ETV Bharat / bharat

ಕೇಂದ್ರದ 'ಶ್ವೇತಪತ್ರ'ಕ್ಕೆ ಪ್ರತಿಯಾಗಿ ಕಪ್ಪುಪತ್ರ ಬಿಡುಗಡೆ ಮಾಡಿದ ಕಾಂಗ್ರೆಸ್​

ಕೇಂದ್ರ ಸರ್ಕಾರ ಹೊರಡಿಸಲು ಉದ್ದೇಶಿಸಿರುವ ಶ್ವೇತಪತ್ರಕ್ಕೆ ಪ್ರತಿಯಾಗಿ ಪ್ರತಿಪಕ್ಷ ಕಾಂಗ್ರೆಸ್​​ ಬ್ಲ್ಯಾಕ್​ ಪೇಪರ್​ ಬಿಡುಗಡೆ ಮಾಡಿದೆ.

Congress President Mallikarjun Kharge releases 'Black Paper' against the Modi government
ಕೇಂದ್ರದ 'ಶ್ವೇತಪತ್ರ'ಕ್ಕೆ ಪ್ರತಿಯಾಗಿ ಕಪ್ಪುಪತ್ರ ಬಿಡುಗಡೆ ಮಾಡಿದ ಕಾಂಗ್ರೆಸ್​
author img

By ETV Bharat Karnataka Team

Published : Feb 8, 2024, 11:20 AM IST

Updated : Feb 8, 2024, 1:17 PM IST

ನವದೆಹಲಿ: ಪ್ರಸ್ತುತ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರ 'ಶ್ವೇತಪತ್ರ' ಮಂಡಿಸಲು ಉದ್ದೇಶಿಸಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷವು 'ಕಪ್ಪು ಕಾಗದ'( ಬ್ಲ್ಯಾಕ್ ಪೇಪರ್) ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 10 ವರ್ಷಗಳ ಆಡಳಿತದ ಮೇಲೆ ಕಾಂಗ್ರೆಸ್‌ನ 'ಕಪ್ಪು ಪತ್ರ ' ಹೊರಡಿಸಿದೆ. ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಪ್ಪು ಪತ್ರವನ್ನು ಬಿಡುಗಡೆ ಮಾಡಲಾಗಿದೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ 10 ವರ್ಷಗಳ ಆರ್ಥಿಕ ಸಾಧನೆಯನ್ನು ಬಿಜೆಪಿ ನೇತೃತ್ವದ 10 ವರ್ಷಗಳ ಆರ್ಥಿಕ ಸಾಧನೆಯೊಂದಿಗೆ ಹೋಲಿಸಿ 'ಶ್ವೇತಪತ್ರ' ಹೊರತರುವುದಾಗಿ ಕೇಂದ್ರ ಸರ್ಕಾರ ಫೆಬ್ರವರಿ 1 ರಂದು ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಈ ಹಿಂದೆ ಘೋಷಿಸಿತ್ತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್​ ಬ್ಲ್ಯಾಕ್​ ಪೇಪರ್​ ಬಿಡುಗಡೆ ಮಾಡಿದೆ.

ಕೇಂದ್ರ ಸರ್ಕಾರದ ವಿರುದ್ಧ ಕಪ್ಪುಪತ್ರ ಬಿಡುಗಡೆ ಮಾಡಿ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ, ಬಿಜೆಪಿ ಯಾವತ್ತೂ ಮಾತನಾಡದ ನಿರುದ್ಯೋಗದ ಪ್ರಮುಖ ವಿಷಯವನ್ನು ನಾವು ಎತ್ತುತ್ತಿದ್ದೇವೆ. ಬಿಜೆಪಿಯೇತರ ರಾಜ್ಯಗಳಾದ ಕೇರಳ, ಕರ್ನಾಟಕ, ತೆಲಂಗಾಣದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ಅಪಾಯದಲ್ಲಿದೆ; ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಕಳೆದ 10 ವರ್ಷಗಳಲ್ಲಿ ಬಿಜೆಪಿ 411 ಶಾಸಕರನ್ನು ಬೇರೆ ಬೇರೆ ಪಕ್ಷಗಳಿಂದ ಸೆಳೆದುಕೊಂಡಿದೆ. ಈ ಮೂಲಕ ಅವರು ಹಲವಾರು ಕಾಂಗ್ರೆಸ್ ಸರ್ಕಾರಗಳನ್ನು ಉರುಳಿಸಿದ್ದಾರೆ. ಅವರು ಪ್ರಜಾಪ್ರಭುತ್ವವನ್ನು ಮುಗಿಸುತ್ತಿದ್ದಾರೆ ಎಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಆರೋಪಿಸಿದ್ದಾರೆ.

2024-25ರ ಮಧ್ಯಂತರ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 2014 ರಲ್ಲಿ ಅಧಿಕಾರ ವಹಿಸಿಕೊಂಡ ಮೋದಿ ಸರ್ಕಾರವು ಆ ವರ್ಷಗಳ ಬಿಕ್ಕಟ್ಟನ್ನು ನಿವಾರಿಸಿದೆ ಎಂದು ಹೇಳಿದ್ದರು. ಮತ್ತು ದೇಶದ ಆರ್ಥಿಕತೆಯನ್ನು ಉನ್ನತ ಸುಸ್ಥಿರ ಬೆಳವಣಿಗೆಯ ಹಾದಿಯಲ್ಲಿ ದೃಢವಾಗಿ ಇರಿಸಲಾಗಿದೆ ಎಂದು ಸರ್ಕಾರದ ಸಾಧನೆಯನ್ನು ಬಣ್ಣಿಸಿದ್ದರು.

ಇದೇ ವೇಳೆ, ಸದನದಲ್ಲಿ ಶ್ವೇತಪತ್ರವನ್ನು ಮಂಡಿಸಲಿದ್ದೇವೆ ಎಂದು ಘೋಷಿಸಿದ್ದರು. 2014 ರವರೆಗೆ ದೇಶದ ಆರ್ಥಿಕ ಸ್ಥಿತಿ ಹೇಗಿತ್ತು. ಈಗ ನಾವು ಎಲ್ಲಿದ್ದೇವೆ ಎಂಬುದನ್ನು ದೇಶದ ಜನರಿಗೆ ಹೇಳುವುದು ಈ ಶ್ವೇತಪತ್ರದ ಮಂಡನೆ ಉದ್ದೇಶ ಎಂದು ಸಚಿವರು ವಿವರಿಸಿದ್ದರು. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಇದೀಗ ಬ್ಲ್ಯಾಕ್​ ಪೇಪರ್​ ಬಿಡುಗಡೆ ಮಾಡುವ ಮೂಲಕ ಕೌಂಟರ್​ ಕೊಟ್ಟಿದೆ.

ಇದನ್ನು ಓದಿ:ಭಾರತ ವಿಶ್ವದ ಆರ್ಥಿಕ ಶಕ್ತಿ ಕೇಂದ್ರವಾಗುವ ಹಾದಿಯಲ್ಲಿದೆ: ಪ್ರಧಾನಿ ಮೋದಿ ಬಣ್ಣನೆ

Last Updated : Feb 8, 2024, 1:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.