ಛಿಂದ್ವಾರಾ, ಮಧ್ಯಪ್ರದೇಶ: ಈ ಜಿಲ್ಲೆಯಲ್ಲಿ ಅಗತ್ಯ ಎನ್ನುವಷ್ಟು ಶಾಲಾ ಕಟ್ಟಡ ಮತ್ತು ಶಿಕ್ಷಕರಿದ್ದಾರೆ. ಆದರೆ ಓದಲು ಮಕ್ಕಳೇ ಇಲ್ಲ. ಇದು ಯಾವುದೇ ಒಂದು ಶಾಲೆಯ ಕಥೆಯಲ್ಲ ಜಿಲ್ಲೆಯ ಸುಮಾರು 299 ಶಾಲೆಗಳ ಹಣೆಬರಹವಿದು. ಒಂದನೇ ತರಗತಿಗೆ ಒಂದೇ ಒಂದು ಪ್ರವೇಶವೂ ನಡೆಯದ ನೂರಾರು ಶಾಲೆಗಳು ಈಗ ಛಿಂದ್ವಾರದಲ್ಲಿವೆ. ಛಿಂದ್ವಾರದಲ್ಲಿ ಇಂತಹ 299 ಶಾಲೆಗಳಿದ್ದು, ಒಂದನೇ ತರಗತಿಗೆ ಒಂದೇ ಒಂದು ಮಗುವೂ ಪ್ರವೇಶ ಪಡೆದಿಲ್ಲ. 805 ಶಾಲೆಗಳಲ್ಲಿ ಒಬ್ಬರು ಅಥವಾ ಇಬ್ಬರು ಮಕ್ಕಳು ಮಾತ್ರ ಹೊಸ ಪ್ರವೇಶ ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2581 ಪ್ರಾಥಮಿಕ ಮತ್ತು ಮಧ್ಯಮ ಶಾಲೆಗಳಿವೆ. ಆದರೆ ಜನ ಮಾತ್ರ ಸರ್ಕಾರಿ ಶಾಲೆಗಳಿಂದ ದೂರವೇ ಉಳಿಯುತ್ತಿದ್ದಾರೆ.
ಶಾಲೆ ತೊರೆದ 40 ಸಾವಿರ ಮಕ್ಕಳು: ಕಳೆದ ಐದು ವರ್ಷಗಳಲ್ಲಿ 40 ಸಾವಿರ ಮಕ್ಕಳು ಸರ್ಕಾರಿ ಶಾಲೆಗಳನ್ನು ತೊರೆದಿದ್ದಾರೆ, ಚಿಂದ್ವಾರ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 40 ಸಾವಿರದಷ್ಟು ಕಡಿಮೆಯಾಗಿದೆ. ಸರ್ಕಾರಿ ಪ್ರಾಥಮಿಕ -ಪ್ರೌಢಶಾಲೆಗಳಲ್ಲಿ ವಿಶೇಷವಾಗಿ 1ನೇ ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಅದೇ ಸಮಯದಲ್ಲಿ, ಶಾಲಾ ಕಟ್ಟಡದಿಂದ ಹಿಡಿದು ಶಿಕ್ಷಕರವರೆಗೆ ಇಲ್ಲಿ ಎಲ್ಲ ಸುಸಜ್ಜಿತ ವ್ಯವಸ್ಥೆ ಇದೆ. ಇದರ ಹೊರತಾಗಿಯೂ 1 ನೇ ತರಗತಿಗೆ ಪ್ರವೇಶ ಪಡೆಯುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಶಿಕ್ಷಣ ಇಲಾಖೆ ಸಭೆಯಲ್ಲಿ ಇಲಾಖೆ ಮಂಡಿಸಿದ ಅಂಕಿ ಅಂಶಗಳ ಪ್ರಕಾರ ಒಂದೇ ಒಂದು ಮಕ್ಕಳು ಪ್ರವೇಶ ಪಡೆಯದ 299 ಶಾಲೆಗಳಿದ್ದು, 1ನೇ ತರಗತಿಗೆ ಒಬ್ಬ ವಿದ್ಯಾರ್ಥಿಯೂ ಪ್ರವೇಶ ಪಡೆದಿಲ್ಲ. ಇದಕ್ಕಾಗಿ ಬಿಆರ್‌ಸಿಗೆ ನೋಟಿಸ್ ಕೂಡ ಜಾರಿ ಮಾಡಲಾಗಿದ್ದು, ಈ ಶಾಲೆಗಳಲ್ಲಿ ನೋಂದಣಿ ಸಂಖ್ಯೆ ಹೆಚ್ಚಿಸುವಂತೆ ಸೂಚಿಸಲಾಗಿದೆ.
