ETV Bharat / bharat

ಆಂಧ್ರ ಸಿಎಂ ಆಗಿ ಚಂದ್ರಬಾಬು ನಾಯ್ಡು, ಡಿಸಿಎಂ ಆಗಿ ಪವನ್ ಕಲ್ಯಾಣ್ ಪ್ರಮಾಣ ವಚನ: ಪ್ರಧಾನಿ ಮೋದಿ, ಅಮಿತ್ ಶಾ ಸೇರಿ ಗಣ್ಯರು ಭಾಗಿ - Chandrababu Naidu and Pawan Kalyan - CHANDRABABU NAIDU AND PAWAN KALYAN

ಆಂಧ್ರಪ್ರದೇಶ ಸಿಎಂ ಆಗಿ ಚಂದ್ರಬಾಬು, ಡಿಸಿಎಂ ಆಗಿ ಪವನ್ ಕಲ್ಯಾಣ್ ಪ್ರಮಾಣ ವಚನ ಸ್ವೀಕರಿಸಿದರು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ಧಾರೆ.

Andhra Pradesh CM and DCM  DCM Pawan Kalyan  CM Chandrababu Naidu
ಆಂಧ್ರಪ್ರದೇಶ ಸಿಎಂ ಆಗಿ ಚಂದ್ರಬಾಬು ನಾಯ್ಡು, ಡಿಸಿಎಂ ಆಗಿ ಪವನ್ ಕಲ್ಯಾಣ್ ಪ್ರಮಾಣ: ಪ್ರಧಾನಿ ಮೋದಿ, ಅಮಿತ್ ಶಾ ಸೇರಿ ಹಲವು ಗಣ್ಯರು ಭಾಗಿ (ETV Bharat)
author img

By ETV Bharat Karnataka Team

Published : Jun 12, 2024, 11:54 AM IST

Updated : Jun 12, 2024, 2:40 PM IST

ಆಂಧ್ರ ಸಿಎಂ ಆಗಿ ಚಂದ್ರಬಾಬು ನಾಯ್ಡು, ಡಿಸಿಎಂ ಆಗಿ ಪವನ್ ಕಲ್ಯಾಣ್ ಪ್ರಮಾಣ ವಚನ (ETV Bharat)

ವಿಜಯವಾಡ: ಟಿಡಿಪಿ ಮುಖ್ಯಸ್ಥ ನಾರಾ ಚಂದ್ರಬಾಬು ನಾಯ್ಡು ಆಂಧ್ರಪ್ರದೇಶದ ನೂತನ ಸಿಎಂ ಆಗಿ ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದರು.

ಪ್ರಧಾನಿ ನರೇಂದ್ರ ಮೋದಿಯವರನ್ನು ಆಲಿಂಗನದ ಮೂಲಕ ಚಂದ್ರಬಾಬು ನಾಯ್ಡು ಸ್ವಾಗತಿಸಿದರು. ನಂತರ ನಾಯ್ಡು ಅವರು ಮುಖ್ಯಮಂತ್ರಿಯಾಗಿ 4ನೇ ಬಾರಿ ಪ್ರಮಾಣವಚನ ಸ್ವೀಕರಿಸಿದರು. ನಂತರ, ಪವನ್ ಕಲ್ಯಾಣ್ ಅವರು ಉಪಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದರು.

ಇವರೊಂದಿಗೆ 24 ಮಂದಿ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದರು. ರಾಜ್ಯಪಾಲ ಅಬ್ದುಲ್ ನಜೀರ್ ಅವರು ಸಿಎಂ, ಡಿಸಿಎಂ ಹಾಗು ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಜೆ.ಪಿ ನಡ್ಡಾ ಸೇರಿದಂತೆ ಹಲವು ಕೇಂದ್ರ ಸಚಿವರು, ವಿವಿಧ ರಾಜ್ಯಗಳ ಸಿಎಂಗಳು, ಪ್ರಮುಖ ನಟರಾದ ಚಿರಂಜೀವಿ, ರಜನಿಕಾಂತ್ ಸೇರಿದಂತೆ ಪ್ರಮುಖ ಗಣ್ಯರು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಮನ ಸೆಳೆದರು.

