ETV Bharat / bharat

ಭಾರತಕ್ಕೆ ಆಗಮಿಸಿದ ಚಿಲಿ ವಿದೇಶಾಂಗ ಸಚಿವ: ದ್ವಿಪಕ್ಷೀಯ ವ್ಯಾಪಾರ, ಸಂಬಂಧ ಬಲವರ್ಧನೆಗೆ ಚರ್ಚೆ - Chile India ties - CHILE INDIA TIES

5 ದಿನಗಳ ಭೇಟಿಗಾಗಿ ಚಿಲಿಯ ವಿದೇಶಾಂಗ ಸಚಿವರು ಭಾರತಕ್ಕೆ ಆಗಮಿಸಿದ್ದಾರೆ.

ಚಿಲಿಯ ವಿದೇಶಾಂಗ ವ್ಯವಹಾರಗಳ ಸಚಿವ ಆಲ್ಬರ್ಟೊ ವ್ಯಾನ್ ಕ್ಲಾವೆರೆನ್
ಚಿಲಿಯ ವಿದೇಶಾಂಗ ವ್ಯವಹಾರಗಳ ಸಚಿವ ಆಲ್ಬರ್ಟೊ ವ್ಯಾನ್ ಕ್ಲಾವೆರೆನ್ (ani)
author img

By ANI

Published : Aug 27, 2024, 2:16 PM IST

ನವದೆಹಲಿ: ಚಿಲಿ ವಿದೇಶಾಂಗ ವ್ಯವಹಾರಗಳ ಸಚಿವ ಆಲ್ಬರ್ಟೊ ವ್ಯಾನ್ ಕ್ಲಾವೆರೆನ್ ಅವರು ಐದು ದಿನಗಳ ಮಹತ್ವದ ಅಧಿಕೃತ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ಆಗಸ್ಟ್ 27 ರಿಂದ ಆಗಸ್ಟ್ 31 ರವರೆಗೆ ನಡೆಯಲಿರುವ ಈ ಭೇಟಿಯು ಭಾರತದೊಂದಿಗೆ ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಚಿಲಿಯ ಬದ್ಧತೆ ಸೂಚಿಸುತ್ತದೆ ಮತ್ತು ಉಭಯ ದೇಶಗಳ ನಡುವಿನ ಆಳವಾದ ಪಾಲುದಾರಿಕೆಯನ್ನು ಎತ್ತಿ ತೋರಿಸುತ್ತದೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ತಿಳಿಸಿದೆ.

ಸಚಿವ ವ್ಯಾನ್ ಕ್ಲಾವೆರೆನ್ ಆಗಸ್ಟ್ 27, 2024 ರಂದು 22:05 ಗಂಟೆಗೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಐಜಿಐ ಟಿ 3) ಬಂದಿಳಿದರು. ಆಗಸ್ಟ್ 28 ರಂದು ಮಧ್ಯಾಹ್ನ 12:30 ಕ್ಕೆ ಹೈದರಾಬಾದ್ ಹೌಸ್​ನಲ್ಲಿ ಭಾರತದ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರೊಂದಿಗೆ ಸಚಿವ ವ್ಯಾನ್ ಕ್ಲಾವೆರೆನ್ ಮಹತ್ವದ ಸಭೆ ನಡೆಸಲಿದ್ದಾರೆ. ವ್ಯಾಪಾರ, ಹೂಡಿಕೆ ಮತ್ತು ಸಾಂಸ್ಕೃತಿಕ ವಿನಿಮಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವತ್ತ ಈ ಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆಯಿದೆ.

