ETV Bharat / bharat

ರಾಮರಾಜ್ಯ ತತ್ವದಡಿ ಕೆಲಸ ಮಾಡುತ್ತಿದೆ ದೆಹಲಿ ಸರ್ಕಾರ: ಸಿಎಂ ಕೇಜ್ರಿವಾಲ್ - ರಾಮರಾಜ್ಯದಿಂದ ಸ್ಫೂರ್ತಿ

ದೆಹಲಿ ಸರ್ಕಾರವು ರಾಮರಾಜ್ಯದ ಪರಿಕಲ್ಪನೆಯ ಅಡಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

Delhi govt provides good health, education, free water supply: Kejriwal

author img

By PTI

Published : Jan 25, 2024, 2:06 PM IST

ನವದೆಹಲಿ: ರಾಮರಾಜ್ಯದಿಂದ ಸ್ಫೂರ್ತಿ ಪಡೆದ ದೆಹಲಿ ಸರಕಾರವು ಉತ್ತಮ ಶಿಕ್ಷಣ ಮತ್ತು ಆರೋಗ್ಯ, ಹಿರಿಯ ನಾಗರಿಕರಿಗೆ ಪಿಂಚಣಿ, ದಿನದ 24 ಗಂಟೆಯೂ ವಿದ್ಯುತ್ ಮತ್ತು ಉಚಿತ ನೀರು ಪೂರೈಕೆ ಸೇವೆಗಳನ್ನು ಒದಗಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ. ಭಗವಾನ್ ರಾಮ ಎಂದಿಗೂ ಜಾತಿ ಮತ್ತು ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡಲಿಲ್ಲ. ಆದರೆ ಇಂದು ಸಮಾಜ ಜಾತಿ ಮತ್ತು ಧರ್ಮದ ಆಧಾರದ ಮೇಲೆ ವಿಭಜಿಸಲ್ಪಟ್ಟಿದೆ ಎಂದು ಕೇಜ್ರಿವಾಲ್ ಹೇಳಿದರು. ಛತ್ರಸಾಲ್ ಕ್ರೀಡಾಂಗಣದಲ್ಲಿ ದೆಹಲಿ ಸರ್ಕಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಮಾತನಾಡಿದರು.

ರಾಮರಾಜ್ಯದಿಂದ ಸ್ಫೂರ್ತಿ ಪಡೆದು ಆಡಳಿತ ನಡೆಸುವುದು ನಿರಂತರ ವಿದ್ಯುತ್ ಪೂರೈಕೆಯನ್ನು ಸಹ ಒಳಗೊಂಡಿದೆ. ವಯಸ್ಸಾದವರನ್ನು ಗೌರವಿಸುವುದು ಕೂಡ ರಾಮರಾಜ್ಯವಾಗಿರುವುದರಿಂದ ಅವರ ಪಿಂಚಣಿಯನ್ನು ಹೆಚ್ಚಿಸುವ ಮತ್ತು ಅವರಿಗೆ ಉಚಿತ ತೀರ್ಥಯಾತ್ರೆಗಳನ್ನು ವ್ಯವಸ್ಥೆ ಮಾಡುವ ಮೂಲಕ ನಾವು ಅವರನ್ನು ಗೌರವಿಸುತ್ತಿದ್ದೇವೆ. ನಾವು ಅಧಿಕಾರಕ್ಕೆ ಬಂದಾಗಿನಿಂದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಉಚಿತ ನೀರು ಸರಬರಾಜು ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ದೆಹಲಿ ಸರ್ಕಾರ ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿದೆ. ದೆಹಲಿ ಪೊಲೀಸರು ನಮ್ಮ ಸರ್ಕಾರದ ವ್ಯಾಪ್ತಿಗೆ ಬರದಿದ್ದರೂ ಆಮ್ ಆದ್ಮಿ ಪಕ್ಷ (ಎಎಪಿ) ಈ ವಿಷಯದಲ್ಲಿ ತನ್ನ ಪ್ರಯತ್ನ ಮಾಡುತ್ತದೆ ಎಂದು ತಿಳಿಸಿದರು. ಅಯೋಧ್ಯೆಯಲ್ಲಿ ಭಗವಾನ್ ರಾಮನ ಪ್ರತಿಷ್ಠಾಪನೆಯ ಬಗ್ಗೆ ಮಾತನಾಡಿದ ಕೇಜ್ರಿವಾಲ್, ಇದು ದೇಶ ಮತ್ತು ಜಗತ್ತಿಗೆ ಹೆಮ್ಮೆಯ ವಿಷಯವಾಗಿದೆ. ಜನರು ಭಗವಾನ್ ರಾಮನ ಜೀವನ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷ ದಾಳಿ ನಡೆಸಿದ ಕೇಜ್ರಿವಾಲ್, ಆರ್ಥಿಕ ಲಾಭವು ದೇಶದ ಎಲ್ಲಾ ಬಡ ಜನರನ್ನು ತಲುಪಿದಾಗ ಮಾತ್ರ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದುವ ಗುರಿ ಸಾಧಿಸಲು ಸಾಧ್ಯ. ಆದರೆ ಯಾರೋ ಒಂದಿಬ್ಬರ ಬಳಿಯಲ್ಲಿ ಮಾತ್ರ 4 ಟ್ರಿಲಿಯನ್ ಸಂಪತ್ತು ಉಳಿದರೆ ದೇಶ ಬಡವಾಗಿಯೇ ಉಳಿಯುತ್ತದೆ ಎಂದರು.

ಕಳೆದ 75 ವರ್ಷಗಳಲ್ಲಿ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗಿದ್ದಾರೆ ಮತ್ತು ಬಡವರು ಇನ್ನಷ್ಟು ಬಡವರಾಗಿದ್ದಾರೆ. ಹಣದುಬ್ಬರ ಕಡಿಮೆ ಮಾಡುವುದು ನಮ್ಮ 'ರಾಮರಾಜ್ಯ' ಪರಿಕಲ್ಪನೆಯ ಭಾಗವಾಗಿದೆ. ಕೇಂದ್ರ ಸರ್ಕಾರದ ವರದಿಗಳ ಪ್ರಕಾರ ದೆಹಲಿಯಲ್ಲಿ ಬೆಲೆ ಏರಿಕೆ ಅತ್ಯಂತ ಕನಿಷ್ಠವಾಗಿದೆ. ಜನರು ಬೆಲೆ ಏರಿಕೆಯಿಂದ ಬಳಲುತ್ತಿದ್ದರೆ ನಾವು ಅದನ್ನು ರಾಮರಾಜ್ಯ ಎಂದು ಹೇಳಲು ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ನುಡಿದರು.

ಇದನ್ನೂ ಓದಿ: ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಯಾಗಿ ಪ್ರಸನ್ನ ವರಾಳೆ ಪ್ರಮಾಣ ವಚನ ಸ್ವೀಕಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.