ETV Bharat / bharat

ದೇಶದ ಎಲ್ಲ ಸಮಸ್ಯೆಗಳಿಗೆ ಮೂಲವೇ ಕಾಂಗ್ರೆಸ್‌; ಈ ಚುನಾವಣೆ ಸ್ಥಿರತೆ, ಅಸ್ಥಿರತೆಯ ನಡುವಿನ ಹೋರಾಟ: ಪ್ರಧಾನಿ ಮೋದಿ - PM Modi - PM MODI

ಹಾಗಲಕಾಯಿಯನ್ನು ತುಪ್ಪದಲ್ಲಿ ಹುರಿದರೂ ಅಥವಾ ಸಕ್ಕರೆಯೊಂದಿಗೆ ಬೆರೆಸಿದರೂ ಎಂದಿಗೂ ಅದರ ರುಚಿ ಬದಲಾಗುವುದಿಲ್ಲ. ಹಾಗೆ ಕಾಂಗ್ರೆಸ್​ ಕೂಡ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Congress source of all problems in country, says Modi; takes bitter gourd jibe at rival party
ದೇಶದ ಎಲ್ಲ ಸಮಸ್ಯೆಗಳಿಗೆ ಮೂಲವೇ ಕಾಂಗ್ರೆಸ್‌; ಈ ಚುನಾವಣೆ ಸ್ಥಿರತೆ, ಅಸ್ಥಿರತೆಯ ನಡುವಿನ ಹೋರಾಟ: ಪ್ರಧಾನಿ ಮೋದಿ
author img

By PTI

Published : Apr 9, 2024, 8:18 AM IST

ಚಂದ್ರಾಪುರ (ಮಹಾರಾಷ್ಟ್ರ): ದೇಶವನ್ನು ಕಾಡುತ್ತಿರುವ ಎಲ್ಲ ಸಮಸ್ಯೆಗಳಿಗೆ ಕಾಂಗ್ರೆಸ್ ಪಕ್ಷವೇ ಹೊಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಎಂದು ಆರೋಪಿಸಿದ್ದಾರೆ. ಇದೇ ವೇಳೆ, ಕಾಂಗ್ರೆಸ್​ ಪಕ್ಷವನ್ನು ಹಾಗಲಕಾಯಿಗೆ ಹೋಲಿಸಿರುವ ಪ್ರಧಾನಿ, ಹಾಗಲಕಾಯಿಯನ್ನು ತುಪ್ಪದಲ್ಲಿ ಹುರಿದರೂ ಅಥವಾ ಸಕ್ಕರೆಯೊಂದಿಗೆ ಬೆರೆಸಿದರೂ ಎಂದಿಗೂ ಅದರ ರುಚಿ ಬದಲಾಗುವುದಿಲ್ಲ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ಲೋಕಸಭಾ ಕ್ಷೇತ್ರ ಚಂದ್ರಾಪುರದಲ್ಲಿ ಸೋಮವಾರ ಬಿಜೆಪಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ, ಲೋಕಸಭೆ ಚುನಾವಣೆಯು ಸ್ಥಿರತೆ ಮತ್ತು ಅಸ್ಥಿರತೆಯ ನಡುವಿನ ಹೋರಾಟವಾಗಿದೆ. ಕೇವಲ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಳ್ಳಲು ಪ್ರತಿಪಕ್ಷಗಳು ಅಧಿಕಾರದ ಹಂಬಲದಲ್ಲಿವೆ ಎಂದು ಆರೋಪಿಸಿದರು.