ಆಗಸ್ಟ್ 29 ರಂದು ವ್ಯಾನ್ ಕ್ಲಾವೆರೆನ್ ದೆಹಲಿಯಿಂದ 10:20 ಕ್ಕೆ ಮುಂಬೈಗೆ ಹೊರಡಲಿದ್ದಾರೆ. ದೇಶದ ಪ್ರಮುಖ ಆರ್ಥಿಕ ಕೇಂದ್ರವಾದ ಮುಂಬೈ ಭೇಟಿಯ ಸಮಯದಲ್ಲಿ ಸಚಿವ ವ್ಯಾನ್ ಕ್ಲಾವೆರೆನ್ ಉದ್ಯಮಿಗಳು ಮತ್ತು ಪ್ರಾದೇಶಿಕ ಅಧಿಕಾರಿಗಳೊಂದಿಗೆ ತೊಡಗಲಿದ್ದಾರೆ. ಈ ಸಂವಾದಗಳು ಚಿಲಿ-ಭಾರತ ಪಾಲುದಾರಿಕೆಯ ಆರ್ಥಿಕ ಮಹತ್ವವನ್ನು ಒತ್ತಿಹೇಳುತ್ತವೆ ಮತ್ತು ತಂತ್ರಜ್ಞಾನ, ಇಂಧನ ಮತ್ತು ವ್ಯಾಪಾರದಲ್ಲಿ ಸಂಭಾವ್ಯ ಅವಕಾಶಗಳನ್ನು ಅನ್ವೇಷಿಸಲಿವೆ ಎಂದು ನಿರೀಕ್ಷಿಸಲಾಗಿದೆ. ಈ ಭೇಟಿಯು ಆಗಸ್ಟ್ 31 ರಂದು ಕೊನೆಗೊಳ್ಳಲಿದ್ದು, ಸಚಿವ ಕ್ಲಾವೆರೆನ್ ಅಂದು 13:05 ಗಂಟೆಗೆ ಭಾರತದಿಂದ ಹೊರಡಲಿದ್ದಾರೆ.

ಚಿಲಿ ಮತ್ತು ಭಾರತ ತಮ್ಮ ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸುವತ್ತ ಹೆಚ್ಚು ಗಮನ ಹರಿಸುತ್ತಿರುವ ಸಂದರ್ಭದಲ್ಲಿ ಚಿಲಿಯ ವಿದೇಶಾಂಗ ವ್ಯವಹಾರಗಳ ಸಚಿವರು ಭಾರತಕ್ಕೆ ಆಗಮಿಸಿರುವುದು ಗಮನಾರ್ಹವಾಗಿದೆ. ಎರಡೂ ರಾಷ್ಟ್ರಗಳು ತಮ್ಮ ಪಾಲುದಾರಿಕೆಯನ್ನು ಹೆಚ್ಚಿಸಲು ನಿಕಟವಾಗಿ ಕೆಲಸ ಮಾಡುತ್ತಿವೆ. ಇದು ಬೆಳವಣಿಗೆ ಮತ್ತು ಪರಸ್ಪರ ಪ್ರಯೋಜನಗಳನ್ನು ಉತ್ತೇಜಿಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಸಚಿವ ವ್ಯಾನ್ ಕ್ಲಾವೆರೆನ್ ಅವರ ಪ್ರವಾಸವು ಹೊಸ ಉಪಕ್ರಮಗಳಿಗೆ ದಾರಿ ಮಾಡಿಕೊಡುತ್ತದೆ ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ಸಂಬಂಧಗಳನ್ನು ಬಲಪಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಚಿಲಿ ಒಂದು ಉದ್ದವಾದ ಕಿರಿದಾದ ದೇಶವಾಗಿದ್ದು, ಇದು ದಕ್ಷಿಣ ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ರಿಬ್ಬನ್​ನಂತೆ ವಿಸ್ತರಿಸಿದೆ.

ಇದನ್ನೂ ಓದಿ : ಸಂಪೂರ್ಣ ಜ್ಞಾನವಾಪಿ ಆವರಣದ ಸಮೀಕ್ಷೆ ಕೋರಿದ್ದ ಅರ್ಜಿ ವಿಚಾರಣೆ ಇಂದು - Gyanvapi

ETV Bharat Logo

Copyright © 2025 Ushodaya Enterprises Pvt. Ltd., All Rights Reserved.