ETV Bharat / bharat

2014ರಲ್ಲಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಕಾಂಗ್ರೆಸ್​ ಸಂಸದ ಇಮ್ರಾನ್ ವಿರುದ್ಧ ಆರೋಪ ನಿಗದಿ

ಕಾಂಗ್ರೆಸ್​ ಸಂಸದ ಇಮ್ರಾನ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಕಾಂಗ್ರೆಸ್​ ಸಂಸದ ಇಮ್ರಾನ್
ಕಾಂಗ್ರೆಸ್​ ಸಂಸದ ಇಮ್ರಾನ್ (etv bharat)
author img

By ETV Bharat Karnataka Team

Published : 2 hours ago

ಸಹಾರನ್​ ಪುರ, ಉತ್ತರಪ್ರದೇಶ: 2014 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಉತ್ತರಪ್ರದೇಶದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಈಗ ವಿವಾದಕ್ಕೆ ಸಿಲುಕಿದ್ದಾರೆ. ನರೇಂದ್ರ ಮೋದಿ ಸಹಾರನ್​ ಪುರಕ್ಕೆ ಬಂದರೆ ಅವರನ್ನು ತುಂಡು ತುಂಡು ಮಾಡಲಾಗುವುದು ಎಂದು ಇಮ್ರಾನ್ ಮಸೂದ್ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದರು. ಈ ಪ್ರಕರಣದಲ್ಲಿ ಗ್ರಾಮಸ್ಥರ ಹೇಳಿಕೆಗಳನ್ನು ದಾಖಲಿಸಿದ ನಂತರ, ಸಹಾರನ್​ ಪುರದ ಜನಪ್ರತಿನಿಧಿಗಳ ನ್ಯಾಯಾಲಯವು ಇಮ್ರಾನ್ ಮಸೂದ್ ವಿರುದ್ಧ ಆರೋಪಗಳನ್ನು ಹೊರಿಸಿದೆ.

ಆರೋಪಗಳನ್ನು ಹೊರಿಸಿದ ನಂತರ, ಸಂಸದ ಇಮ್ರಾನ್ ಮಸೂದ್ ಮತ್ತು ಅವರ ಬೆಂಬಲಿಗರಲ್ಲಿ ಕೋಲಾಹಲ ಉಂಟಾಗಿದೆ. ಇಮ್ರಾನ್ ಮಸೂದ್ ತನ್ನ ಹೇಳಿಕೆಗೆ ಈಗಾಗಲೇ ಅನೇಕ ಬಾರಿ ಕ್ಷಮೆಯಾಚಿಸಿದ್ದಾರೆ. ಇದರ ಹೊರತಾಗಿಯೂ, 10 ವರ್ಷಗಳ ನಂತರ, ನ್ಯಾಯಾಲಯದಲ್ಲಿ ಇವರ ವಿರುದ್ಧ ಆರೋಪಗಳನ್ನು ನಿಗದಿಪಡಿಸಲಾಗಿದೆ. ಈ ಬೆಳವಣಿಗೆಯ ನಂತರ ಇಮ್ರಾನ್​ಗೆ ಆತಂಕ ಶುರುವಾಗಿದೆ.

2024 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್​ನಲ್ಲಿ ಸಹಾರನ್ ಪುರ ಲೋಕಸಭಾ ಸ್ಥಾನದಿಂದ ಚುನಾವಣೆಯಲ್ಲಿ ಗೆದ್ದಿರುವ ಇಮ್ರಾನ್ ಮಸೂದ್, 10 ವರ್ಷಗಳ ಹಿಂದೆ ಅಂದರೆ 2014 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಥಾನಾ ದಿಯೋಬಂದ್ ಪ್ರದೇಶದ ಲಬ್ಕರಿ ಗ್ರಾಮದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. 'ಗುಜರಾತ್​ನಲ್ಲಿ ಶೇ.4 ಮತ್ತು ಸಹಾರನ್ ಪುರದಲ್ಲಿ ಶೇ 42ರಷ್ಟು ಮುಸ್ಲಿಮರಿದ್ದಾರೆ. ಅವರು ಇಲ್ಲಿಗೆ ಬಂದರೆ ಅವರನ್ನು ತುಂಡು ತುಂಡಾಗಿ ಕತ್ತರಿಸಲಾಗುವುದು ' ಎಂದು ಇಮ್ರಾನ್ ಮಸೂದ್ ಹೇಳಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಆವಾಗ ಬಿಜೆಪಿ ಅವರನ್ನು ಪ್ರಧಾನಿ ಹುದ್ದೆಯ ಅಭ್ಯರ್ಥಿಯಾಗಿ ಬಿಂಬಿಸಿತ್ತು.

ಜನಪ್ರತಿನಿಧಿಗಳ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಮೋಹಿತ್ ಶರ್ಮಾ ಅವರು 19 ಗ್ರಾಮಸ್ಥರ ಹೇಳಿಕೆಗಳನ್ನು ದಾಖಲಿಸಿಕೊಂಡ ನಂತರ ಇಮ್ರಾನ್ ವಿರುದ್ಧ ಆರೋಪಗಳನ್ನು ಹೊರಿಸಲಾಗಿದೆ ಎಂದು ಸರ್ಕಾರಿ ವಕೀಲರು ತಿಳಿಸಿದ್ದಾರೆ. ನರೇಂದ್ರ ಮೋದಿ ಮಾತ್ರವಲ್ಲದೇ ಇಮ್ರಾನ್ ಮಸೂದ್ ಇಬ್ಬರು ಬಿಎಸ್​ಪಿ ಶಾಸಕರ ಬಗ್ಗೆಯೂ ಅಸಭ್ಯ ಹೇಳಿಕೆ ನೀಡಿದ್ದಾರೆ. ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ, ಶಾಂತಿಯನ್ನು ಕದಡಲು ಪ್ರಯತ್ನಿಸಿದ ಮತ್ತು ಪರಿಶಿಷ್ಟ ಜಾತಿ ಶಾಸಕರಿಗೆ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಸಂಸದರ ವಿರುದ್ಧ ಮಾರ್ಚ್ 27, 2014 ರಂದು ಆಗಿನ ಕೊತ್ವಾಲಿ ದೇವಬಂದ್ ಉಸ್ತುವಾರಿ ಕುಸುಮ್ ವೀರ್ ಸಿಂಗ್ ಅವರು ಎಫ್ಐಆರ್ ದಾಖಲಿಸಿದ್ದರು. ಎಫ್ಐಆರ್ ನಂತರ ಇಮ್ರಾನ್ ಮಸೂದ್ ಜೈಲುಪಾಲಾಗಿದ್ದರು. ಈ ಘಟನೆಯು ಆಗ ದೇಶಾದ್ಯಂತ ತುಂಬಾ ಚರ್ಚೆಯಾಗಿತ್ತು. ಇಡೀ ಭಾಷಣದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಇದನ್ನೂ ಓದಿ : ಅಧಿಕೃತವಾಗಿ ಕಾಂಗ್ರೆಸ್​ ಸೇರ್ಪಡೆಗೊಂಡ ಸಿಪಿ ಯೋಗೇಶ್ವರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.