ರಾಂಚಿ(ಜಾರ್ಖಂಡ್): ಕುಖ್ಯಾತ ನಕ್ಸಲರ ಕಮಾಂಡರ್ ರವೀಂದ್ರ ಗಂಜು ತಂಡ ರಾಂಚಿಯ ಮೆಕ್ಕ್ಲಸ್ಕಿಗಂಜ್ನಲ್ಲಿ ಕೇಬಲ್ ಹಾಕುವ ಕೆಲಸ ಮಾಡುತ್ತಿದ್ದ ಕಂಪನಿಯ ಕಂಟೈನರ್ಗೆ ಬೆಂಕಿ ಹಚ್ಚಿದ್ದಾರೆ. ಈ ಘಟನೆಯಲ್ಲಿ ಕಂಟೈನರ್ನಲ್ಲಿದ್ದ ಗುಮಾಸ್ತ (ಅಟೆಂಡರ್) ಸಜೀವ ದಹನವಾಗಿದ್ದಾರೆ. ಮಂಗಳವಾರ ತಡರಾತ್ರಿ ನಕ್ಸಲರು ಈ ಕೃತ್ಯ ಎಸಗಿದ್ದಾರೆ ಎಂದು ಖಲಾರಿ ಡಿಎಸ್ಪಿ ರಾಮನಾರಾಯಣ ಚೌಧರಿ ತಿಳಿಸಿದ್ದಾರೆ.
ಬೈಕ್ನಲ್ಲಿ ಬಂದು ಥಳಿಸಿ ಬೆಂಕಿ ಹಚ್ಚಿದ ನಕ್ಸಲರು: ಮಾಹಿತಿಯ ಪ್ರಕಾರ, ಎಸ್ಐಪಿಎಲ್ ಹೆಸರಿನ ಕಂಪನಿಯು ಮೆಕ್ಕ್ಲಸ್ಕಿಗಂಜ್ ಪ್ರದೇಶದಲ್ಲಿ ಬಿಎಸ್ಎನ್ಎಲ್ನ ಕೇಬಲಿಂಗ್ ಕೆಲಸ ಮಾಡುತ್ತಿದೆ. ಮಂಗಳವಾರ ತಡರಾತ್ರಿಯೂ ಕಾರ್ಮಿಕರು ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಸುಮಾರು 12 ಜನ ಶಸ್ತ್ರಧಾರಿ ನಕ್ಸಲರು ಬೈಕ್ಗಳಲ್ಲಿ ಬಂದು ಕಾರ್ಮಿಕರನ್ನು ಥಳಿಸಿದ್ದಾರೆ.
''ಸಂಘಟನೆಯಿಂದ ಸೂಚನೆ ಬರುವವರೆಗೆ ಕೆಲಸ ಮಾಡಬಾರದು'' ಎಂದು ಕಾರ್ಮಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಇದಾದ ನಂತರ ಅವರು ಕಂಟೇನರ್ ಅನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ನಕ್ಸಲೀಯರು ಬಂದಿರುವ ಬಗ್ಗೆ ಮಾಹಿತಿ ಗೊತ್ತಾಗದೆ ಕಂಟೈನರ್ ಮೇಲ್ಛಾವಣಿಯಲ್ಲಿ ಅಟೆಂಡರ್ ಮಲಗಿದ್ದನು. ಈ ವೇಳೆ ನಕ್ಸಲರು ಕಂಟೇನರ್ಗೆ ಬೆಂಕಿ ಹಚ್ಚಿದ್ದು ಆತ ಸಜೀವ ದಹನವಾಗಿದ್ದಾನೆ.
ಇದನ್ನೂ ಓದಿ: ಈಶಾನ್ಯ ರಾಜ್ಯಗಳಲ್ಲೂ ರೆಮಲ್ ಅಬ್ಬರ, ತ್ರಿಪುರಾದಲ್ಲಿ 27 ಸಾವು; 250ಕ್ಕೂ ಹೆಚ್ಚು ಕುಟುಂಬಗಳಿಗೆ ಸಂಕಷ್ಟ - Cyclone Remal