ETV Bharat / bharat

ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಸಹಪಾಠಿಗಳಿಂದ ಕೊಲೆ; ದೆಹಲಿಯಲ್ಲಿ ಭಯಾನಕ ಘಟನೆ - DELHI STUDENT FATALLY STABBED

ದೆಹಲಿಯ ಶಕಾರ್​ಪುರ್​ ಪ್ರದೇಶದಲ್ಲಿ ಸರ್ಕಾರಿ ಶಾಲೆ ಹೊರಗೆ 14 ವರ್ಷದ ವಿದ್ಯಾರ್ಥಿಯನ್ನು ಸಹಪಾಠಿಗಳ ಗುಂಪು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.

delhi-student-fatally-stabbed-outside-school-following-heated-altercation
ಸಾಂದರ್ಭಿಕ ಚಿತ್ರ (IANS)
author img

By PTI

Published : Jan 4, 2025, 12:54 PM IST

ನವದೆಹಲಿ: ಶಾಲೆಗಳಲ್ಲಿ ಸಹಪಾಠಿಗಳೊಂದಿಗೆ ಬೆರೆತು, ಕಲಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾದ ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

ದೆಹಲಿಯ ಶಕಾರ್​ಪುರ್​ ಪ್ರದೇಶದಲ್ಲಿ ಸರ್ಕಾರಿ ಶಾಲೆ ಹೊರಗೆ 14 ವರ್ಷದ ವಿದ್ಯಾರ್ಥಿಯನ್ನು ಸಹಪಾಠಿಗಳ ಗುಂಪು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಶುಕ್ರವಾರ ಮಧ್ಯಾಹ್ನ ವಿದ್ಯಾರ್ಥಿಗಳ ಮಧ್ಯೆ ಶುರುವಾಗಿದ್ದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಸಾವನ್ನಪ್ಪಿದ ಬಾಲಕ ಮತ್ತು ಮತ್ತೊಬ್ಬ ವಿದ್ಯಾರ್ಥಿ ನಡುವೆ ವಾಗ್ವಾದ ಆರಂಭವಾಗಿತ್ತು. ಈ ವೇಳೆ ಮೂರ್ನಾಲ್ಕು ವಿದ್ಯಾರ್ಥಿಗಳು ಶಾಲಾ ಗೇಟ್​ ಹೊರಗೆ ಸಂತ್ರಸ್ತ ಬಾಲಕನನ್ನು ಗುರಿಯಾಗಿಸಿ ಜಗಳ ಆರಂಭಿಸಿದ್ದು, ಇದರಲ್ಲಿ ಒಬ್ಬಾತ ಬಾಲಕನ ಬಲಗಾಲಿನ ತೊಡೆಗೆ ಬಲವಾಗಿ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ಬಾಲಕನಿಗೆ ಗಂಭೀರ ಗಾಯವಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದರು.

ಶಕಾರ್ಪುರ್​ ಪೊಲೀಸ್​​ ಠಾಣೆ ಅಧಿಕಾರಿಗಳು ಹಾಗೂ ಮಾದಕ ದ್ರವ್ಯ ವಿರೋಧಿ ಪಡೆ ಹಾಗೂ ವಿಶೇಷ ಸಿಬ್ಬಂದಿಗಳು ತಪ್ಪು ಎಸಗಿದ ಬಾಲಾಪರಾಧಿಗಳನ್ನು ವಶಕ್ಕೆ ಪಡೆಯಲು ಆಗಮಿಸಿದ್ದರು. ಘಟನೆ ಸಂಬಂಧ ಏಳು ಅನುಮಾನಾಸ್ಪದ ವಿದ್ಯಾರ್ಥಿಗಳ ವಶಕ್ಕೆ ಪಡೆದಿದ್ದು, ಪ್ರಕರಣದ ತನಿಖೆ ನಡೆಸಿದ ಬಳಿಕ ಘಟನೆಯಲ್ಲಿ ಅವರ ಪಾತ್ರ ಮತ್ತು ಘಟನೆಗೆ ಕಾರಣ ತಿಳಿಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಮೃತ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಸಂಧ್ಯಾ ಥಿಯೇಟರ್​ ಪ್ರಕರಣ: ನಟ ಅಲ್ಲು ಅರ್ಜುನ್​​ಗೆ ಜಾಮೀನು ಮಂಜೂರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.