ETV Bharat / bharat

ಮಹಾರಾಷ್ಟ್ರದ ಮನೆಯಲ್ಲಿ ಮೂವರ ಕೊಳೆತ ಶವ ಪತ್ತೆ; ತ್ರಿವಳಿ ಕೊಲೆ ಶಂಕೆ - Suspect triple Murder

author img

By ETV Bharat Karnataka Team

Published : Aug 31, 2024, 10:38 PM IST

ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ತ್ರಿವಳಿ ಕೊಲೆ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿ ಒಂದೇ ಕುಟುಂಬದ ಮೂವರು ಶವವಾಗಿ ಪತ್ತೆಯಾಗಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ.

ವಳಿ ಕೊಲೆ ಶಂಕೆ
ವಳಿ ಕೊಲೆ ಶಂಕೆ (ETV Bharat)

ಪಾಲ್ಘರ್ (ಮಹಾರಾಷ್ಟ್ರ): ಮನೆಯೊಂದರಲ್ಲಿ ಒಂದೇ ಕುಟುಂಬದ ಮೂವರ ಕೊಳೆತ ಶವಗಳು ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಪಾಲ್ಘರ್​ ಜಿಲ್ಲೆಯ ವಾಡ ತಾಲೂಕಿನ ನೆಹರೋಲಿ ಗ್ರಾಮದಲ್ಲಿ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೂವರನ್ನು ಕೊಂದ ನಂತರ ಹಂತಕರು ಮನೆಗೆ ಹೊರಗಿನಿಂದ ಬೀಗ ಹಾಕಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಹಂತಕರು ಮೂವರನ್ನು ಕೊಂದ ಕಾರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪತ್ತೆಯಾದ ಮೂರು ಶವಗಳ ಪೈಕಿ ಮುಕುಂದ್ ಬೇಚಾರ್ದಾಸ್ ರಾಥೋಡ್, ಕಾಂಚನ್ ಮುಕುಂದ್ ರಾಥೋಡ್ ಮತ್ತು ಸಂಗೀತಾ ಮುಕುಂದ್ ರಾಥೋಡ್ ಎಂದು ಗುರುತಿಸಲಾಗಿದೆ.

ರಾಥೋಡ್ ಕುಟುಂಬವು ಮೂಲತಃ ಗುಜರಾತಿನವರಾಗಿದ್ದಾರೆ. ಕಳೆದ 20 ವರ್ಷಗಳಿಂದ ನೆಹ್ರೋಲಿಯಲ್ಲಿ ನೆಲೆಸಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬ ಮಗ ವಸಾಯಿಯಲ್ಲಿ ವಾಸಿಸುತ್ತಿದ್ದರೆ, ಇನ್ನೊಬ್ಬ ಗುಜರಾತ್​​ನ ರಾಜ್‌ಕೋಟ್‌ನಲ್ಲಿದ್ದಾನೆ. ಮುಕುಂದ್ ಬೇಚಾರ್ದಾಸ್ ರಾಥೋಡ್ (75), ಕಾಂಚನ್ ಮುಕುಂದ್ ರಾಥೋಡ್ (70) ಮತ್ತು ಮಗಳು ಸಂಗೀತಾ ಮುಕುಂದ್ ರಾಥೋಡ್ (52) ಅವರ ಕುಟುಂಬವು 20 ವರ್ಷಗಳಿಂದ ನೆಹ್ರೋಲಿ ಗ್ರಾಮದಲ್ಲಿ ವಾಸಿಸುತ್ತಿತ್ತು.

ಮಗಳು ಸಂಗೀತಾ ಅಂಗವಿಕಲರಾಗಿದ್ದರು. ಆಗಸ್ಟ್ 18 ರಿಂದ ಕುಟುಂಬ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ರಾಜ್‌ಕೋಟ್‌ನಲ್ಲಿ ಫ್ಯಾಬ್ರಿಕೇಶನ್ ವ್ಯವಹಾರ ನಡೆಸುತ್ತಿರುವ ಸುಹಾಸ್ ರಾಥೋಡ್​ ಕರೆ ಮಾಡಿದರೂ, ಸ್ವೀಕರಿಸಿದ ಕಾರಣ ಅನುಮಾನ ಬಂದು ಕುಟುಂಬಸ್ಥರು ನೆಹ್ರೋಲಿಗೆ ಬಂದಿದ್ದಾರೆ. ಮನೆಗೆ ಬೀಗ ಹಾಕಲಾಗಿದೆ. ಆದಾಗ್ಯೂ ಬೀಗ ಒಡೆದು ನೋಡಿದಾಗ, ಮುಚ್ಚಿದ ಪೆಟ್ಟಿಗೆಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾದರೆ, ಇನ್ನೊಬ್ಬರದ್ದು ಸ್ನಾನಗೃಹದಲ್ಲಿ ಕಂಡುಬಂದಿದೆ. ಮೃತಪಟ್ಟು 12 ದಿನಗಳಾದ ಕಾರಣ, ದೇಹಗಳು ಕೊಳೆತ ಸ್ಥಿತಿಯಲ್ಲಿದ್ದವು.

ಮಾಹಿತಿ ಪಡೆದ ವಾಡಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆ ನಡೆದು ಹಲವು ದಿನಗಳಾಗಿವೆ. ಮೃತದೇಹದಿಂದ ದುರ್ವಾಸನೆ ಬರುತ್ತಿದೆ. ಇದೊಂದು ತ್ರಿವಳಿ ಕೊಲೆ ಎಂಬ ಬಗ್ಗೆ ಅನುಮಾನಿಸಿದ್ದಾರೆ. ನೆಹ್ರೋಲಿಯ ಸುತ್ತಮುತ್ತಲಿನ ಎಲ್ಲಾ ಆಸ್ಪತ್ರೆಗಳಲ್ಲಿ ಪರಿಶೀಲಿಸಿದಾಗ ಕುಟುಂಬಕ್ಕೆ ಯಾವುದೇ ಅನಾರೋಗ್ಯ ಸಮಸ್ಯೆ ಇರಲಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಸೆ.1 ರಿಂದ 30ರ ವರೆಗೆ ಜಮಾತ್‌–ಇ–ಇಸ್ಲಾಮಿ ಹಿಂದ್‌ ವತಿಯಿಂದ ‘ನೈತಿಕತೆಯೇ ಸ್ವಾತಂತ್ರ್ಯ’ ಅಭಿಯಾನ - Jamaat e Islami Hind campaign

ETV Bharat Logo

Copyright © 2024 Ushodaya Enterprises Pvt. Ltd., All Rights Reserved.