ETV Bharat / bharat

ಬಿಹಾರದಲ್ಲಿ ಕಾಂಗ್ರೆಸ್​ನಿಂದ ಕಾದು ನೋಡುವ ತಂತ್ರ.. ನಿತೀಶ್ ರಾಜೀನಾಮೆ ನೀಡಿದರೆ ಸಂಖ್ಯಾಬಲ ಹೆಚ್ಚಳಕ್ಕೆ ತಯಾರಿ

ನಿತೀಶ್ ಕುಮಾರ್ ಆಡಳಿತಾರೂಢ ಮೈತ್ರಿಕೂಟದಿಂದ ಹೊರನಡೆದರೆ ವಿಧಾನಸಭೆಯಲ್ಲಿ ಸಂಖ್ಯಾಬಲ ಪಡೆಯಲು ವ್ಯವಸ್ಥೆ ಮಾಡಲಾಗಿದೆ ಎಂಬುದು ತಿಳಿದು ಬಂದಿದೆ.

ನಿತೀಶ್ ಕುಮಾರ್
ನಿತೀಶ್ ಕುಮಾರ್
author img

By ETV Bharat Karnataka Team

Published : Jan 26, 2024, 10:54 PM IST

ನವದೆಹಲಿ: ಬಿಹಾರದಲ್ಲಿನ ರಾಜಕೀಯ ಪರಿಸ್ಥಿತಿಯ ಹಿನ್ನೆಲೆ ಕಾಂಗ್ರೆಸ್ "ಕಾದು ನೋಡುವ " ತಂತ್ರವನ್ನು ಅನುಸರಿಸುತ್ತಿದೆ. ಜೆಡಿಯು ಅಧ್ಯಕ್ಷ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಆಡಳಿತಾರೂಢ ಮೈತ್ರಿಕೂಟದಿಂದ ಹೊರನಡೆಯಲು ಮುಂದಾದರೆ, ಕಾಂಗ್ರೆಸ್ ಪಕ್ಷವು ವಿಧಾನಸಭೆಯಲ್ಲಿ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಅಗತ್ಯ ತಯಾರಿ ನಡೆಸಲಿದೆ ಎಂಬುದು ತಿಳಿದು ಬಂದಿದೆ.

ಕಾಂಗ್ರೆಸ್ ಪಕ್ಷದ ಒಳಗಿನವರ ಪ್ರಕಾರ, ಬಿಹಾರದ ಎಐಸಿಸಿ ಉಸ್ತುವಾರಿ ಮೋಹನ್ ಪ್ರಕಾಶ್ ರಾಜ್ಯ ನಾಯಕರಿಂದ ಪ್ರತಿಕ್ರಿಯೆ ಪಡೆದುಕೊಂಡಿದ್ದಾರೆ. ಪರಿಸ್ಥಿತಿ ಬಗ್ಗೆ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ಅವರಿಗೆ ವಿವರಿಸಿದ್ದಾರೆ ಎಂಬುದು ತಿಳಿದು ಬಂದಿದೆ.

ಭಾರತ್ ಜೋಡೋ ನ್ಯಾಯ್ ಯಾತ್ರೆಯು ಬುಧವಾರ ಪಶ್ಚಿಮ ಬಂಗಾಳಕ್ಕೆ ಪ್ರವೇಶಿಸಿದ ನಂತರ ಜನವರಿ 25 ರಂದು ರಾತ್ರಿ ರಾಹುಲ್​ಗಾಂಧಿ ದೆಹಲಿಗೆ ಮರಳಿದ್ದಾರೆ. ಗಣರಾಜ್ಯೋತ್ಸವದ ಕಾರಣದಿಂದ ವಿರಾಮ ತೆಗೆದುಕೊಂಡಿರುವ ಅವರು, ಜನವರಿ 28 ರಂದು ಮತ್ತೆ ಯಾತ್ರೆ ಪುನಾರಂಭಗೊಳಿಸಲಿದ್ದಾರೆ.

