ನವದೆಹಲಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಶನಿವಾರ ಇನ್ನೂ 16 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಮಾಜಿ ಕೇಂದ್ರ ಸಚಿವ ಮನೀಶ್ ತಿವಾರಿ ಚಂಡೀಗಢ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಹಿಮಾಚಲ ಪ್ರದೇಶದ ಸಚಿವ ವಿಕ್ರಮಾದಿತ್ಯ ಸಿಂಗ್ ಅವರನ್ನು ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಬಾಲಿವುಡ್ ನಟಿ ಕಂಗನಾ ರನೌತ್ ವಿರುದ್ಧ ಕಣಕ್ಕಿಳಿಸಲಾಗಿದೆ.
ಶನಿವಾರ ಸಂಜೆ ನಡೆದ ಪಕ್ಷದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯಲ್ಲಿ ಈ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. 34 ವರ್ಷದ ವಿಕ್ರಮಾದಿತ್ಯ ಸಿಂಗ್ ಹಿಮಾಚಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್ ಹಾಗೂ ರಾಜ್ಯದ ದಿವಂಗತ ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಪುತ್ರರಾಗಿದ್ದಾರೆ. ಇನ್ನು ವಿನೋದ್ ಸುಲ್ತಾನಪುರಿ ಅವರನ್ನು ಶಿಮ್ಲಾ (ಎಸ್ಸಿ) ಕ್ಷೇತ್ರದಿಂದ ಕಣಕ್ಕಿಳಿಸಿದೆ. ಗುಜರಾತ್‌ನ ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ರಾಮ್‌ಜಿ ಠಾಕೋರ್ (ಪಾಲ್ವಿ) ಅವರು ಮೆಹೆಸಾನಾ, ಹಿಮ್ಮತ್‌ಸಿನ್ಹ್ ಪಟೇಲ್ ಅವರು ಅಹಮದಾಬಾದ್ ಪೂರ್ವ, ಪರೇಶ್‌ಭಾಯ್ ಧನಾನಿ ಅವರು ರಾಜ್‌ಕೋಟ್ ಮತ್ತು ನೈಶಾದ್ ದೇಸಾಯಿ ಅವರು ನವಸಾರಿ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ.
ಒಡಿಶಾದ ಒಂಬತ್ತು ಅಭ್ಯರ್ಥಿಗಳನ್ನು ಕಾಂಗ್ರೆಸ್ ಘೋಷಿಸಿದೆ. ಬಾಲಸೋರ್ ಕ್ಷೇತ್ರದಿಂದ ಶ್ರೀಕಾಂತ್ ಕುಮಾರ್ ಜೆನಾ, ಕಿಯೊಂಜಾರ್ ಎಸ್‌ಟಿ ಕ್ಷೇತ್ರದ ಮೋಹನ್ ಹೆಂಬ್ರಾಮ್‌ಗೆ ಟಿಕೆಟ್ ನೀಡಿದೆ. ಭದ್ರಾಕ್ (ಎಸ್ಸಿ) ಮೀಸಲು ಕ್ಷೇತ್ರದಿಂದ ಅನಂತ್ ಪ್ರಸಾದ್ ಸೇಥಿ ಮತ್ತು ಜಜ್ಪುರ್ (ಎಸ್ಸಿ) ಕ್ಷೇತ್ರದಿಂದ ಅಂಚಲ್ ದಾಸ್ ಅವರಿಗೆ ಅವಕಾಶ ನೀಡಲಾಗಿದೆ. ಧೆಂಕನಲ್ ಕ್ಷೇತ್ರದಿಂದ ಸಶ್ಮಿತಾ ಬೆಹೆರಾ, ಕೇಂದ್ರ ಪದದಿಂದ ಸಿದ್ಧಾರ್ಥ್ ಸ್ವರೂಪ್ ದಾಸ್ ಮತ್ತು ಜಗತ್‌ಸಿಂಗ್‌ಪುರ (ಎಸ್ಸಿ) ಕ್ಷೇತ್ರದಿಂದ ರವೀಂದ್ರ ಕುಮಾರ್ ಸೇಥಿ ಅವರನ್ನು ಕಣಕ್ಕಿಳಿಸಲಾಗಿದೆ. ಪುರಿಯಿಂದ ಸುಚರಿತ ಮೊಹಾಂತಿ, ಭುವನೇಶ್ವರದಿಂದ ಯಜೀರ್ ನವಾಸ್ ಸ್ಪರ್ಧಿಸಲಿದ್ದಾರೆ.
ಗುಜರಾತ್‌ನಲ್ಲಿ ಉಪಚುನಾವಣೆ ನಡೆಯಲಿರುವ ಐದು ವಿಧಾನಸಭಾ ಕ್ಷೇತ್ರಗಳಿಗೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ದಿನೇಶಭಾಯಿ ತುಳಸಿದಾಸ್ ಪಟೇಲ್ (ವಿಜಾಪುರ), ರಾಜುಭಾಯಿ ಒಡೆದ್ರಾ (ಪೋರಬಂದರ್), ಹರಿಬಾಹಿ ಕಂಸಾಗರ (ಮಾನವದರ್), ಮಹೇಂದ್ರಸಿಂಗ್ ಪರ್ಮಾರ್ (ಖಂಬತ್) ಮತ್ತು ಕನುಭಾಯಿ ಗೋಹಿಲ್ (ವಘೋಡಿಯಾ) ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ; ನಾಳೆ ಬಿಜೆಪಿ 'ಸಂಕಲ್ಪ ಪತ್ರ' ಪ್ರಣಾಳಿಕೆ ಬಿಡುಗಡೆ - BJP manifesto