹೊಸ ಸೇಷನ್​ ಅಕ್ರಮಗಳ ಆರೋಪದ ನಡುವೆ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (ಸಿಯುಇಟಿ) ಅಂಕಗಳ ಪ್ರಕಟಣೆಯಲ್ಲಿ ವಿಳಂಬವಾದ ಕಾರಣ ಮುಂದೂಡಲ್ಪಟ್ಟಿತು.

ವಿಳಂಬದಿಂದಾಗಿ ಕೆಲವು ವಿದ್ಯಾರ್ಥಿಗಳು ಖಾಸಗಿ ಅಥವಾ ಇತರ ಸರ್ಕಾರಿ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕಾಯಿತು. ಯುಜಿ ಕೋರ್ಸ್‌ಗಳ ಶೈಕ್ಷಣಿಕ ಅವಧಿಯು ಮುಂದಿನ ವರ್ಷ ಜೂನ್ 7 ರಂದು ಅಂತಿಮ ಪರೀಕ್ಷೆಗಳ ಪ್ರಾರಂಭದೊಂದಿಗೆ ಕೊನೆಗೊಳ್ಳುತ್ತದೆ. 2024-2025 UG ಬ್ಯಾಚ್‌ನ ಎರಡನೇ ಸೆಮಿಸ್ಟರ್ ಎರಡು ದಿನಗಳ ಚಳಿಗಾಲದ ರಜೆಯ ನಂತರ ಮುಂದಿನ ವರ್ಷ ಜನವರಿ 27 ರಿಂದ ಪ್ರಾರಂಭವಾಗುತ್ತದೆ.

ದೆಹಲಿ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ಪದವಿ ಪೂರ್ವ ಪ್ರವೇಶ ವೇಳಾಪಟ್ಟಿಯಂತೆ ಮೊದಲ ಸೀಟು ಹಂಚಿಕೆ ಪಟ್ಟಿಯನ್ನು ಆಗಸ್ಟ್ 16 ರಂದು ಸಂಜೆ 5 ಗಂಟೆಗೆ ಬಿಡುಗಡೆ ಮಾಡಲಾಗುವುದು. ಎರಡನೇ ಲಿಸ್ಟ್​​ ಅನ್ನು ಆಗಸ್ಟ್ 22 ರಂದು ಬಿಡುಗಡೆ ಮಾಡಲಾಗುತ್ತದೆ. ದೆಹಲಿ ವಿಶ್ವವಿದ್ಯಾಲಯ ಉಪಕುಲಪತಿ, ಪ್ರೊಫೆಸರ್ ಯೋಗೇಶ್ ಸಿಂಗ್ ಅವರು ಎಲ್ಲವನ್ನೂ ಚಾನೆಲೈಸ್ ಮಾಡುತ್ತಿದ್ದಾರೆ ಎಂದು ಪ್ರೊಫೆಸರ್ ಯೋಗೇಶ್ ಸಿಂಗ್ ಹೇಳಿದರು.

ಓದಿ: 299 ಶಾಲೆಗಳಲ್ಲಿ ಒಂದನೇ ತರಗತಿಗೆ ಒಂದೇ 1 ಮಗುವೂ ಪ್ರವೇಶ ಪಡೆದಿಲ್ಲ: ಶಿಕ್ಷಕರು, ಸುಸಜ್ಜಿತ ಕಟ್ಟಡ ಎಲ್ಲವೂ ಇದೆ, ಆದರೆ? - GOVT SCHOOL ZERO ADMISSION

ETV Bharat Logo

Copyright © 2025 Ushodaya Enterprises Pvt. Ltd., All Rights Reserved.