ನಾವೆಲ್ಲರೂ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದೇವೆ. ನಿತೀಶ್ ಕುಮಾರ್ ಮೈತ್ರಿಯಿಂದ ಹೊರ ಬರಬಹುದು ಎಂಬ ಊಹಾಪೋಹಗಳು ಹೆಚ್ಚಾಗಿವೆ. ಈ ಹಂತದಲ್ಲಿ ನಾನು ಆ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಯಾವುದೇ ಬೆಳವಣಿಗೆ ನಡೆದರೆ ನಾವು ಪ್ರತಿಕ್ರಿಯಿಸುತ್ತೇವೆ ಎಂದು ಬಿಹಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಶಕೀಲ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಆಡಳಿತಾರೂಢ ಮೈತ್ರಿಕೂಟವು ಯಾವುದೇ ತೊಂದರೆ ನಿರೀಕ್ಷಿಸಿರಲಿಲ್ಲ. ನಿತೀಶ್ ಅವರ ನಿರ್ಗಮನವು ಬಿಹಾರದಲ್ಲಿ ರಾಜಕೀಯ ಬಿಕ್ಕಟ್ಟನ್ನು ಉಂಟುಮಾಡಿದರೆ, ಯಾವುದೇ ಸಂದರ್ಭಕ್ಕೂ ಸಿದ್ಧರಿರಲಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಅತೃಪ್ತ ಜೆಡಿಯು ಶಾಸಕರ ಸಂಪರ್ಕ : “ಒಂದು ವೇಳೆ ನಿತೀಶ್ ಕುಮಾರ್ ಅವರು ಮೈತ್ರಿಯಿಂದ ಹೊರ ನಡೆಯಲು ಮತ್ತು ಬಿಜೆಪಿಯೊಂದಿಗೆ ಕೈಜೋಡಿಸಲು ನಿರ್ಧರಿಸಿದರೆ, ಅದು ರಾಜ್ಯ ವಿಧಾನಸಭೆಯಲ್ಲಿ ನಂಬರ್ ಗೇಮ್​ ಪೈಪೋಟಿಗೆ ಕಾರಣವಾಗುತ್ತದೆ. ನಮ್ಮ ಅಂದಾಜಿನ ಪ್ರಕಾರ, ಜೆಡಿಯು ಕಳೆದುಕೊಂಡರೆ, ಸರಳ ಬಹುಮತ ಹೊಂದಲು ಮೈತ್ರಿಕೂಟಕ್ಕೆ ಸುಮಾರು 8 ಶಾಸಕರ ಕೊರತೆ ಎದುರಾಗುತ್ತದೆ.

ಅಗತ್ಯವಿದ್ದರೆ, ಕೆಲವು ಅತೃಪ್ತ ಜೆಡಿಯು ಶಾಸಕರು ಆರ್‌ಜೆಡಿ ನಾಯಕರೊಂದಿಗೆ ಸಂಪರ್ಕದಲ್ಲಿರುವುದರಿಂದ ಪಕ್ಷವನ್ನು ಬದಲಾಯಿಸಲು ಸಿದ್ಧರಿರುವುದರಿಂದ ಈ ಸಂಖ್ಯೆಯನ್ನು ಸರಿದೂಗಿಸಬಹುದು. ಅಸೆಂಬ್ಲಿ ಸ್ಪೀಕರ್ ಆರ್‌ಜೆಡಿಯಿಂದ ಬಂದಿರುವುದರಿಂದ ಮತ್ತು ನಿಯಮಗಳ ಪ್ರಕಾರವೇ ಈ ಬಾರಿ ಮೈತ್ರಿಕೂಟವು ಪ್ರಬಲ ಸ್ಥಾನದಲ್ಲಿದೆ. ಈ ಅಂಶಗಳು ನಿತೀಶ್ ಕುಮಾರ್ ಅವರು ಮೈತ್ರಿಯನ್ನು ಮುರಿಯುವ ಅಪಾಯವನ್ನು ತೆಗೆದುಕೊಳ್ಳುವ ಮೊದಲು ಖಂಡಿತವಾಗಿಯೂ ಅವರ ಮೇಲೆ ಒತ್ತಡ ಹೇರುತ್ತೇವೆ'' ಎಂದು ಹೆಸರು ಹೇಳಲು ಇಚ್ಛಿಸದ ಎಐಸಿಸಿ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಹಾರದ ಮಹಾಘಟಬಂಧನ್​ನಲ್ಲಿ ಒಡಕು?: ಸಸ್ಪೆನ್ಸ್ ಮುಂದುವರಿಸಿದ ಸಿಎಂ ನಿತೀಶ್ ಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.