ETV Bharat / bharat

ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಸುಪ್ರೀಂ ಕೋರ್ಟ್ ಅಸಮಾಧಾನ

author img

By ETV Bharat Karnataka Team

Published : Mar 4, 2024, 2:41 PM IST

ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮದ ಹೇಳಿಕೆಯ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

SC to Udhayanidhi Stalin
SC to Udhayanidhi Stalin

ನವದೆಹಲಿ : ಸನಾತನ ಧರ್ಮಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗೆ ಸುಪ್ರೀಂ ಕೋರ್ಟ್ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದೆ. ನಿಮ್ಮ ಹೇಳಿಕೆಯ ಪರಿಣಾಮಗಳೇನಾಗಬಹುದು ಎಂಬುದು ನಿಮಗೆ ತಿಳಿದಿರಲಿಲ್ಲವೇ ಮತ್ತು ಇದು ಇದು ಆರ್ಟಿಕಲ್ 19 (1) (ಎ) (ವಾಕ್ ಸ್ವಾತಂತ್ರ್ಯದ) ದುರುಪಯೋಗವಲ್ಲವೇ ಎಂದು ಸುಪ್ರೀಂ ಕೋರ್ಟ್​ ಅವರನ್ನು ಪ್ರಶ್ನಿಸಿದೆ.

ಸುಪ್ರೀಂ ಕೋರ್ಟ್​ನಲ್ಲಿ ಸ್ಟಾಲಿನ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎ.ಎಂ. ಸಿಂಘ್ವಿ, ತಮ್ಮ ಕಕ್ಷಿದಾರರ ವಿರುದ್ಧ ಹಲವಾರು ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಅವೆಲ್ಲವನ್ನೂ ಒಂದೇ ಕಡೆ ಜೋಡಿಸಿ ವಿಚಾರಣೆ ನಡೆಸುವಂತೆ ಆದೇಶಿಸಬೇಕೆಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಮನವಿ ಸಲ್ಲಿಸಿದರು.

ನ್ಯಾಯಮೂರ್ತಿ ದತ್ತಾ ಅವರು ಸ್ಟಾಲಿನ್ ಅವರ ವಕೀಲರಿಗೆ, "ನೀವು ನಿಮ್ಮ ಆರ್ಟಿಕಲ್ 19 (1) (ಎ) ಹಕ್ಕನ್ನು ದುರುಪಯೋಗಪಡಿಸಿಕೊಂಡಿರುವಿರಿ ಮತ್ತು ನಿಮ್ಮ ಆರ್ಟಿಕಲ್ 25 ನೀಡಿರುವ ಹಕ್ಕನ್ನು ಕೂಡ ದುರುಪಯೋಗಪಡಿಸಿಕೊಂಡಿರುವಿರಿ ಅಲ್ಲವೇ? ಈಗ ನೀವು ನಿಮ್ಮ ಆರ್ಟಿಕಲ್ 32ರ ಪ್ರಕಾರ ಹಕ್ಕನ್ನು ಚಲಾಯಿಸುತ್ತಿರುವಿರಿ ಅಲ್ಲವೇ? ನಿಮ್ಮ ಹೇಳಿಕೆಗಳ ಪರಿಣಾಮಗಳೇನಾಗಬಹುದು ಎಂಬುದು ನಿಮಗೆ ತಿಳಿದಿರಲಿಲ್ಲವೇ?" ಎಂದು ನ್ಯಾಯಮೂರ್ತಿ ದತ್ತಾ ಸ್ಟಾಲಿನ್ ಪರ ವಕೀಲರಿಗೆ ಪ್ರಶ್ನಿಸಿದರು.

ಅರ್ನಬ್ ಗೋಸ್ವಾಮಿ, ನೂಪುರ್ ಶರ್ಮಾ, ಮೊಹಮ್ಮದ್ ಜುಬೈರ್ ಮತ್ತು ಅಮಿಶ್ ದೇವಗನ್ ಅವರ ಪ್ರಕರಣಗಳನ್ನು ಪ್ರಸ್ತಾಪಿಸಿದ ಸಿಂಘ್ವಿ, ಆ ಪ್ರಕರಣಗಳಲ್ಲಿ ಎಫ್​ಐಆರ್​ಗಳನ್ನು ಒಂದೇ ಕಡೆ ಜೋಡಿಸಲು ಅನುಮತಿ ನೀಡಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಖನ್ನಾ, ಮೊದಲು ಆಯಾ ಹೈಕೋರ್ಟ್​ಗಳ ಮೊರೆ ಹೋಗುವಂತೆ ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಕೀಲ ಸಿಂಘ್ವಿ, ಹಲವಾರು ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿರುವುದರಿಂದ ತನ್ನ ಕಕ್ಷಿದಾರರು ಹಲವಾರು ರಾಜ್ಯಗಳ ಹೈಕೋರ್ಟ್​ಗಳಿಗೆ ಎಡತಾಕಬೇಕಾಗುತ್ತದೆ. ಇದು ನ್ಯಾಯ ಪಡೆಯಲು ಕಿರುಕುಳ ಅನುಭವಿಸಿದಂತಾಗುತ್ತದೆ ಎಂದರು.

ನಿಮ್ಮ ಕಕ್ಷಿದಾರರು ಸಾಮಾನ್ಯ ವ್ಯಕ್ತಿಯಲ್ಲ, ಅವರು ಸಚಿವರಾಗಿದ್ದಾರೆ. ಅವರ ಮಾತಿನ ಪರಿಣಾಮ ಏನಾಗಬಹುದು ಎಂಬುದು ಅವರಿಗೆ ತಿಳಿಯಬೇಕಿತ್ತಲ್ಲವೇ? ಎಂದು ನ್ಯಾಯಮೂರ್ತಿ ದತ್ತಾ ಪ್ರಶ್ನಿಸಿದರು. ಉದಯನಿಧಿ ಸ್ಟಾಲಿನ್ ನಾಲ್ಕು ಗೋಡೆಗಳ ಮಧ್ಯೆ ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿದ್ದಾರೆಯೇ ಹೊರತು ಬಹಿರಂಗ ಹೇಳಿಕೆ ನೀಡಿಲ್ಲ ಎಂದು ಸಿಂಘ್ವಿ ಸಮರ್ಥನೆ ಮಾಡಿಕೊಂಡರು. ಪ್ರಕರಣದ ಮುಂದಿನ ವಿಚಾರಣೆ ಶುಕ್ರವಾರ, ಮಾರ್ಚ್ 15 ರಂದು ನಡೆಯಲಿದೆ.

ಇದನ್ನೂ ಓದಿ : ತೆಲಂಗಾಣದಲ್ಲಿ ₹56 ಸಾವಿರ ಕೋಟಿ ವೆಚ್ಚದ ಕಾಮಗಾರಿಗಳಿಗೆ ಪ್ರಧಾನಿ ಚಾಲನೆ, ಶಂಕುಸ್ಥಾಪನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.