ETV Bharat / bharat

ವಿಪಕ್ಷಗಳ ಮೈತ್ರಿಕೂಟದ ಮಹತ್ವದ ಸಭೆ; ಕೈ ಜೋಡಿಸಲು ಇತರ ಪಕ್ಷಗಳಿಗೆ ಖರ್ಗೆ ಕರೆ - INDIA Bloc Meeting - INDIA BLOC MEETING

ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿಂದು 'ಇಂಡಿ' ಮೈತ್ರಿಕೂಟದ ನಾಯಕರು ಮಹತ್ವದ ಸಭೆ ನಡೆಸಿದರು. ಸಂವಿಧಾನದ ಮೌಲ್ಯಗಳಿಗೆ ಬದ್ಧತೆ ಹೊಂದಿರುವ ಎಲ್ಲ ಪಕ್ಷಗಳಿಗೆ ಸ್ವಾಗತವಿದೆ ಎಂದು ಖರ್ಗೆ ತಿಳಿಸಿದ್ದಾರೆ.

INDIA bloc leaders hold a meeting at the residence of Congress president Mallikarjun Kharge in Delhi.
ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿಂದು ನಡೆದ ಸಭೆಯಲ್ಲಿ 'ಇಂಡಿಯಾ' ಮೈತ್ರಿಕೂಟದ ನಾಯಕರು ಪಾಲ್ಗೊಂಡರು. (INCIndia)
author img

By ANI

Published : Jun 5, 2024, 9:11 PM IST

ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಷ್ಟ್ರ ರಾಜಕಾರಣದಲ್ಲಿ ರಾಜಕೀಯ ಪಕ್ಷಗಳ ಚಟುವಟಿಕೆಗಳು ಬಿರುಸುಗೊಂಡಿದೆ. ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ತನ್ನ ಎನ್​ಡಿಎ ಮೈತ್ರಿಕೂಟವನ್ನು ಆಶ್ರಯಿಸುವುದು ಅನಿರ್ವಾಯವಾಗಿದೆ. ನಿರೀಕ್ಷೆಯಂತೆ ಬಿಜೆಪಿ ತನ್ನ ಮಿತ್ರಪಕ್ಷಗಳ ಶಕ್ತಿ ಪ್ರದರ್ಶನ ನಡೆಸಿ, ಸರ್ಕಾರ ರಚನೆ ಕರಸತ್ತು ಆರಂಭಿಸಿದೆ. ಮತ್ತೊಂದೆಡೆ, ಎರಡನೇ ಅತಿದೊಡ್ಡ ಪಕ್ಷದ ಸ್ಥಾನ ಪಡೆದಿರುವ ಕಾಂಗ್ರೆಸ್​ ಸಹ ತನ್ನದೇ ರೀತಿಯಲ್ಲಿ ಗುದ್ದುಗೆ ಕರಸತ್ತು ಶುರು ಮಾಡಿದೆ.

ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿಂದು 'ಇಂಡಿ' ಮೈತ್ರಿಕೂಟದ ನಾಯಕರು ಮಹತ್ವದ ಸಭೆ ಸೇರಿದರು. ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಪ್ರಮುಖ ಮಿತ್ರಪಕ್ಷಗಳಾದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್​, ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ, ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್​, ಆರ್​ಜೆಡಿ ನಾಯಕ ತೇಜಸ್ವಿ ಯಾದವ್, ಎನ್​ಸಿಪಿ ನಾಯಕ ಶರದ್​ ಪವಾರ್​, ಶಿವಸೇನೆ ನಾಯಕ ಸಂಜಯ್​ ರಾವುತ್, ಆಮ್​ ಆದ್ಮಿ ಪಕ್ಷದ ಸಂಜಯ್​ ಸಿಂಗ್​, ರಾಘವ್​ ಚಡ್ಡಾ, ಸಿಪಿಎಂ ನಾಯಕರಾದ ಸೀತಾರಂ ಯೆಚೂರಿ, ಸೇರಿದಂತೆ ಭಾಗವಹಿಸಿದ್ದರು.

ಕೈ ಜೋಡಿಸಲು ಇತರ ಪಕ್ಷಗಳಿಗೆ ಖರ್ಗೆ ಕರೆ: ಮೈತ್ರಿಕೂಟದ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್​ ಅಧ್ಯಕ್ಷ ಖರ್ಗೆ, ಈ ಚುನಾವಣೆಯಲ್ಲಿ ಎಲ್ಲ 'ಇಂಡಿಯಾ'ದ ಪಾಲುದಾರ ಪಕ್ಷಗಳು ಉತ್ತಮವಾಗಿ, ಒಗ್ಗಟ್ಟಿನಿಂದ ಮತ್ತು ದೃಢವಾಗಿ ಹೋರಾಡಿವೆ. ಸಂವಿಧಾನದ ಪೀಠಿಕೆಯಲ್ಲಿ ಪ್ರತಿಪಾದಿಸಿರುವ ಮೌಲ್ಯಗಳಿಗೆ ಮೂಲಭೂತ ಬದ್ಧತೆಯನ್ನು ಹೊಂದಿರುವ ಎಲ್ಲ ಪಕ್ಷಗಳನ್ನು 'ಇಂಡಿಯಾ' ಬಣವು ಸ್ವಾಗತಿಸುತ್ತದೆ ಎಂದು ತಿಳಿಸಿದ್ದಾರೆ.

''ಜನಾದೇಶವು ಪ್ರಮುಖವಾಗಿ ಮೋದಿಯವರ ವಿರುದ್ಧವಾಗಿದೆ. ಜೊತೆಗೆ ಮೋದಿ ರಾಜಕೀಯದ ವಸ್ತು ಮತ್ತು ಶೈಲಿಯ ವಿರುದ್ಧವಾಗಿದೆ. ಇದು ಸ್ಪಷ್ಟ ನೈತಿಕ ಸೋಲನ್ನು ಹೊರತುಪಡಿಸಿ ವೈಯಕ್ತಿಕವಾಗಿ ಅವರಿಗೆ ದೊಡ್ಡ ರಾಜಕೀಯ ನಷ್ಟವಾಗಿದೆ. ಆದಾಗ್ಯೂ, ಜನಾದೇಶವನ್ನು ಮೋದಿ ಬುಡಮೇಲು ಮಾಡಲು ಮುಂದಾಗಿದ್ದಾರೆ. ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಪ್ರತಿಪಾದಿಸಲಾದ ಮೌಲ್ಯಗಳಿಗೆ ಮತ್ತು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯಕ್ಕಾಗಿ ತನ್ನ ಮೂಲಭೂತ ಬದ್ಧತೆಯನ್ನು ಹಂಚಿಕೊಳ್ಳುವ ಎಲ್ಲ ಪಕ್ಷಗಳಿಗೆ ಸ್ವಾಗತವಿದೆ'' ಎಂದು ಖರ್ಗೆ ಹೇಳಿದ್ದಾರೆ. ಈ ಮೂಲಕ ಬಿಜೆಪಿಯ ಮೈತ್ರಿಪಕ್ಷಗಳಿಗೂ ಪರೋಕ್ಷವಾದ ಆಹ್ವಾನ ನೀಡಿದ್ದಾರೆ.

ಇದನ್ನೂ ಓದಿ: ಎನ್​ಡಿಎ ಸರ್ಕಾರ ರಚನೆ ಕಸರತ್ತು: ಮೈತ್ರಿಕೂಟದ ನಾಯಕರಾಗಿ ನರೇಂದ್ರ ಮೋದಿ ಆಯ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.