ETV Bharat / bharat

ದಾನಾ ಚಂಡಮಾರುತದ ಅಬ್ಬರ: ಒಡಿಶಾ, ಪಶ್ಚಿಮ ಬಂಗಾಳಕ್ಕೆ ಎನ್​ಡಿಆರ್​ಎಫ್ ಸಿಬ್ಬಂದಿ​, ಪರಿಹಾರ ಸಾಮಗ್ರಿಗಳ ರವಾನೆ - DANA CYCLONE ALERT

ಎನ್​ಡಿಆರ್​ಎಫ್​ ಸಿಬ್ಬಂದಿ ಮತ್ತು ಪರಿಹಾರ ಸಾಮಗ್ರಿಗಳನ್ನು ಹೊತ್ತ ಒನ್​ ಐಎಲ್​ 76 ಮತ್ತು ಎಎನ್​ 32 ಭಟಿಂಡಾದಿಂದ ಇಂದು ಮುಂಜಾನೆ ಭುವನೇಶ್ವರಕ್ಕೆ ಹೊರಟಿತು.

dana-cyclone-alert-indian-air-force-airlifts-ndrf-team-relief-material
ಎನ್​ಡಿಆರ್​ಎಫ್​ ತಂಡ (ANI)
author img

By ANI

Published : Oct 23, 2024, 11:03 AM IST

ಭುವನೇಶ್ವರ, ಒಡಿಶಾ: ಭುವನೇಶ್ವರ ಮತ್ತು ಪಶ್ಚಿಮ ಬಂಗಾಳದ ಕರಾವಳಿಗೆ ದಾನಾ ಚಂಡಮಾರುತ ಅಪ್ಪಳಿಸುವ ಮುನ್ಸೂಚನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಎರಡು 150 ಎನ್​​ಡಿಆರ್​ಎಫ್​ ಸಿಬ್ಬಂದಿ ಮತ್ತು ಪರಿಹಾರ ಸಾಮಗ್ರಿಗಳನ್ನು ಭಾರತೀಯ ವಾಯು ಪಡೆ ಮೂಲಕ ಭುವನೇಶ್ವರಕ್ಕೆ ತಲುಪಿಸಲಾಗಿದೆ ಎಂದು ಐಎಎಫ್​ ಅಧಿಕಾರಿಗಳು ತಿಳಿಸಿದ್ದಾರೆ.

ಎನ್​ಡಿಆರ್​ಎಫ್​ ಸಿಬ್ಬಂದಿ ಮತ್ತು ಪರಿಹಾರ ಸಾಮಗ್ರಿಗಳನ್ನು ಹೊತ್ತ ಒನ್​ ಐಎಲ್​ 76 ಮತ್ತು ಎಎನ್​ 32 ಭಟಿಂಡಾದಿಂದ ಇಂದು ಮುಂಜಾನೆ ಭುವನೇಶ್ವರಕ್ಕೆ ಹೊರಟಿತು.

ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಸೈಕ್ಲೋನ್​ ದಾನಾವೂ ಕೇಂದ್ರಪಾರಾದ ಭಿತರ್ಕಾನಿಕಾ ಮತ್ತು ಒಡಿಶಾ ಕರಾವಳಿಯ ಭದ್ರಕ್ ಅಥವಾ ಬಾಲಸೋರ್ ನಡುವೆ ಭೂಕುಸಿತ ಉಂಟು ಮಾಡುವ ಸಾಧ್ಯತೆ ಇದೆ. ಚಂಡ ಮಾರುತದ ಅತಿಹೆಚ್ಚಿನ ಪರಿಣಾಮವೂ ಬಾಲಸೋರ್, ಭದ್ರಕ್, ಮಯೂರ್‌ಭಂಜ್, ಜಗತ್‌ಸಿಂಗ್‌ಪುರ ಮತ್ತು ಪುರಿ ಜಿಲ್ಲೆಗಳಲ್ಲಿ ಇರಲಿದೆ ಎಂದು ತಿಳಿಸಿದೆ.