ಗನ್ನವರಂ ಮಂಡಲದ ಕೇಸರಪಲ್ಲಿಯಲ್ಲಿ 11.18 ಎಕರೆ ಜಾಗದಲ್ಲಿ ಬೃಹತ್​​ ವೇದಿಕೆ ಸಿದ್ಧಪಡಿಸಲಾಗಿದೆ. ವೇದಿಕೆಯನ್ನು ಎಲ್ಲರೂ ನೋಡುವಂತೆ 36 ಗ್ಯಾಲರಿಗಳಲ್ಲಿ ಎಲ್​​ಇಡಿ ಪರದೆಗಳನ್ನು ಅಳವಡಿಸಲಾಗಿದೆ. ವಿಐಪಿಗಳಿಗಾಗಿಯೇ ನಾಲ್ಕು ಗ್ಯಾಲರಿಗಳನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದೆ.

ಪ್ರಮಾಣ ವಚನ ಸ್ವೀಕರಿಸಿದ 24 ಶಾಸಕರ ಪಟ್ಟಿ:

  • ಪವನ್ ಕಲ್ಯಾಣ, ನಾರಾ ಲೋಕೇಶ್, ಅಚ್ಚೆನ್ನಾಯ್ಡು
  • ಕೊಲ್ಲು ರವೀಂದ್ರ, ನಾದೆಂದ್ಲ ಮನೋಹರ್
  • ಪಿ. ನಾರಾಯಣ, ವಂಗಲಪುಡಿ ಅನಿತಾ
  • ಸತ್ಯಕುಮಾರ್ ಯಾದವ್, ನಿಮ್ಮಲಾ ರಾಮನಾಯ್ಡು
  • ಎನ್‌.ಎಂ.ಡಿ. ಫಾರೂಕ್, ಆನಂ ರಾಮನಾರಾಯಣ ರೆಡ್ಡಿ
  • ಪಯ್ಯಾವುಲ ಕೇಶವ್, ಅನಗಣಿ ಸತ್ಯ ಪ್ರಸಾದ್
  • ಕೊಲುಸು ಪಾರ್ಥಸಾರಥಿ, ಬಾಲವೀರಾಂಜನೇಯಸ್ವಾಮಿ
  • ಗೊಟ್ಟಿಪಾಟಿ ರವಿ, ಕಂದುಲ ದುರ್ಗೇಶ್, ಗುಮ್ಮಡಿ ಸಂಧ್ಯಾ ರಾಣಿ
  • ಬಿ.ಸಿ. ಜನಾರ್ದನರೆಡ್ಡಿ, ಟಿ.ಜಿ. ಭರತ್, ಎಸ್.ಸವಿತಾ
  • ವಾಸಮಶೆಟ್ಟಿ ಸುಭಾಷ್, ಕೊಂಡಪಲ್ಲಿ ಶ್ರೀನಿವಾಸ್, ರಾಮಪ್ರಸಾದ್ ರೆಡ್ಡಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಲಕ್ಷಾಂತರ ಟಿಡಿಪಿ, ಬಿಜೆಪಿ ಹಾಗೂ ಜನಸೇನಾ ಕಾರ್ಯಕರ್ತರು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾದರು.

ಇದನ್ನೂ ಓದಿ: ಅಯೋಧ್ಯೆಯಲ್ಲಿ ಬಿಜೆಪಿ ಸೋಲಿನ ರಹಸ್ಯ ಬಿಚ್ಚಿಟ್ಟ ರಾಹುಲ್ ಗಾಂಧಿ: ಅವರು ಹೇಳಿದ ಆ ಕಾರಣಗಳೇನು? - WHY DEFEAT BJP IN AYODHYA

Last Updated : Jun 12, 2024, 2:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.