ETV Bharat / bharat

ಗುಜರಾತ್​ ಕರಾವಳಿಯಲ್ಲಿ ನೌಕಾಪಡೆ ಹೆಲಿಕಾಪ್ಟರ್​​ ಪತನ; ಮೂವರು ಸಿಬ್ಬಂದಿ ನಾಪತ್ತೆ - Coast Guard Helicopter Crashes - COAST GUARD HELICOPTER CRASHES

ನೌಕಾಪಡೆಯ ಹೆಲಿಕಾಪ್ಟರ್‌ನಲ್ಲಿ ನಾಲ್ವರು ಸಿಬ್ಬಂದಿಗಳಿದ್ದು ಈ ಪೈಕಿ ಒಬ್ಬರನ್ನು ರಕ್ಷಿಸಲಾಗಿದೆ. ಉಳಿದವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

coast-guard-helicopter-crashes-into-sea-off-gujarat-coast-3-crew-members-missing
ಸಾಂದರ್ಭಿಕ ಚಿತ್ರ (ANI)
author img

By PTI

Published : Sep 3, 2024, 11:55 AM IST

ಪೋರ್​ಬಂದರ್​(ಗುಜರಾತ್): ಭಾರತೀಯ ನೌಕಾ ಪಡೆಯ ಅಡ್ವಾನ್ಸ್​​ ಲೈಟ್​ ಹೆಲಿಕಾಪ್ಟರ್​ (ಎಚ್ಎಲ್​) ಗುಜರಾತ್​ನ ಪೋರ್‌ಬಂದರ್​ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಪತನಗೊಂಡಿದ್ದು, ಮೂವರು ಸಿಬ್ಬಂದಿ ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ರಾತ್ರಿ ಘಟನೆ ಸಂಭವಿಸಿದೆ ಎಂದು ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ. ಹೆಲಿಕಾಪ್ಟರ್‌ನಲ್ಲಿ ನಾಲ್ವರು ಸಿಬ್ಬಂದಿಗಳಿದ್ದು, ಒಬ್ಬರನ್ನು ರಕ್ಷಿಸಲಾಗಿದೆ. ಉಳಿದವರ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದೆ.

ಸೆಪ್ಟೆಂಬರ್​ 2ರಂದು ನೌಕಾಪಡೆ ಎಎಲ್​ಎಚ್​ ಹೆಲಿಕಾಪ್ಟರ್​​ ಮೂಲಕ ಪೋರ್‌ಬಂದರ್‌ನ ಹರಿ ಲೀಲಾ ಮೋಟಾರ್ ಟ್ಯಾಂಕರ್‌ನಿಂದ ಗಾಯಗೊಂಡ ಸಿಬ್ಬಂದಿಯನ್ನು ಸ್ಥಳಾಂತರಿಸಲು ಮುಂದಾಗಿತ್ತು. ಈ ವೇಳೆ ಸಮುದ್ರದಲ್ಲಿ ತುರ್ತು ಲ್ಯಾಂಡಿಂಗ್​ ಮಾಡುತ್ತಿದ್ದಾಗ ಹೆಲಿಕಾಪ್ಟರ್ ಪತನಗೊಂಡಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಬ್ರೂನಿ, ಸಿಂಗಾಪುರ್ ಪ್ರವಾಸ: ದ್ವಿಪಕ್ಷೀಯ ಸಂಬಂಧ ಬಲವರ್ಧನೆಗೆ ಒತ್ತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.