ETV Bharat / bharat

'ಒಂದು ರಾಷ್ಟ್ರ, ಒಂದು ಚುನಾವಣೆ' ವಿರುದ್ಧ ಬೆಂಬಲ ಕ್ರೋಢೀಕರಿಸುತ್ತಿರುವ ಕಾಂಗ್ರೆಸ್​ - one nation one election - ONE NATION ONE ELECTION

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುವ ಕೇಂದ್ರದ 'ಒಂದು ರಾಷ್ಟ್ರ, ಒಂದು ಚುನಾವಣೆ' ಮಸೂದೆಯ ವಿರುದ್ಧ ಕಾಂಗ್ರೆಸ್ ತನ್ನ ನಿಲುವನ್ನು ದೃಢಪಡಿಸುತ್ತಿದೆ ಮತ್ತು ಬೆಂಬಲ ಕ್ರೋಢೀಕರಿಸುತ್ತಿದೆ. 543 ಸಂಖ್ಯಾಬಲದ ಲೋಕಸಭೆಯಲ್ಲಿ ಎನ್​ಡಿಎ ಕೇವಲ 293 ಸದಸ್ಯರನ್ನು ಹೊಂದಿದೆ. ಆದರೆ ಸಾಂವಿಧಾನಿಕ ತಿದ್ದುಪಡಿ ಮಾಡಲು 362 ಸದಸ್ಯರ ಮತಗಳು ಅಗತ್ಯವಿದೆ.

ಕಾಂಗ್ರೆಸ್​
ಕಾಂಗ್ರೆಸ್​ (ANI)
author img

By ETV Bharat Karnataka Team

Published : Sep 20, 2024, 10:54 PM IST

ನವದೆಹಲಿ: ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುವ ಕೇಂದ್ರದ 'ಒಂದು ರಾಷ್ಟ್ರ, ಒಂದು ಚುನಾವಣೆ' ಮಸೂದೆಯ ವಿರುದ್ಧ ಕಾಂಗ್ರೆಸ್ ತನ್ನ ನಿಲುವು ದೃಢಪಡಿಸುತ್ತಿದೆ ಮತ್ತು ಬೆಂಬಲ ಕ್ರೋಢೀಕರಿಸುತ್ತಿದೆ.

ಕಾಂಗ್ರೆಸ್ ಮೂಲಗಳ ಪ್ರಕಾರ, ಎನ್‌ಡಿಎ ಲೋಕಸಭೆಯಲ್ಲಿ ಅಗತ್ಯ ಸಂಖ್ಯೆ ಬಲ ಹೊಂದಿಲ್ಲ. ಅಲ್ಲಿ 'ಒಂದು ರಾಷ್ಟ್ರ, ಒಂದು ಚುನಾವಣೆ' ಯೋಜನೆಯನ್ನು ಜಾರಿಗೆ ಸಾಂವಿಧಾನಿಕ ತಿದ್ದುಪಡಿ ಮಂಡಿಸಲು ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. 543 ಸಂಖ್ಯಾಬಲದ ಲೋಕಸಭೆಯಲ್ಲಿ ಎನ್​ಡಿಎ ಕೇವಲ 293 ಸದಸ್ಯರನ್ನು ಹೊಂದಿದೆ. ಆದರೆ, ಸಾಂವಿಧಾನಿಕ ತಿದ್ದುಪಡಿ ಮಾಡಲು 362 ಸದಸ್ಯರ ಮತಗಳು ಅಗತ್ಯವಿದೆ.

"ಲೋಕಸಭೆಯಲ್ಲಿ ಎನ್‌ಡಿಎಗೆ ಸಂಖ್ಯಾಬಲ ಇಲ್ಲ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ, ಚಳಿಗಾಲದ ಅಧಿವೇಶನದಲ್ಲಿ ಸರ್ಕಾರವು ಇಂತಹ ಯಾವುದೇ ಮಸೂದೆಯನ್ನು ತಂದರೆ ಅದು ತೀವ್ರ ವಿರೋಧ ಎದುರಿಸಬೇಕಾಗುತ್ತದೆ. ಈ ವಿಷಯದ ಕುರಿತು ನಾವು ಸದನದಲ್ಲಿ ಇಂಡಿಯಾ ಮೈತ್ರಿ ಪಕ್ಷಗಳ ಬೆಂಬಲ ಕ್ರೋಢೀಕರಿಸುತ್ತೇವೆ. ಇದು ಅಪ್ರಾಯೋಗಿಕ ಕಲ್ಪನೆ ಎಂದು ನಾವು ನಂಬುತ್ತೇವೆ" ಎಂದು ಲೋಕಸಭೆ ಸಂಸದೆ ಪ್ರಣಿತಿ ಶಿಂಧೆ ಈಟಿವಿ ಭಾರತ್‌ಗೆ ತಿಳಿಸಿದರು.

ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ: “ಚುನಾವಣೆ ಬಂದಾಗಲೆಲ್ಲ ಅವರು ಈ ರೀತಿಯ ವಿಚಾರಗಳನ್ನು ಪ್ರಸ್ತುತಪಡಿಸುತ್ತಾರೆ. ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ಅಸೆಂಬ್ಲಿ ಚುನಾವಣೆಗಳನ್ನು ಒಟ್ಟಿಗೆ ಏಕೆ ನಡೆಸಲಾಗಲಿಲ್ಲ?. ಇದೆಲ್ಲವೂ ಉದ್ಯೋಗಗಳು ಮತ್ತು ಹೆಚ್ಚಿನ ಬೆಲೆಗಳ ಸಮಸ್ಯೆಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದಾಗಿದೆ" ಎಂದು ಎಐಸಿಸಿ ಕಾರ್ಯಾಧ್ಯಕ್ಷ ಅಜೋಯ್ ಕುಮಾರ್ ಹೇಳಿದರು.

