ETV Bharat / bharat

ಏರ್​​ ಇಂಡಿಯಾ ವಿಮಾನದಲ್ಲಿ ಮದ್ಯಪಾನ ಮಾಡಿ ಗಗನಸಖಿ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಯಾಣಿಕ! - Assaults Air Hostess

author img

By ETV Bharat Karnataka Team

Published : Sep 1, 2024, 5:55 PM IST

ಏರ್​​ ಇಂಡಿಯಾ ವಿಮಾನದಲ್ಲಿ ಮದ್ಯಪಾನ ನಿಷೇಧವಿದ್ದರೂ, ಪ್ರಯಾಣಿಕನೊಬ್ಬ ಕುಡಿದು ಗಗನಸಖಿಯ ಜೊತೆಗೆ ಅನುಚಿತವಾಗಿ ವರ್ತಿಸಿದ ಘಟನೆ ನಡೆದಿದೆ.

ಗಗನಸಖಿ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಯಾಣಿಕ
ಗಗನಸಖಿ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಯಾಣಿಕ (ETV Bharat)

ಲಖನೌ (ಉತ್ತರಪ್ರದೇಶ): ಏರ್​​ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕನೊಬ್ಬ ಗಗನಸಖಿಯ ಜೊತೆಗೆ ಅನುಚಿತವಾಗಿ ವರ್ತಿಸಿದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ದುಬೈನಿಂದ ಉತ್ತರಪ್ರದೇಶದ ಲಖನೌಗೆ ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಕ ಪಾನಮತ್ತನಾಗಿ ಗಗನಸಖಿಯ ಜೊತೆಗೆ ಅಸಭ್ಯವಾಗಿ ನಡೆದುಕೊಂಡಿದ್ದಾಗಿ ದೂರು ಬಂದಿದೆ. ಈ ಬಗ್ಗೆ ಯಾವುದೇ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿಲ್ಲ.

ಏನಾಯ್ತು?: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ (IX-194) ಶನಿವಾರ ದುಬೈನಿಂದ ಹಾರಿ ಉತ್ತರಪ್ರದೇಶದ ಲಖನೌಗೆ ಬರುತ್ತಿತ್ತು. ಈ ವೇಳೆ ಪಾಕಿಸ್ತಾನದ ಕರಾಚಿಯ ಮೇಲೆ ಬರುತ್ತಿದ್ದಾಗ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕ ಮದ್ಯಪಾನ ಮಾಡುತ್ತಿದ್ದ. ಇದನ್ನು ಕಂಡ ಗಗನಸಖಿ ಆತನನ್ನು ತಡೆಯಲು ಮುಂದಾಗಿದ್ದಾರೆ. ಇದರಿಂದ ಕೋಪಗೊಂಡ ಪ್ರಯಾಣಿಕ ವಿಮಾನ ಸಿಬ್ಬಂದಿಯನ್ನು ಗದರಿದ್ದಾನೆ.

ಇಷ್ಟಾದರೂ ಆತ ಮದ್ಯಪಾನ ಮಾಡುವುದನ್ನು ನಿಲ್ಲಿಸದ ಕಾರಣ, ಗಗನಸಖಿ ವಿಮಾನದ ಪೈಲಟ್​​ಗೆ ಮಾಹಿತಿ ನೀಡಿದ್ದಾರೆ. ಮದ್ಯಪಾನ ಮಾಡುವುದು ನಿಷಿದ್ಧ ಎಂದು ತಿಳಿಸಿದಾಗ ಆತ ಕೋಪಗೊಂಡು ಸಿಬ್ಬಂದಿಯ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಮದ್ಯಪಾನ ನಿಲ್ಲಿಸದಿದ್ದರೆ, ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನನ್ನು ಇಳಿಸುವುದಾಗಿ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ.

ಗಗನಸಖಿಯನ್ನು ತಳ್ಳಿ, ನಿಂದಿಸಿದ ಪ್ರಯಾಣಿಕ: ಇದರಿಂದ ಕುಪಿತಗೊಂಡ ಆತ ಗಗನಸಖಿಯನ್ನು ತಳ್ಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಹೀಗಾಗಿ ವಿಮಾನದ ಇತರ ಸಿಬ್ಬಂದಿಗೆ ತೊಂದರೆ ಉಂಟಾಯಿತು. ಬಳಿಕ ವಿಮಾನವು ಲಖನೌನದ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೇಲೆ ಏರ್​​ಲೈನ್ ​​ಅಧಿಕಾರಿಗಳು ಆರೋಪಿ ಪ್ರಯಾಣಿಕನನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್‌ಎಫ್)ಹಸ್ತಾಂತರಿಸಿದರು.

ಭದ್ರತಾ ಸಿಬ್ಬಂದಿ ವಿಚಾರಣೆ ನಡೆಸಿದ್ದಾರೆ. ಆದರೆ, ವಿಮಾನ ಸಿಬ್ಬಂದಿಯು ಯಾವುದೇ ಲಿಖಿತ ದೂರು ನೀಡದ ಕಾರಣ, ಪ್ರಯಾಣಿಕನಿಗೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿದೆ. ಕುಡಿದ ಅಮಲಿನಲ್ಲಿ ಪ್ರಯಾಣಿಕ ಗಗನಸಖಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದು ಮತ್ತು ಗಲಾಟೆ ಸೃಷ್ಟಿಯಾಗಿ ಸಹ ಪ್ರಯಾಣಿಕರಿಗೆ ತೊಂದರೆ ಉಂಟಾದ ಬಗ್ಗೆ ಕ್ಯಾಬಿನ್ ಸಿಬ್ಬಂದಿಯ ದೂರನ್ನು ಪುಸ್ತಕದಲ್ಲಿ ದಾಖಲಿಸಲಾಗಿದೆ.

ಲಖನೌ ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ಏರ್​ಲೈನ್ಸ್​ ಅಧಿಕಾರಿಗಳು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (DGCA) ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸೂಕ್ತ ವಿಚಾರಣೆಯ ನಂತರ ಪ್ರಯಾಣಿಕನ ಹೆಸರು ಬಹಿರಂಗಪಡಿಸಿ ಬಳಿಕ ಆತನ ವಿಮಾನ ಪ್ರಯಾಣವನ್ನು ಮುಂದಿನ ದಿನಗಳಲ್ಲಿ ನಿಷೇಧಿಸಲಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಲಂಡನ್​ನ ಹೋಟೆಲ್​ನಲ್ಲಿ ಏರ್​ 'ಇಂಡಿಯಾ' ಮಹಿಳಾ ಸಿಬ್ಬಂದಿ ಮೇಲೆ ಅಪರಿಚಿತನಿಂದ ಹಲ್ಲೆ - Air India Crew Member Assaulted

ETV Bharat Logo

Copyright © 2024 Ushodaya Enterprises Pvt. Ltd., All Rights Reserved.