299ರಲ್ಲಿ ಶೂನ್ಯ, 800ರಲ್ಲಿ ಒಬ್ಬಿಬ್ಬರು ಮಾತ್ರ: 299 ಶಾಲೆಗಳಲ್ಲಿ ಶೂನ್ಯ ಮಕ್ಕಳ ದಾಖಲಾತಿ ಇದ್ದರೆ, 805 ಶಾಲೆಗಳಲ್ಲಿ ಒಬ್ಬರು ಅಥವಾ ಇಬ್ಬರು ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಹೀಗಂತಾ ಶಿಕ್ಷಣ ಇಲಾಖೆಯ ಅಂಕಿ -ಅಂಶಗಳು ನೀಡುತ್ತಿವೆ ಆಘಾತಕಾರಿ ಮಾಹಿತಿ. ಸಾವಿರಕ್ಕೂ ಹೆಚ್ಚು ಸರಕಾರಿ ಪ್ರಾಥಮಿಕ - ಪ್ರೌಢಶಾಲೆಗಳಿವೆ. 1106 ಶಾಲೆಗಳಲ್ಲಿ 0 ರಿಂದ 3 ಮತ್ತು 802 ಶಾಲೆಗಳಲ್ಲಿ 3 ರಿಂದ ಐದು ದಾಖಲಾತಿಗಳಿವೆ. ಅಲ್ಲದೇ 6ರಿಂದ 10 ಮಕ್ಕಳು ದಾಖಲಾಗುವ ಶಾಲೆಗಳು ಬರೋಬ್ಬರಿ 514. ಹತ್ತಕ್ಕೂ ಹೆಚ್ಚು ಮಕ್ಕಳು ದಾಖಲಾಗಿರುವ ಶಾಲೆಗಳು ಕೇವಲ 159 ಇವೆ ಎಂದು ಈ ಅಂಕಿ- ಅಂಶಗಳು ಹೇಳುತ್ತಿವೆ.
ಕಳೆದ ವರ್ಷಕ್ಕೆ ಹೋಲಿಸಿದರೆ 7.5 ಸಾವಿರ ದಾಖಲಾತಿಗಳು ಕಡಿಮೆಯಾಗಿವೆ. ಕಳೆದ ಹತ್ತು ವರ್ಷಗಳಿಂದ 1ರಿಂದ 8ನೇ ತರಗತಿವರೆಗೆ ದಾಖಲಾಗುವ ಮಕ್ಕಳ ಸಂಖ್ಯೆ ನಿರಂತರವಾಗಿ ಕಡಿಮೆಯಾಗುತ್ತಿದೆ. ಏತನ್ಮಧ್ಯೆ, 2022-23ರಲ್ಲಿ ದಾಖಲಾದ ಸಂಖ್ಯೆಯಲ್ಲಿ ಮಾತ್ರ ಜಿಗಿತ ಕಂಡುಬಂದಿದೆ. ಆದರೆ, 2023-24ನೇ ಸಾಲಿನಲ್ಲಿ ಈ ಸಂಖ್ಯೆ 1 ಲಕ್ಷದ 69 ಸಾವಿರದ 346ಕ್ಕೆ ಇಳಿಕೆಯಾಗಿದೆ.
ಈ ಬಗ್ಗೆ ಪೋಷಕರು ಹೇಳುವುದೇನು?: ಜಿಲ್ಲಾ ಪಾಲಕರ ಸಂಘದ ಸದಸ್ಯ ಅನುಜ್ ಚೌಕ್ಸೆ ಎಂಬುವರು ಮಾತನಾಡಿ, ‘ಖಾಸಗಿ ಶಾಲೆಗಳು ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿದ್ದರೂ ಉತ್ತಮ ಶಿಕ್ಷಣಕ್ಕಾಗಿ ಪೋಷಕರು ಖಾಸಗಿ ಶಾಲೆಗಳಿಗೆ ಮಕ್ಕಳನ ಸೇರಿಸುತ್ತಿದ್ದಾರೆ. ಏಕೆಂದರೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಗೆ ಹೆಚ್ಚಿನ ಸಂಬಳ ಮತ್ತು ಎಲ್ಲಾ ಸೌಲಭ್ಯಗಳಿದ್ದರೂ ಗುಣಮಟ್ಟದ ಶಿಕ್ಷಣ ನೀಡುತ್ತಿಲ್ಲ. ಹೀಗಾಗಿ ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆ ಬಿಟ್ಟು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ ಎಂದಿದ್ದಾರೆ.
ಇದನ್ನು ಓದಿ: ಈ ವಾರ ದೆಹಲಿಯಲ್ಲಿ I.N.D.I.A ಕೂಟದ ಸಭೆ: ಹರಿಯಾಣ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಗುರಿ - INDIA Bloc Leaders Meeting