'ಒಂದು ರಾಷ್ಟ್ರ, ಒಂದು ಚುನಾವಣೆ' ವರದಿಯನ್ನು ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ ಮತ್ತು ಸಂವಿಧಾನದ ತಿದ್ದುಪಡಿಗೆ ಸಂಸತ್ತಿನ ಎರಡೂ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಕಾಂಗ್ರೆಸ್​ ಮಾತ್ರವಲ್ಲದೇ ಹಲವಾರು ಮಿತ್ರಪಕ್ಷಗಳು ಮತ್ತು ಇತರ ಪ್ರಾದೇಶಿಕ ಪಕ್ಷಗಳು ಸಹ ಕೇಂದ್ರದ ಈ ಯೋಜನೆಗೆ ವಿರುದ್ಧವಾಗಿವೆ ಎಂದು ಕಾಂಗ್ರೆಸ್​ನ ನಾಯಕರು ತಿಳಿಸಿದ್ದಾರೆ.

ಒಕ್ಕೂಟ ವ್ಯವಸ್ಥೆ ಮೇಲಿನ ದಾಳಿ: ಕಳೆದ ಕೆಲವು ದಿನಗಳಿಂದ, ಕಾಂಗ್ರೆಸ್ ಮಿತ್ರಪಕ್ಷಗಳಾದ ಎಸ್‌ಪಿ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಶರದ್ ಪವಾರ್ ಬಣ), ಆರ್‌ಜೆಡಿ 'ಒಂದು ರಾಷ್ಟ್ರ, ಒಂದು ಚುನಾವಣೆ' ಯೋಜನೆ ಬಿಜೆಪಿ ಪಿತೂರಿ ಎಂದು ಬಹಿರಂಗವಾಗಿಯೇ ಹೇಳಿವೆ. ದೇಶದಲ್ಲಿ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ಕೇಂದ್ರದ ಕ್ರಮವನ್ನು ಎಎಪಿ ಖಂಡಿಸಿದೆ. ಆಡಳಿತ ಪಕ್ಷವು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಬಯಸಿದೆ ಎಂದು ಟೀಕಿಸಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಇದನ್ನು ಒಕ್ಕೂಟ ವ್ಯವಸ್ಥೆ ಮೇಲಿನ ದಾಳಿ ಎಂದು ಬಣ್ಣಿಸಿದ್ದಾರೆ.

1952 ರಲ್ಲಿ ಇಡೀ ದೇಶದಲ್ಲಿ ಚುನಾವಣೆಗಳು ಒಟ್ಟಿಗೆ ನಡೆದವು. ಆದರೆ, ನಂತರದಲ್ಲಿ ರಾಜ್ಯ ಸರ್ಕಾರಗಳು ಉರುಳಿ ರಾಷ್ಟ್ರಪತಿ ಆಡಳಿತವನ್ನು ಹೇರಿದ್ದರಿಂದ ಅದು ಮುಂದುವರೆಯಲು ಸಾಧ್ಯವಾಗಲಿಲ್ಲ ಎಂದು ಪ್ರತಿಪಕ್ಷಗಳು ಜನರಿಗೆ ತಿಳಿಸುತ್ತಿವೆ. ಈ ಹಿನ್ನೆಲೆಯಲ್ಲಿ, ಭವಿಷ್ಯದಲ್ಲಿಯೂ ಇಂತಹ ಪರಿಸ್ಥಿತಿ ಮರಳುವುದಿಲ್ಲ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ.

‘ಒಂದು ರಾಷ್ಟ್ರ, ಒಂದು ಚುನಾವಣೆ’ ಕಲ್ಪನೆಯ ವಿರುದ್ಧದ ಎರಡನೇ ಅಂಶವೆಂದರೆ ಅದು ಹಣ ಉಳಿಸಲು ಸಹಾಯ ಮಾಡುವುದಿಲ್ಲ.

ಸರ್ಕಾರವು ಹಣವನ್ನು ಉಳಿಸಲು ತುಂಬಾ ಉತ್ಸುಕವಾಗಿದ್ದರೆ, ದೊಡ್ಡ ಕಾರ್ಪೊರೇಟ್​ಗಳಿಗೆ ಸಾವಿರಾರು ಕೋಟಿ ರೂಪಾಯಿಗಳ ತೆರಿಗೆ ವಿನಾಯಿತಿ ನೀಡುವಾಗ ಎರಡು ಬಾರಿ ಏಕೆ ಯೋಚಿಸುವುದಿಲ್ಲ ಎಂದು ಕಾಂಗ್ರೆಸ್​ ಪ್ರಶ್ನಿಸಿದೆ.

ಇದನ್ನೂ ಓದಿ: ಅ.27ರಂದು ನಟ ವಿಜಯ್​ ಟಿವಿಕೆ ಪಕ್ಷದ ಮೊದಲ ರಾಜ್ಯ ಸಮ್ಮೇಳನ: ಸಿದ್ಧಾಂತ, ಪದಾಧಿಕಾರಿಗಳ ಪಟ್ಟಿ ಬಿಡುಗಡೆ - Tamizhaga Vettri Kazhagam

ETV Bharat Logo

Copyright © 2024 Ushodaya Enterprises Pvt. Ltd., All Rights Reserved.