ದೇಶದ ಎಲ್ಲ ಸಮಸ್ಯೆಗಳಿಗೂ ಕಾಂಗ್ರೆಸ್‌ ಪಕ್ಷವೇ ಮೂಲ. ಧರ್ಮದ ಆಧಾರದ ಮೇಲೆ ದೇಶ ವಿಭಜನೆಗೆ ಕಾರಣರಾದವರು ಯಾರು?. ಕಾಶ್ಮೀರ ಸಮಸ್ಯೆ?, ನಕ್ಸಲಿಸಂ?, ರಾಮ ಮಂದಿರ ನಿರ್ಮಾಣವನ್ನು ವಿರೋಧಿಸಿದವರು ಮತ್ತು ರಾಮನ ಅಸ್ತಿತ್ವವನ್ನು ಪ್ರಶ್ನಿಸಿದವರು ಯಾರು?, ರಾಮ ಮಂದಿರದ ಉದ್ಘಾಟನೆ ಆಹ್ವಾನವನ್ನು ಯಾರು ನಿರಾಕರಿಸಿದರು ಎಂದು ಪ್ರಧಾನಿ ಸಭಿಕರನ್ನು ಪ್ರಶ್ನಿಸಿದರು.

ಕಾಂಗ್ರೆಸ್ 10 ವರ್ಷಗಳಿಂದ ಅಧಿಕಾರದಿಂದ ಹೊರಗುಳಿದಿದೆ. ದೇಶವು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ನಾವು ಸಮರ್ಥರಾಗಿದ್ದೇವೆ, ನಕ್ಸಲ್ ಹಾವಳಿ ತೀವ್ರವಾಗಿ ಕಡಿಮೆಯಾಗಿದೆ. ಮತಬ್ಯಾಂಕ್ ರಾಜಕಾರಣಕ್ಕಾಗಿ ಭಯೋತ್ಪಾದನೆ ವಿಚಾರದಲ್ಲಿ ಕಾಂಗ್ರೆಸ್ ಮೃದು ಧೋರಣೆ ತಾಳಿತ್ತು. ಅದರ ಪ್ರಣಾಳಿಕೆಯಲ್ಲಿಯೂ ಮುಸ್ಲಿಂ ಲೀಗ್‌ನ ಚಿಂತನೆ ಇದೆ ಎಂದು ಮೋದಿ ಆರೋಪಿಸಿದರು.

ಇದೇ ವೇಳೆ, ಕಾಂಗ್ರೆಸ್​ಅನ್ನು ಹಾಗಲಕಾಯಿಗೆ ಹೋಲಿಸಿದ ಅವರು, ಸಕ್ಕರೆಯೊಂದಿಗೆ ಬೆರೆಸಿದರೂ ಅಥವಾ ತುಪ್ಪದಲ್ಲಿ ಹುರಿದರೂ ಅದರ ರುಚಿ ಎಂದಿಗೂ ಬದಲಾಗುವುದಿಲ್ಲ ಎಂದು ಕುಟುಕಿದರು. 2024ರ ಚುನಾವಣೆಯನ್ನು ಸ್ಥಿರತೆ ಮತ್ತು ಅಸ್ಥಿರತೆಯ ನಡುವಿನ ಹೋರಾಟವೆಂದು ಪರಿಗಣಿಸಿದ ಪ್ರಧಾನಿ, ಒಂದು ಕಡೆ ಬಿಜೆಪಿ ನೇತೃತ್ವದ ಎನ್‌ಡಿಎ ದೇಶಕ್ಕಾಗಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಗುರಿಯನ್ನು ಹೊಂದಿದೆ. ಇನ್ನೊಂದು ಕಡೆ ಕಾಂಗ್ರೆಸ್ ಮತ್ತು 'ಇಂಡಿಯಾ' ಮೈತ್ರಿಕೂಟ ಇದ್ದು, ಅಧಿಕಾರಕ್ಕೆ ಬಂದ ಮೇಲೆ ತಮ್ಮ ಜೇಬು ತುಂಬಿಸಿಕೊಳ್ಳುವುದು ಒಂದೇ ಉದ್ದೇಶವನ್ನು ಇವರು ಹೊಂದಿದ್ದಾರೆ ಎಂದು ದೂರಿದರು.

ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟವು ಅಸ್ಥಿರತೆಯನ್ನು ಸಂಕೇತಿಸುತ್ತದೆ. ಮಹಾರಾಷ್ಟ್ರಕ್ಕಿಂತ ಉತ್ತಮವಾದ ಯಾರೂ ಸ್ಥಿರ ಸರ್ಕಾರದ ಪ್ರಾಮುಖ್ಯತೆಯನ್ನು ವಿವರಿಸಲು ಸಾಧ್ಯವಿಲ್ಲ. ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಮಹಾರಾಷ್ಟ್ರವನ್ನು ನಿರ್ಲಕ್ಷಿಸಲಾಗಿತ್ತು. ಅಲ್ಲದೇ, ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ರಚಿಸಿದಾಗಲೂ ಅವರು ಕೇವಲ ಹಿತಾಸಕ್ತಿಯನ್ನು ಹೆಚ್ಚಿಸಲು ಮಾತ್ರ ಕೆಲಸ ಮಾಡಿದರು. ಜನರ ಭವಿಷ್ಯದ ಜೊತೆ ಆಟವಾಡಿದರು ಮತ್ತು ಅಭಿವೃದ್ಧಿ ಯೋಜನೆಗಳಿಗೆ 'ಕಮಿಷನ್'ಗಾಗಿ ಕೆಲಸ ಮಾಡಿದರು ಎಂದು ವಾಗ್ದಾಳಿ ನಡೆಸಿದರು.

ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ಸಮುದಾಯಗಳು ಮೋದಿ ಸರ್ಕಾರವನ್ನು ತಮ್ಮ ಸರ್ಕಾರವೆಂದು ಪರಿಗಣಿಸುತ್ತಿವೆ. ದಲಿತರು, ಬುಡಕಟ್ಟುಗಳು ಮತ್ತು ಒಬಿಸಿಗಳೇ ಪ್ರಧಾನಮಂತ್ರಿ ಆವಾಸ್ ಯೋಜನೆ, ಉಜ್ವಲಾ ಯೋಜನೆ, ಉಚಿತ ಪಡಿತರ ಮತ್ತು ಇತರ ಸರ್ಕಾರಿ ಕಲ್ಯಾಣ ಯೋಜನೆಗಳ ಫಲಾನುಭವಿಗಳ ಪ್ರಮುಖ ಭಾಗವಾಗಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಕಾಶ್ಮೀರ ಸಮಸ್ಯೆಯನ್ನು ಸೃಷ್ಟಿಸಿತು. ಕೇಂದ್ರದಲ್ಲಿ ತನ್ನ ಸುದೀರ್ಘ ಆಡಳಿತದಲ್ಲಿ ದೇಶವು ಹಿನ್ನಡೆಗೆ ಜಾರಿತ್ತು. ಭಯೋತ್ಪಾದನೆ ಮತ್ತು ಎಡಪಂಥೀಯ ಉಗ್ರವಾದಕ್ಕೆ ಕಾಂಗ್ರೆಸ್ ಹೊಣೆ. ಅಲ್ಲದೇ, ತನ್ನ ತುಷ್ಟೀಕರಣದ ರಾಜಕೀಯದ ಭಾಗವಾಗಿ ಭಯೋತ್ಪಾದಕರಿಗೆ ರಕ್ಷಣೆ ನೀಡುತ್ತದೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ದಶಕಗಳಿಂದ ಭಾರತ ರತ್ನ ನೀಡಲಿಲ್ಲ. ಕಾಂಗ್ರೆಸ್​ನ ಪಾಲುದಾರ ಪಕ್ಷ ಡಿಎಂಕೆ ಭಾರತವನ್ನು ಮತ್ತೆ ವಿಭಜಿಸುವ ಬೆದರಿಕೆ ಹಾಕುತ್ತಿದೆ. ಸನಾತನ ಧರ್ಮವನ್ನು ಮುಗಿಸುವ ಮತ್ತು ಸನಾತನ ಧರ್ಮವನ್ನು ಮಲೇರಿಯಾ, ಡೆಂಗ್ಯೂಗೆ ಹೋಲಿಸಿ ಮಾತನಾಡುತ್ತಿದೆ ಎಂದು ಟೀಕಿಸಿದರು.

ಇದನ್ನೂ ಓದಿ: ಕರ್ನಾಟಕಕ್ಕೆ ಬರ ಪರಿಹಾರ ವಿಚಾರ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌ - Drought Relief Fund

ETV Bharat Logo

Copyright © 2025 Ushodaya Enterprises Pvt. Ltd., All Rights Reserved.