ವಾಯುಭಾರ ಕುಸಿತ: ಬಂಗಾಳ ಕೊಲ್ಲಿಯ ಪೂರ್ವ ಕೇಂದ್ರದಲ್ಲಿ ವಾಯುಭಾರ ಕುಸಿತದಿಂದ ಪಶ್ಚಿಮ ವಾಯುವ್ಯದ ಕಡೆಗೆ ಗಂಟೆಗೆ 18 ಕಿ.ಮೀ ವೇಗದಲ್ಲಿ ಗಾಳಿ ಸಾಗಲಿದೆ. ವಾಯುವ್ಯ ಬಂಗಾಳ ಕೊಲ್ಲಿಯಲ್ಲಿ ತೀವ್ರವಾದ ಚಂಡಮಾರುತ ಅಕ್ಟೋಬರ್ 24 ರ ರಾತ್ರಿ ಮತ್ತು ಬೆಳಗ್ಗೆ ಪುರಿ ಮತ್ತು ಸಾಗರ್ ದ್ವೀಪದ ನಡುವೆ ಹಾಗೂ ಒಡಿಶಾದ ಉತ್ತರ ಮತ್ತು ಪಶ್ಚಿಮ ಬಂಗಾಳ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ. ಅಕ್ಟೋಬರ್ 25 ರಂದು ಚಂಡ ಮಾರುತದ ಗಾಳಿಯು ಗಂಟೆಗೆ 100 ರಿಂದ 110 ಕಿಮೀ ವೇಗದಲ್ಲಿ ಬೀಸಲಿದೆ.

Odisha: Indian Air Force airlifts NDRF team, relief material
ದಾನಾ ಚಂಡಮಾರುತದ ಅಬ್ಬರ: ಒಡಿಶಾ, ಪಶ್ಚಿಮ ಬಂಗಾಳಕ್ಕೆ ಎನ್​ಡಿಆರ್​ಎಫ್ ಸಿಬ್ಬಂದಿ​, ಪರಿಹಾರ ಸಾಮಗ್ರಿಗಳ ರವಾನೆ (ETV Bharat)

ವಾಯ ಚಂಡಮಾರುತದ ಪರಿಚಲನೆ ಪೂರ್ವ ಮಧ್ಯ ಅರೇಬಿಯನ್ ಸಮುದ್ರದ ಕೆಳ ಮತ್ತು ಮಧ್ಯಮ ಉಷ್ಣವಲಯದ ಮಟ್ಟದಲ್ಲಿದೆ. ಚಂಡಮಾರುತದ ಮುನ್ನೆಚ್ಚರಿಕೆ ಕ್ರಮವಾಗಿ ಅ. 23 ರಿಂದ 25ರವರೆಗೆ ಕೆಲವು ಪ್ರದೇಶಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ನಿತ್ಯಾನಂದ ಗೋಡ್​ ತಿಳಿಸಿದ್ದಾರೆ.

ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ: ಈ ಕುರಿತು ಒಡಿಶಾ ಶಿಕ್ಷಣ ಸಚಿವರು ಮಾತನಾಡಿ, ವಿದ್ಯಾರ್ಥಿಗಳ ಸುರಕ್ಷತೆ ಹಿನ್ನೆಲೆ ಚಂಡಮಾರುತ ಮುನ್ಸೂಚನೆ ಪ್ರದೇಶದಲ್ಲಿ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾಡಳಿತವೂ ಮುನ್ನೆಚ್ಚರಿಕೆ ಕ್ರಮ ನಡೆಸಿ ಶಾಲೆ ಮುಚ್ಚಲು ತಿಳಿಸಲಾಗಿದೆ. ಇದರ ಜೊತೆಗೆ ಕಾಲೇಜ್​ ಮತ್ತು ಯುನಿವರ್ಸಿಟಿಗಳಿಗೂ ಮೂರು ದಿನ ರಜೆ ನೀಡಲು ಸೂಚನೆ ನೀಡಲಾಗಿದೆ ಸಾರ್ವಜನಿಕರ ಸುರಕ್ಷತೆ ಭದ್ರಪಡಿಸಿಕೊಳ್ಳಲು ಸರ್ಕಾರ ಎಲ್ಲ ಪ್ರಮುಖ ಕ್ರಮ ಕೈಗೊಳ್ಳಲಿದೆ ಎಂದರು.

ಚಂಡಮಾರುತದ ಪರಿಣಾಮವಾಗಿ ಒಡಿಶಾ ಮತ್ತು ಗಂಗಾನದಿ ತೀರದ ಪಶ್ಚಿಮ ಬಂಗಾಳದಲ್ಲಿ ಅಕ್ಟೋಬರ್​ 23 ರಿಂದ 26ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಜನರ ಸುರಕ್ಷತೆ ಮತ್ತು ರಕ್ಷಣೆಗಾಗಿ ಸೇನಾ, ನೌಕ ಮತ್ತು ಕೋಸ್ಟ್​ ಗಾರ್ಡ್​ಗಳು ಹಾಗೂ ಬೋಟ್​ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ಲಾರೆನ್ಸ್​​ ಬಿಷ್ಣೋಯಿಗೆ ಬಂತು ಚುನಾವಣಾ ಆಫರ್​: ಈ ಪಕ್ಷದಿಂದ ಸ್ಪರ್ಧೆಗೆ ಪ್ರಸ್ತಾಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.