ETV Bharat / bharat

ಫೆ.17ರಂದು ನ್ಯಾಯಾಲಯಕ್ಕೆ ಹಾಜರಾಗಿ: ದೆಹಲಿ ಸಿಎಂ ಕೇಜ್ರಿವಾಲ್​ಗೆ ಸಮನ್ಸ್​

ಜಾರಿ ನಿರ್ದೇಶನಾಲಯ ಸಲ್ಲಿಸಿದ ದೂರು ಅರ್ಜಿಯ ಹಿನ್ನೆಲೆಯಲ್ಲಿ ಫೆ.17 ರಂದು ತನ್ನ ಮುಂದೆ ಹಾಜರಾಗುವಂತೆ ಸಿಎಂ ಅರವಿಂದ ಕೇಜ್ರಿವಾಲ್​ರಿಗೆ ದೆಹಲಿ ನ್ಯಾಯಾಲಯ ಸೂಚಿಸಿದೆ.

Excise policy case: Court asks Kejriwal to appear on February 17 on ED's plea

author img

By PTI

Published : Feb 7, 2024, 6:33 PM IST

ನವದೆಹಲಿ: ಫೆ.17ರಂದು ತನ್ನ ಮುಂದೆ ಹಾಜರಾಗುವಂತೆ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಸಮನ್ಸ್ ಜಾರಿಗೊಳಿಸಿದೆ. ದೆಹಲಿ ಸರಕಾರದ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ತಾನು ನೀಡಿರುವ ಸಮನ್ಸ್​ಗಳಿಗೆ ಸ್ಪಂದಿಸುತ್ತಿಲ್ಲ ಎಂದು ಜಾರಿ ನಿರ್ದೇಶನಾಲಯ ಸಲ್ಲಿಸಿದ ದೂರಿನ ಮೇರೆಗೆ ನ್ಯಾಯಾಲಯ ಈ ಸಮನ್ಸ್​ ಜಾರಿ ಮಾಡಿದೆ.

ದೂರನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಫೆಬ್ರವರಿ 17ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದಿವ್ಯಾ ಮಲ್ಹೋತ್ರಾ ತಿಳಿಸಿದ್ದಾರೆ. ಈ ವಿಷಯದಲ್ಲಿ ತನ್ನ ವಾದಗಳನ್ನು ಮುಕ್ತಾಯಗೊಳಿಸಲಾಗಿದೆ ಎಂದು ಇಡಿ ಹೇಳಿದ ನಂತರ ನ್ಯಾಯಾಧೀಶರು ಆದೇಶವನ್ನು ಕಾಯ್ದಿರಿಸಿದ್ದರು.

ತನ್ನ ಸಮನ್ಸ್ ಪಾಲಿಸದ ಕಾರಣ ಜಾರಿ ನಿರ್ದೇಶನಾಲಯ ಫೆಬ್ರವರಿ 3 ರಂದು ಕೇಜ್ರಿವಾಲ್ ವಿರುದ್ಧ ಹೊಸ ದೂರು ಪ್ರಕರಣವನ್ನು ದಾಖಲಿಸಿತ್ತು. ಜಾರಿ ನಿರ್ದೇಶನಾಲಯ ಹೊರಡಿಸಿದ ಐದನೇ ಸಮನ್ಸ್ ಅನ್ನು ಕೂಡ ಕೇಜ್ರಿವಾಲ್ ಶುಕ್ರವಾರ ತಪ್ಪಿಸಿಕೊಂಡಿದ್ದಾರೆ. ಕಳೆದ ಬುಧವಾರ ಇಡಿ ಅವರಿಗೆ ಸಮನ್ಸ್ ಜಾರಿ ಮಾಡಿತ್ತು.

ಆಮ್ ಆದ್ಮಿ ಪಕ್ಷದ ಸಂಚಾಲಕರೂ ಆಗಿರುವ ಕೇಜ್ರಿವಾಲ್, ಈ ಹಿಂದೆ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದು, ಸಮನ್ಸ್ ಅನ್ನು ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ ಎಂದು ಬಣ್ಣಿಸಿದ್ದರು. ಚುನಾವಣೆಯಲ್ಲಿ ಪ್ರಚಾರ ಮಾಡದಂತೆ ತಡೆಯುವ ಉದ್ದೇಶದಿಂದ ಈ ಸಮನ್ಸ್ ನೀಡಲಾಗಿದೆ ಎಂದು ಅವರು ಆರೋಪಿಸಿದ್ದರು.

ನ್ಯಾಯಾಲಯದ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ, "ಕೇಜ್ರಿವಾಲ್ ನಂ.1 ಸುಳ್ಳುಗಾರನಾಗಿದ್ದಾರೆ. ಸಮನ್ಸ್ ಕಾನೂನುಬಾಹಿರ ಎಂದಿದ್ದ ಅವರಿಗೆ ಈಗ ನ್ಯಾಯಾಲಯವೇ ಸಮನ್ಸ್ ನೀಡಿರುವುದರಿಂದ ಅವರ ಸುಳ್ಳು ಬಹಿರಂಗವಾಗಿದೆ. ಸತ್ಯಮೇವ ಜಯತೆ" ಎಂದು ಹೇಳಿದರು.

ಕೇಜ್ರಿವಾಲ್ ಅವರು ರೋಸ್​ ಅವೆನ್ಯೂ ನ್ಯಾಯಾಲಯದ ಆದೇಶವನ್ನು ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಅಥವಾ ನ್ಯಾಯಾಲಯದಲ್ಲಿ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ಪಡೆದು ವಕೀಲರ ಮೂಲಕ ಹಾಜರಾಗಬಹುದು. ಏಳು ಎಎಪಿ ಶಾಸಕರನ್ನು ಬಿಜೆಪಿ ಖರೀದಿಸಲು ಪ್ರಯತ್ನಿಸಿದೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಕೇಜ್ರಿವಾಲ್ ದೆಹಲಿ ಅಪರಾಧ ವಿಭಾಗದ ಬಿಸಿಯನ್ನು ಎದುರಿಸುತ್ತಿರುವ ಮಧ್ಯೆ ಅವರಿಗೆ ಮತ್ತೊಂದು ಹಿನ್ನಡೆಯುಂಟಾಗಿದೆ. ಮದ್ಯ ಹಗರಣದ ಹೊರತಾಗಿ ದೆಹಲಿ ಜಲ ಮಂಡಳಿಯ ಪ್ರಕರಣವನ್ನೂ ಇಡಿ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ವಿಪಕ್ಷದಲ್ಲಿರುವಂತೆ ಮಾತನಾಡುತ್ತಿರುವುದೇಕೆ?: ತಮಿಳುನಾಡು ಸಿಎಂ ಸ್ಟಾಲಿನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.