ETV Bharat / bharat

ದೆಹಲಿ ವಾಯು ಗುಣಮಟ್ಟ ತೀವ್ರ ಕಳಪೆ; ನಗರಕ್ಕೆ ದಟ್ಟ ಮಂಜಿನ ಹೊದಿಕೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಟ್ಟ ಮಂಜು ಆವರಿಸಿದ್ದು, ವಾಯು ಗುಣಮಟ್ಟ ತೀವ್ರ ಕಳಪೆಯಾಗಿದೆ.

Delhi recorded the worst air quality in the country on Wednesday
ದೆಹಲಿ ವಾಯುಗುಣಮಟ್ಟ ತೀವ್ರ ಕಳಪೆ (ANI)
author img

By ETV Bharat Karnataka Team

Published : Nov 14, 2024, 11:41 AM IST

ನವದೆಹಲಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಪಾರ ಪ್ರಮಾಣದ ಪಟಾಕಿ ಸಿಡಿಸಿರುವುದು ದೆಹಲಿ ವಾಯು ಗುಣಮಟ್ಟ ಕ್ಷೀಣಿಸುವಿಕೆಗೆ ಕಾರಣ ಎನ್ನಲಾಗುತ್ತದೆ. ಆದರೆ, ಹಬ್ಬ ಕಳೆದ ಹಲವು ದಿನಗಳ ಬಳಿಕವೂ ಯಾವುದೇ ಸುಧಾರಣೆ ಕಂಡಿಲ್ಲ. ದಿನದಿಂದ ದಿನಕ್ಕೆ ವಾಯು ಗುಣಮಟ್ಟ ಕಳಪೆಯಾಗುತ್ತಿದ್ದು, ಇಲ್ಲಿನ ನಿವಾಸಿಗಳಿಗೆ ಆರೋಗ್ಯ ಸಮಸ್ಯೆಯ ಭೀತಿ ಎದುರಾಗಿದೆ.

ವಾಯು ಗುಣಮಟ್ಟ ಬುಧವಾರ ತೀವ್ರ ಕಳಪೆಯಾಗಿತ್ತು. ನಗರದೆಲ್ಲೆಡೆ ದಟ್ಟ ಮಂಜು ಮುಸುಕಿದ ವಾತಾವರಣವಿದೆ ಎಂದು ಕೇಂದ್ರೀಯ ಮಾಲಿನ್ಯ ಮಂಡಳಿ ತಿಳಿಸಿದೆ.

ಕೇಂದ್ರೀಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ಯ ಪ್ರಕಾರ, ವಾಯು ಗುಣಮಟ್ಟ ಗುರುವಾರ 8 ಗಂಟೆಯ ಸುಮಾರಿಗೆ ಎಕ್ಯೂಐ 428 ದಾಖಲಾಗಿದೆ. ಪ್ರತಿನಿತ್ಯ ಸಂಜೆ 4 ಗಂಟೆಯ ಸುಮಾರಿಗೆ ಎಕ್ಯೂಐ ದಾಖಲಿಸಲಾಗುತ್ತದೆ. ಬುಧವಾರ ಈ ಸೂಚ್ಯಂಕ 418 ಇದ್ದರೆ, ಇದರ ಹಿಂದಿನ ದಿನ 334 ಇತ್ತು. ಇದು ಅಪಾಯಕಾರಿ ಪರಿಸ್ಥಿತಿಗಳನ್ನು ತಗ್ಗಿಸಲು ಗ್ರೇಡೆಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲಾನ್ (ಜಿಆರ್​ಎಪಿ)ನಡಿ ಕಠಿಣ ನಿರ್ಬಂಧ ಹೇರಿಕೆಗೆ ಕಾರಣವಾಗಬಹುದು.

ವಾಯು ಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಂ)ದ ಪ್ರಕಾರ, ಬಲವಾದ ಗಾಳಿಯಿಂದಾಗಿ ಮಾಲಿನ್ಯಕಾರಕ ಸಾಂದ್ರತೆ ಗುರುವಾರದಿಂದ ಇಳಿಮುಖವಾಗುವ ಪ್ರವೃತ್ತಿ ಗೋಚರಿಸಿದ್ದು, ಇದು ಎಕ್ಯೂಐ ತೀವ್ರ ಕಳಪೆಯಿಂದ ಅತ್ಯಂತ ಕಳಪೆಗೆ ಬರುವ ಸಾಧ್ಯತೆ ಇದೆ.

ನಗರಕ್ಕೆ ದಟ್ಟ ಮಂಜಿನ ಹೊದಿಕೆ: ನಗರಕ್ಕೆ ದಟ್ಟ ಮಂಜು ಆವರಿಸಿದ್ದು, ಈ ಋತುಮಾನದ ದಿನದ ಅತ್ಯಂತ ಕಡಿಮೆ ತಾಪಮಾನ ಬುಧವಾರ ದಾಖಲಾಗಿದೆ. ಇದರಿಂದಾಗಿ ವಾಹನ ಸಂಚಾರಕ್ಕೂ ಅಡ್ಡಿಯಾಗಿದ್ದು, ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟುಮಾಡಿದೆ.

ಇದನ್ನೂ ಓದಿ: ವಯನಾಡ್‌ ಪ್ರವಾಸೋದ್ಯಮ ಉತ್ತೇಜಿಸಲು ಜಿಪ್​ಲೈನ್​ ಸಾಹಸ ನಡೆಸಿದ ರಾಹುಲ್​ ಗಾಂಧಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.