ETV Bharat / bharat

ನಕ್ಸಲ್​​ ಆರೋಪದಿಂದ ಖುಲಾಸೆಗೊಂಡಿದ್ದ ದೆಹಲಿ ವಿವಿ ಮಾಜಿ ಪ್ರಾಧ್ಯಾಪಕ ಸಾಯಿಬಾಬಾ ನಿಧನ

ನಕ್ಸಲ್​​ ಸಂಪರ್ಕ ಆರೋಪದಿಂದ ಮುಕ್ತವಾಗಿದ್ದ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಸಾಯಿಬಾಬಾ ಅವರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.

author img

By PTI

Published : 2 hours ago

ಮಾಜಿ ಪ್ರಾಧ್ಯಾಪಕ ಸಾಯಿಬಾಬಾ ನಿಧನ
ಮಾಜಿ ಪ್ರಾಧ್ಯಾಪಕ ಸಾಯಿಬಾಬಾ ನಿಧನ (ETV Bharat)

ಹೈದರಾಬಾದ್: ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ, ನಕ್ಸಲ್​ ಸಂಪರ್ಕ ಆರೋಪದಡಿ 7 ತಿಂಗಳ ಹಿಂದಷ್ಟೇ ಖುಲಾಸೆಗೊಂಡಿದ್ದ ಜಿ.ಎನ್. ಸಾಯಿಬಾಬಾ ಅವರು ಶನಿವಾರ ರಾತ್ರಿ 9 ಗಂಟೆಗೆ ಕೊನೆಯುಸಿರೆಳೆದರು. ಅವರಿಗೆ 54 ವರ್ಷ ವಯಸ್ಸಾಗಿತ್ತು.

ಪ್ರೊಪೆಸರ್​​ ಸಾಯಿಬಾಬಾ ಅವರು ಪಿತ್ತಕೋಶದ ಸೋಂಕಿನಿಂದ ಬಳಲುತ್ತಿದ್ದರು. ಎರಡು ವಾರಗಳ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ, ನಂತರ ಸೃಷ್ಟಿಯಾದ ಸಮಸ್ಯೆಗಳಿಂದ ಅವರು ಚೇತರಿಸಿಕೊಳ್ಳಲಿಲ್ಲ. ಕಳೆದ 20 ದಿನಗಳಿಂದ ನಿಜಾಮ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ನಿಮ್ಸ್) ಚಿಕಿತ್ಸೆಗೆ ದಾಖಲಾಗಿದ್ದರು.

ಯುಎಪಿಎ ಕೇಸ್​​ನಿಂದ ಮುಕ್ತಿ: ಸಾಯಿಬಾಬಾ ಅವರು ದೆಹಲಿ ವಿಶ್ವವಿದ್ಯಾಲಯದ ರಾಮ್ ಲಾಲ್ ಆನಂದ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. 2014 ರಲ್ಲಿ ಮಹಾರಾಷ್ಟ್ರ ಪೊಲೀಸರು ಮಾವೋವಾದಿ ಸಂಪರ್ಕದ ಶಂಕೆಯ ಮೇಲೆ ಬಂಧಿಸಿದರು. ಇದರ ನಂತರ ಅವರನ್ನು ಅಧ್ಯಾಪಕ ಹುದ್ದೆಯಿಂದ ಅಮಾನತುಗೊಳಿಸಲಾಯಿತು.

ಈ ವರ್ಷದ ಮಾರ್ಚ್‌ನಲ್ಲಿ ಬಾಂಬೆ ಹೈಕೋರ್ಟ್ ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ಸಾಯಿಬಾಬಾ ಅವರನ್ನು ಖುಲಾಸೆಗೊಳಿಸಿತು. ನಂತರ ಅವರನ್ನು ಮಾರ್ಚ್ 7 ರಂದು ನಾಗ್ಪುರ ಜೈಲಿನಿಂದ ಬಿಡುಗಡೆ ಮಾಡಲಾಯಿತು.

ಮಾಜಿ ಪ್ರಾಧ್ಯಾಪಕರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಬಾಂಬೆ ಹೈಕೋರ್ಟ್​ ಆದೇಶಿಸಿತು. ನ್ಯಾಯಾಲಯ ಅವರಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನೂ ರದ್ದುಗೊಳಿಸಿತು. ಬಳಿಕ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ (UAPA) ನಿಬಂಧನೆಗಳ ಅಡಿಯಲ್ಲಿ ಸಾಯಿಬಾಬಾ ಸೇರಿ ಐವರ ಬಿಡುಗಡೆಗೆ ಕೋರ್ಟ್​ ಸೂಚಿಸಿತ್ತು.

10 ವರ್ಷಗಳ ಕಾಲ ನಾಗ್ಪುರ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದ ಮಾಜಿ ಅಧ್ಯಾಪಕರು, ಪೋಲಿಯೋ ಪೀಡಿತರಾಗಿದ್ದರು. ತಮ್ಮ ದೇಹದ ಎಡಭಾಗವು ಪಾರ್ಶ್ವವಾಯುವಿಗೆ ಒಳಗಾಗಿದ್ದರೂ ಜೈಲು ಅಧಿಕಾರಿಗಳು ಒಂಬತ್ತು ತಿಂಗಳ ಕಾಲ ಆಸ್ಪತ್ರೆಗೂ ಕರೆದೊಯ್ಯಲಿಲ್ಲ. ಜೈಲಿನಲ್ಲಿ ನೋವು ನಿವಾರಕ ಔಷಧವನ್ನು ಮಾತ್ರ ನೀಡಿದರು ಎಂದು ಅವರು 2014 ರಲ್ಲಿ ಆರೋಪಿಸಿದ್ದರು.

ಇದನ್ನೂ ಓದಿ: 'ಬಾಬಾ ಸಿದ್ದಿಕಿ ಕೊಂದಿದ್ದು ನಾವೇ': ಹತ್ಯೆ ಹೊಣೆ ಹೊತ್ತ ಲಾರೆನ್ಸ್​​ ಬಿಷ್ಣೋಯಿ ಗ್ಯಾಂಗ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.